ವಿದೇಶಗಳಲ್ಲಿ ಹಾಲಿಡೇ ಮೂಡ್ ನಲ್ಲಿರುವ ಬಾಲಿವುಡ್ ತಾರೆಯರು.. !

Tue, 05 Jul 2022-3:59 pm,

ಮಲೈಕಾ ಅರೋರಾ-ಅರ್ಜುನ್ ಕಪೂರ್: ಇತ್ತೀಚೆಗೆ, ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಪ್ಯಾರಿಸ್ ನಲ್ಲಿ ತಮ್ಮ ಪ್ರೇಮಗೀತೆ ಹಾಡಿ ಬಂದಿದ್ದಾರೆ.  ಇಬ್ಬರೂ ಇಲ್ಲಿ ಒಂದು ವಾರದ ರಜೆಯನ್ನು ಕಳೆದಿದ್ದಾರೆ. ಅಲ್ಲಿ ತೆಗೆಸಿಕೊಂಡಿರುವ ಅನೇಕ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿವೆ.   

ಸೋನಮ್ ಕಪೂರ್-ಆನಂದ್ ಅಹುಜಾ: ಸೋನಮ್ ಕಪೂರ್ ಗರ್ಭಿಣಿಯಾಗಿದ್ದು, ಅವರು ತಾಯ್ತನದ ಅವಧಿಯನ್ನು ಮುಕ್ತವಾಗಿ ಆನಂದಿಸುತ್ತಿದ್ದಾರೆ. ಪ್ರಸ್ತುತ, ಅವರು ಲಂಡನ್‌ನ ಮನೆಯಲ್ಲಿದ್ದಾರೆ.   

ಕರೀನಾ ಕಪೂರ್ ಕುಟುಂಬ: ಕರೀನಾ ಕಪೂರ್ ಕೂಡ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿ ರಜಾದಿನವನ್ನು ಆಚರಿಸುತ್ತಿದ್ದಾರೆ. ಅಲ್ಲಿ ಅವರೂ ಕುಟುಂಬದೊಂದಿಗೆ ಕಳೆದಿರುವ ಫೋಟೋಗಳು ವೈರಲ್ ಆಗಿವೆ. 

ರಿದಿಮಾ ಕಪೂರ್: ನೀತು ಕಪೂರ್ ಕೂಡ ಲಂಡನ್‌ಗೆ ತೆರಳಿದ್ದಾರೆ.  ಅವರು ಪ್ರಸ್ತುತ ಲಂಡನ್‌ನಲ್ಲಿ ರಜೆಯಲ್ಲಿರುವ ಮಗಳು ರಿದಿಮಾ ಕಪೂರ್ ಅವರನ್ನು ಭೇಟಿಯಾಗಿದಾರೆ. ಇಡೀ ಕಪೂರ್ ಕುಟುಂಬ ಸದ್ಯ ಲಂಡನ್ ನಲ್ಲಿದೆ. 

ಸಾರಾ ಅಲಿ ಖಾನ್: ಜೂನ್‌ನಲ್ಲಿ, ಸಾರಾ ಕೂಡ ಲಂಡನ್‌ನಲ್ಲಿ ತನ್ನ ರಜಾದಿನವನ್ನು ಆನಂದಿಸಿದ್ದಾರೆ. ಸಾರಾಗೆ ಪ್ರಯಾಣ ಎಂದರೆ ಬಹಳ ಪ್ರೀತಿ. ಈ ಕಾರಣದಿಂದಾಗಿ ಸಾರಾ ಶೂಟಿಂಗ್ ಗೆ ಬಿಡುವು ಸಿಕ್ಕ ತಕ್ಷಣ ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೊರಡುತ್ತಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link