ಒಂದು ನಿಮಿಷದಲ್ಲಿ ಅತಿ ಹೆಚ್ಚು ʼಕಿಸ್‌ಕೊಟ್ಟು ವಿಶ್ವದಾಖಲೆʼ ಬರೆದ ಸ್ಟಾರ್‌ ನಟಿ..! 26 ವರ್ಷಗಳ ಜೈಲು ಶಿಕ್ಷೆ..

Sat, 03 Aug 2024-4:00 pm,

2013 ರಲ್ಲಿ ಬಾಲಿವುಡ್ ನಟಿಯೊಬ್ಬರು ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದರು... ಹಾಗಂತ ನೀವು ಯಾವುದೇ ಸಿನಿಮಾದಿಂದ ಅಲ್ಲ, ಬದಲಿಗೆ ಅತೀ ಹೆಚ್ಚು ಕಿಸ್‌ ನೀಡುವ ಮೂಲಕ.. ಮೂಲತಃ ಪಾಕಿಸ್ತಾನದ ನಟಿ ಮಿಂಚಿದ್ದು ಬಾಲಿವುಡ್‌ನಲ್ಲಿ.. ವಿವಾದಗಳಿಂದಲೇ ಈಕೆಯ ಜೀವನ ಅಂತ್ಯವಾಯಿತು..   

ಪಾಕ್‌ ನಟಿ ವೀಣಾ ಮಲಿಕ್ ಅವರು ಬಿಗ್ ಬಾಸ್ 3 ನಲ್ಲಿ ಕಾಣಿಸಿಕೊಂಡ ನಂತರ ಭಾರತದಲ್ಲಿ ಖ್ಯಾತಿಯನ್ನು ಗಳಿಸಿದರು. ಈ ಶೋನಲ್ಲಿ ಅಶ್ಮಿತ್ ಪಟೇಲ್ ಜೊತೆ ಬೋಲ್ಡ್‌ ಆಗಿ ನಡೆದುಕೊಂಡ ಈಕೆಯ ರೀತಿ ರಾತ್ರೋರಾತ್ರಿ ಸ್ಟಾರ್‌ ಆಗುವಂತೆ ಮಾಡಿತು..  

2013 ರಲ್ಲಿ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ - ಅಬ್ ಇಂಡಿಯಾ ಟೊಡೆಗಾ ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ವೀಣಾ ಒಂದು ನಿಮಿಷದ ಅವಧಿಯಲ್ಲಿ ತನ್ನ ಹುಟ್ಟುಹಬ್ಬದಂದು ಗರಿಷ್ಠ ಮುತ್ತುಗಳನ್ನು ಪಡೆದು ದಾಖಲೆ ಬರೆದಳು.   

ಇದಕ್ಕೂ ಮುನ್ನ ವೀಣಾ ತನ್ನ ತಾಯ್ನಾಡಿನಲ್ಲಿ ವಿವಾದವನ್ನು ಎದುರಿಸಿದ್ದರು. 2011 ರಲ್ಲಿ, ಎಫ್‌ಎಚ್‌ಎಂ ಇಂಡಿಯಾ ತನ್ನ ಕವರ್‌ನಲ್ಲಿ ವೀಣಾ ನಗ್ನ ಫೋಟೋ ಹಾಕಿತ್ತು.. ಅಲ್ಲದೆ, ನಟಿಯ ತೋಳಿನ ಮೇಲೆ ಐಎಸ್‌ಐ ಅಕ್ಷರಗಳನ್ನು ಹಚ್ಚೆ ಹಾಕಿಸಿಕೊಂಡಿದ್ದು, ತೀವ್ರ ಟೀಕೆಗೆ ಗುರಿಯಾಗಿತ್ತು.  

2013 ರಲ್ಲಿ ವೀಣಾ ದುಬೈನಲ್ಲಿ ಉದ್ಯಮಿ ಅಸದ್ ಬಶೀರ್ ಖಾನ್ ಕಟ್ಟಕ್ ಅವರನ್ನು ವಿವಾಹವಾದರು. 2018ರಲ್ಲಿ ವಿಚ್ಛೇದನ ಪಡೆದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.   

ವಿಚ್ಛೇದನಕ್ಕೆ ಮೊದಲು, 2014 ರಲ್ಲಿ ಜಿಯೋ ಟಿವಿಯಲ್ಲಿ ವಿವಾಹ ಸಂಪ್ರದಾಯವನ್ನು ಅಣಕಿಸಿದ್ದಕ್ಕಾಗಿ ಕಾನೂನು ಸಮಸ್ಯೆಗಳನ್ನು ಎದುರಿಸಿದರು.  

ಅಲ್ಲದೆ, ಗಿಲ್ಗಿಟ್ ನ್ಯಾಯಾಲಯವು ವೀಣಾ, ಅಸದ್ ಮತ್ತು ಕಾರ್ಯಕ್ರಮದ ನಿರೂಪಕ ಶೈಸ್ತಾ ವಾಹಿದಿ ಅವರಿಗೆ ಧರ್ಮನಿಂದೆ ಅಂತ ದೂರಿ, 26 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link