ಸ್ಟನ್ನಿಂಗ್ ಲುಕ್‌ನಲ್ಲಿ IIFA 2024 ಹೈಪ್ ಹೆಚ್ಚಿಸಿದ ಬಾಲಿವುಡ್ ಬೋಲ್ಡ್ ಬ್ಯೂಟೀಸ್!! ಅನನ್ಯಾ-ಕೃತಿ ಸ್ಟೈಲ್ ಫುಲ್ ವೈರಲ್!
IIFA ಪ್ರಶಸ್ತಿಗಳು ಇಂದಿನಿಂದ ಅಂದರೆ ಸೆಪ್ಟೆಂಬರ್ 27 ರಂದು ಅಬುಧಾಬಿಯಲ್ಲಿ ಪ್ರಾರಂಭವಾಗುತ್ತಿದ್ದು, ಇದಕ್ಕಾಗಿ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು. ಈ ಸಮಾವೇಶದಲ್ಲಿ ಬಾಲಿವುಡ್ ಮತ್ತು ದಕ್ಷಿಣ ಇಂಡಸ್ಟ್ರಿಯ ಹಲವು ದೊಡ್ಡ ತಾರೆಯರು ಭಾಗವಹಿಸಿದ್ದರು.
ಬಾಲಿವುಡ್ ನಟಿಯರಾದ ಅನನ್ಯಾ ಪಾಂಡೆ ಕೆಂಪು ಬಣ್ಣದ ಮತ್ತು ಕೃತಿ ಸನೋನ್ ಕಪ್ಪು ಬಣ್ಣದ ಉಡುಪಿನಲ್ಲಿ ತುಂಬಾ ಗ್ಲಾಮರಸ್ ಆಗಿ ಕಾಣಿಸಿಕೊಂಡು.. IIFA 2024ರ ಹೈಪ್ ಹೆಚ್ಚಿಸಿದ್ದಾರೆ..
ಈ ಪತ್ರಿಕಾಗೋಷ್ಠಿಯಲ್ಲಿ ನಟಿ ಅನನ್ಯಾ ಪಾಂಡೆ ಕೆಂಪು ಬಣ್ಣದ ಆಫ್ ಶೋಲ್ಡರ್ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದರು. ಈ ಕಾಸ್ಯ್ಟೂಮ್‌ನಲ್ಲಿ ಬಾಲಿವುಡ್ ಬೆಡಗಿ ಅನನ್ಯಾ ತುಂಬಾ ಸುಂದರವಾಗಿ ಕಂಗೋಳಿಸಿದ್ದಾರೆ..
ಸದ್ಯ ನಟಿ ಅನನ್ಯ ಅವರ ಲುಕ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಸ್ಟೈಲ್ ನೋಡಿ ಫುಲ್ ಫಿದಾ ಆಗಿದ್ದಾರೆ..
ಜೊತೆ ಜೊತೆಗೆ ಬಾಲಿವುಡ್‌ನ ಮತ್ತೊಬ್ಬ ಬೋಲ್ಡ್ ಬ್ಯೂಟಿ ಕೃತಿ ಸಾನೋನ್ ಸಹ ಈ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ..
ಕೃತಿ ಸನೋನ್ ಅವರ ಲುಕ್ ಸಹ ಸದ್ಯ ಸಖತ್ ಸೌಂಡ್ ಮಾಡುತ್ತಿದ್ದು, ನಟಿ ಫ್ಯಾಷನ್ ಐಕಾನ್ ರೀತಿಯಲ್ಲಿ ಡ್ರೆಸ್ಸಿಂಗ್ ಮಾಡಿ IIFA 2024ರ ಸೊಬಗು ಹೆಚ್ಚಿದ್ದಾರೆ..
ಸೋಷಿಯಲ್ ಮಿಡಿಯಾದಲ್ಲಿ ಕೃತಿ ಸನೋನ್ ಅವರ ಲುಕ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ನಟಿಯ ಸ್ಟೈಲ್‌ಗೆ ಫ್ಯಾನ್ಸ್ ಕಳೆದು ಹೋಗಿದ್ದಾರೆ..