Bollywood: ಅನುಷ್ಕಾ ಶರ್ಮಾ ಸೇರಿದಂತೆ ಕ್ರಿಕೆಟಿಗರನ್ನು ಮದುವೆಯಾದ ಬಾಲಿವುಡ್ ನಟಿಯರಿವರು!!
![](https://kannada.cdn.zeenews.com/kannada/sites/default/files/2024/03/26/392232-virat.jpg?im=FitAndFill=(500,286))
ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿಯನ್ನು ಮದುವೆಯಾಗಿದ್ದಾರೆ. ದಂಪತಿಗಳು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿ, ನಂತರ 11 ಡಿಸೆಂಬರ್ 2017 ರಂದು ಇಟಲಿಯಲ್ಲಿ ವಿವಾಹವಾದರು. ಈಗ ಈ ಜೋಡಿ ವಾಮಿಕಾ ಮತ್ತು ಅಕಾಯ್ ಎಂಬ ಇಬ್ಬರು ಮಕ್ಕಳ ಪೋಷಕರು.
![](https://kannada.cdn.zeenews.com/kannada/sites/default/files/2024/03/26/392231-klrahul.jpg?im=FitAndFill=(500,286))
ಸುನಿಲ್ ಶೆಟ್ಟಿ ಅವರ ಪುತ್ರಿ ಮತ್ತು ನಟಿ ಅಥಿಯಾ ಶೆಟ್ಟಿ ಕೂಡ ಭಾರತೀಯ ಕ್ರಿಕೆಟಿಗನನ್ನು ಪ್ರೀತಿಸುತ್ತಿದ್ದರು. ಅಥಿಯಾ 2023 ರಲ್ಲಿ ಕೆಎಲ್ ರಾಹುಲ್ ಅವರನ್ನು ವಿವಾಹವಾದರು.
![](https://kannada.cdn.zeenews.com/kannada/sites/default/files/2024/03/26/392229-yuvarajsingh.jpg?im=FitAndFill=(500,286))
ಗೀತಾ ಬಾಸ್ರಾ ಅವರು 2015 ರಲ್ಲಿ ಭಾರತೀಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರನ್ನು ವಿವಾಹವಾದರು.. ಇಂದು ದಂಪತಿಗಳು ತಮ್ಮ ಇಬ್ಬರು ಮಕ್ಕಳೊಂದಿಗೆ ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.
ನಟಿ ಹೇಜಲ್ ಕೀಚ್ 30 ನವೆಂಬರ್ 2016 ರಂದು ಯುವರಾಜ್ ಸಿಂಗ್ ಅವರನ್ನು ವಿವಾಹವಾದರು. ಸಿಖ್ ಸಂಪ್ರದಾಯದಂತೆ ದಂಪತಿಗಳು ವಿವಾಹವಾದರು. ಹೇಜಲ್ ಮತ್ತು ಯುವರಾಜ್ ತಮ್ಮ ಇಬ್ಬರು ಮಕ್ಕಳೊಂದಿಗೆ ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.
ಒಂದು ಕಾಲದಲ್ಲಿ ಚಿತ್ರರಂಗದ ಟಾಪ್ ನಟಿಯಾಗಿದ್ದ ಶರ್ಮಿಳಾ ಠಾಗೋರ್ ಕೂಡ ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಅವರನ್ನು ಪ್ರೀತಿಸುತ್ತಿದ್ದರು. ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ, ಇಬ್ಬರೂ 1968 ರಲ್ಲಿ ವಿವಾಹವಾದರು.
ಸಾಗರಿಕಾ ಘಾಟ್ಗೆ ಅವರು ಕ್ರಿಕೆಟಿಗ ಜಹೀರ್ ಖಾನ್ ಅವರನ್ನು 23 ನವೆಂಬರ್ 2017 ರಂದು ವಿವಾಹವಾದರು. ಇಬ್ಬರ ಮದುವೆ ತುಂಬಾ ಸರಳವಾಗಿತ್ತು.
ಸರ್ಬಿಯಾದ ಮಾಡೆಲ್ ಹಾಗೂ ನಟಿ ನತಾಶಾ ಸ್ಟಾಂಕೋವಿಕ್ ಕೂಡ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ರನ್ನು ತನ್ನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ನಟಿ ಹಾರ್ದಿಕ್ ಪಾಂಡ್ಯ ಅವರನ್ನು 31 ಮೇ 2020 ರಂದು ವಿವಾಹವಾದರು. ಇವರಿಗೆ ಒಬ್ಬ ಮಗನೂ ಇದ್ದಾನೆ.