ಗೋಲ್ಡ್ ಡ್ರೆಸ್ ಧರಿಸಿ ಬೋಲ್ಡ್ ಆಗಿ ಪೋಸ್ ಕೊಟ್ಟ ನಟಿ..! ಸೌಂದರ್ಯಕ್ಕೆ ಪ್ರತಿರೂಪವೇ ಈ ಬಾಲಿವುಡ್ ಬ್ಯೂಟಿ
ಸಾಮಾನ್ಯವಾಗಿ ನಟಿಯರು ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಫೋಟೋಸ್ ಶೇರ್ ಮಾಡಿಕೊಳ್ಳುತ್ತಾ, ಅಭಿಮಾನಿಗಳಿಗೆ ಖುಷಿ ನೀಡುತ್ತಿರುತ್ತಾರೆ. ಅದರಲ್ಲಿ ಅಂತೂ ನಟಿಯರ ಹಾಟ್ ಫೋಟೋಸ್ಗೆ ಪಡ್ಡೆ ಹುಡುಗರು ಮನಸ್ಸು ಬಿಸಾಡುತ್ತಾರೆ. ಇದೀಗ ಬಾಲಿವುಡ್ ಬ್ಯೂಟಿ ಹಂಚಿಕೊಂಡಿರುವ ಫೋಟೋಗಳಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರು ದಿಶಾ ಪಟಾನಿ, ತಮ್ಮ ಹಾಟ್ ಫೋಟೋಸ್ ಅನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಹುಡುಗರ ಹಾರ್ಟ್ಗೆ ಬಲೆ ಬೀಸಿದ್ದಾರೆ.
ನಟಿಯಾರು ಯಾವಾಗಲು ಹೊಸತನವನ್ನು ಹುಡುಕುತ್ತಿರುತ್ತಾರೆ, ನಟಿಯರ ಫ್ಯಾಶನ್ ಸೆನ್ಸ್ ಕಂಡು ಅಭಿಮಾನಿಗಳು ನಟಿಯರನ್ನು ಪಾಲೋ ಮಾಡುವುದುಂಟು, ಇದೇ ಹಾದಿಯಲ್ಲಿರುವ ದಿಶಾ ಪಟಾನಿ ತಮ್ಮ ಡಿಫರೆಂಟ್ ಸ್ಟೈಲ್ನಿಂದ ಹುಡುಗರನ್ನು ತನ್ನತ್ತ ಸೆಳೆದಿದ್ದಾರೆ.
ತಮ್ಮ ವಿಭಿನ್ನವಾದ ಉಡುಪಗಳಿಂದ ಜನರನ್ನು ಆಕರ್ಷಿಸುವ ದಿಶಾ ಪಟಾನಿ ಇದೀಗ ಮತ್ತೊಂದು ಹೊಸ ರೂಪದ ಉಡುಪಿನಿಂದ ಹುಡುಗರನ್ನು ಫಿದಾ ಮಾಡಿದ್ದಾರೆ.
2016ರಲ್ಲಿ ಎಂ. ಎಸ್. ಧೋನಿ ಅನ್ಟೋಲ್ಡ್ ಸ್ಟೋರಿ ಸಿನಿಮಾದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ದಿಶಾ ಪಟಾನಿ, ಈ ಸಿನಿಮಾ ಹಿಟ್ ಆದ ನಂತರ ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಂಡರು.
ನಟಿ ಸಿನಿಮಾಗಳ ಮೂಲಕ ಸದ್ದು ಮಾಡುವುದಕ್ಕಿಂತ ತನ್ನ ಹಾಟ್ ಫೋಟೊಗಳ ಮೂಲಕ ಸದ್ದು ಮಾಡುವುದೇ ಹೆಚ್ಚು. ಈಗ ಕೂಡ ದಿಶಾ ಶೇರ್ ಮಾಡಿಕೊಂಡಿರುವ ಹಾಟ್ ಫೋಟೊಸ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.