ಬಾಲಿವುಡ್ ಸುಂದರಿ ಸೋನಾಕ್ಷಿ ಸಿನ್ಹಾ ಬರ್ತ್‌ಡೇ: ರಾಮಾಯಣದಿಂದ ವಿವಾದಕ್ಕೀಡಾದ ದಬಾಂಗ್ ಬೆಡಗಿ
ಸೋನಾಕ್ಷಿ ಸಿನ್ಹಾ ಹಲವು ಬಾರಿ ವಿವಾದಗಳಲ್ಲಿ ಸಿಲುಕಿದ್ದಾರೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಅವರು ಕೌನ್ ಬನೇಗಾ ಕರೋಡ್ಪತಿಯಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳಿದಾಗ ಉತ್ತರಿಸಲು ಸಾಧ್ಯವಾಗದೆ ತಬ್ಬಿಬ್ಬಾಗಿದ್ದರು. ಇದರ ಬಳಿಕ ಮತ್ತಷ್ಟು ವಿವಾದಕ್ಕೆ ಗುರಿಯಾಗಿದ್ದಾರೆ.
ಕೌನ್ ಬನೇಗಾ ಕರೋಡ್ ಪತಿಯಲ್ಲಿ ಹಾಟ್ ಸೀಟ್ ಮೇಲೆ ಕುಳಿತಿದ್ದ ಸೋನಾಕ್ಷಿ ಸಿನ್ಹಾಗೆ ‘ರಾಮಾಯಣದ ಪ್ರಕಾರ ಹನುಮಂತ ಯಾರಿಗಾಗಿ ಸಂಜೀವನಿ ಪರ್ವತವನ್ನು ತಂದಿದ್ದಾನೆ?’ ಎಂದು ಪ್ರಶ್ನೆ ಕೇಳಲಾಗಿತ್ತು. ಆದರೆ ಉತ್ತರದ ಬಗ್ಗೆ ಸೋನಾಕ್ಷಿಗೆ ಅನುಮಾನವಿತ್ತು.
ಈ ಬಗ್ಗೆ ಹೆಚ್ಚಾಗಿ ವಿವಾದಕ್ಕೆ ಒಳಗಾಗಲು ಕಾರಣವೂ ಇತ್ತು. ಸೋನಾಕ್ಷಿ ಮನೆಯ ಹೆಸರು ರಾಮಾಯಣ. ಅವರ ತಂದೆ ಶತ್ರುಘ್ನ ಸಿನ್ಹಾ, ತಮ್ಮ ಇಬರಬು ಮಕ್ಕಳಿಗೆ ( ಸೋನಾಕ್ಷಿ ಸಹೋದರರು) ಲವ್ ಮತ್ತು ಕುಶ್ ಎಂದು ಹೆಸರಿಟ್ಟಿದ್ದಾರೆ. ಆದರೆ ರಾಮಾಯಣಕ್ಕೆ ಸಂಬಂಧಿಸಿದ ಈ ಪ್ರಶ್ನೆಯನ್ನು ಸೋನಾಕ್ಷಿ ಹೇಳಲು ಸಾಧ್ಯವಾಗಲಿಲ್ಲ.
ಆಗ ಸೋನಾಕ್ಷಿ ಸಿನ್ಹಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೀಮ್ಸ್ ಕೂಡ ಮಾಡಲಾಗಿತ್ತು. ಅದೇ ಸಮಯದಲ್ಲಿ, ಸಾಮಾನ್ಯ ಜನರು ಮಾತ್ರವಲ್ಲದೆ ಶಕ್ತಿಮಾನ್ ಮತ್ತು ಮಹಾಭಾರತದಲ್ಲಿ ಅಭಿನಯಿಸಿದ್ದ ಮುಖೇಶ್ ಖನ್ನಾ ಕೂಡ ಅವರ ಸೋನಾಕ್ಷಿ ಹೆಸರನ್ನು ತೆಗೆದುಕೊಂಡು ಗೇಲಿ ಮಾಡಿದರು.
ಸೋನಾಕ್ಷಿ ಬಹಳ ದಿನಗಳಿಂದ ಹಿರಿತೆರೆಯಿಂದ ದೂರ ಉಳಿದಿದ್ದರು. ಆದರೆ ಮುಂಬರುವ ದಿನಗಳಲ್ಲಿ ಅವರು ಕೇವಲ ಚಿತ್ರಗಳಲ್ಲದೇ OTT ಗೂ ಕಾಲಿಡಲಿದ್ದಾರೆ. ಅವರು ಕಾಕುಡ, ಡಬಲ್ ಎಕ್ಸ್‌ಎಲ್ ಮತ್ತು ಹೀರಾ ಮಂಡಿ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರು ಫಾಲೇಜ್ ವೆಬ್ ಸಿರೀಸ್‌ನೊಂದಿಗೆ ಡಿಜಿಟಲ್ ಲೋಕಕ್ಕೂ ಪಾದಾರ್ಪಣೆ ಮಾಡಲಿದ್ದಾರೆ.