ಟಾಯ್ಲೆಟ್ ತೊಳೆಯಬೇಕೆಂಬ ಒಂದು ಕಾರಣಕ್ಕೆ... ಈ ಸ್ಟಾರ್ ನಟನ ಪತ್ನಿ 4 ಬಾರಿ ಬಿಗ್ ಬಾಸ್ ಆಫರ್ ರಿಜೆಕ್ಟ್ ಮಾಡಿದ್ದಾರಂತೆ!
ನಟ ಗೋವಿಂದ 90ರ ದಶಕದ ಪ್ರಖ್ಯಾತ ಹೀರೋ. ಗೋವಿಂದ ಪತ್ನಿ ಸುನೀತಾ ಅಹುಜಾ.
ಗೋವಿಂದ ಪತ್ನಿ ಸುನೀತಾ ಅಹುಜಾ ಪಾಡ್‌ಕಾಸ್ಟ್‌ನಲ್ಲಿ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಆಫರ್ ಅನ್ನು ಹಲವಾರು ಬಾರಿ ರಿಜೆಕ್ಟ್ ಮಾಡಿದ್ದಾಗಿ ಬಹಿರಂಗಪಡಿಸಿದ್ದಾರೆ.
ಪ್ರತಿ ಬಾರಿ ಬಿಗ್ ಬಾಸ್ ಆಫರ್ ತಿರಸ್ಕರಿಸಿದ್ದೇನೆ ಎಂದಿದ್ದಾರೆ. ಇದರ ಹಿಂದಿನ ಕಾರಣವನ್ನೂ ಸಹ ಸುನಿತಾ ತಿಳಿಸಿದ್ದಾರೆ.
ಗೋವಿಂದ ಸದ್ಯ ಚಿತ್ರರಂಗದಿಂದ ಸಂಪೂರ್ಣವಾಗಿ ಕಣ್ಮರೆಯಾಗಿದ್ದಾರೆ. ಗೋವಿಂದ ಅವರ ಪತ್ನಿ ಸುನೀತಾ ಅಹುಜಾ ನಾಲ್ಕು ಬಾರಿ ಬಿಗ್ ಬಾಸ್ ಆಫರ್ ತಿರಸ್ಕರಿಸಿದ್ದಾಗಿ ಹೇಳಿದ್ದಾರೆ.
ಕಳೆದ 4 ವರ್ಷಗಳಿಂದ ನನಗೆ 'ಬಿಗ್ ಬಾಸ್'ಗೆ ಬರಲು ಆಫರ್‌ಗಳು ಬರುತ್ತಿವೆ ಎಂದಿದ್ದಾರೆ.
ಪ್ರತಿ ಬಾರಿ ನಾನು ಟಾಯ್ಲೆಟ್ ಕ್ಲೀನ್ ಮಾಡಬೇಕೆಂಬ ಒಂದೇ ಕಾರಣಕ್ಕೆ ಅವಕಾಶವನ್ನು ರಿಜೆಕ್ಟ್ ಮಾಡಿದ್ದೇನೆ ಎಂದರು.