ಒಂದು ಕಾಲದಲ್ಲಿ ಸಿನಿ ಇಂಡಸ್ಟ್ರಿ ನಡುಗಿಸಿದ್ದ ಬ್ಯೂಟಿ.. ಆರು ವರ್ಷಗಳ ನಂತರ ರೀ ಎಂಟ್ರಿ..! ಆಟ ಇವಾಗ ಶುರು

Sat, 25 May 2024-6:36 pm,

ಸ್ಟಾರ್ ನಾಯಕಿ ಪ್ರೀತಿ ಜಿಂಟಾ ಶೀಘ್ರದಲ್ಲೇ 'ಲಾಹೋರ್ 1947' (Lahore 1947) ಚಿತ್ರದಲ್ಲಿ ಬಾಲಿವುಡ್ ನಟ ಸನ್ನಿ ಡಿಯೋಲ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಅಮೀರ್ ಖಾನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಕಾಣಿಸಿಕೊಳ್ಳಲಿದ್ದಾರೆ.  

ಈ ಚಿತ್ರದ ಮೂಲಕ ಪ್ರೀತಿ 6 ವರ್ಷಗಳ ನಂತರ ಬಾಲಿವುಡ್‌ಗೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಅಲ್ಲದೆ, ಇದೇ ವೇಳೆ ಕಳೆದ ಕೆಲವು ವರ್ಷಗಳಿಂದ ಇಂಡಸ್ಟ್ರಿಯಿಂದ ಬ್ರೇಕ್ ತೆಗೆದುಕೊಂಡ ಕಾರಣವನ್ನು ಪ್ರೀತಿ ಬಹಿರಂಗಪಡಿಸಿದ್ದಾರೆ.  

ಸಂದರ್ಶನವೊಂದರಲ್ಲಿ ಪ್ರೀತಿ, ಕಳೆದ 6 ವರ್ಷಗಳಿಂದ ತನ್ನ ವ್ಯವಹಾರಕ್ಕೆ ಸಮಯವನ್ನು ಮೀಸಲಿಟ್ಟಿದ್ದು, ಕುಟುಂಬದೊಂದಿಗೆ ಸಮಯ ಕಳೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.  

ನನಗೆ ಸಿನಿಮಾದಲ್ಲಿ ನಟಿಸುವ ಆಸೆ ಇರಲಿಲ್ಲ. ನಾನು ನನ್ನ ವ್ಯವಹಾರದ ಮೇಲೆ ಗಮನಹರಿಸಿದೆ. ನಾನು ನನ್ನ ವೈಯಕ್ತಿಕ ಜೀವನದತ್ತ ಗಮನ ಹರಿಸಲು ಬಯಸುತ್ತೇನೆ ಎಂದು ನಟಿ ಹೇಳಿಕೊಂಡಿದ್ದಾರೆ.  

ಅಲ್ಲದೆ, ಇದೇ ವೇಳೆ ನಟಿ ಪ್ರೀತಿ, ತಮ್ಮ ವೃತ್ತಿಜೀವನದ ಅವಧಿಯಲ್ಲಿ ತಾನು ಇಂಡಸ್ಟ್ರಿಯಲ್ಲಿ ಯಾವುದೇ ನಟನ ಜೊತೆ ಡೇಟಿಂಗ್ ಮಾಡಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ.  

'ಲಾಹೋರ್ 1947' ನ ಅಧಿಕೃತ ಬಿಡುಗಡೆ ದಿನಾಂಕ ಶೀಘ್ರದಲ್ಲೇ ಘೋಷಣೆಯಾಗಲಿದೆ. ಚಿತ್ರವು 2025 ರ ಗಣರಾಜ್ಯೋತ್ಸವದಂದು ಬಿಡುಗಡೆಯಾಗುವ ಸಾಧ್ಯತೆಯಿದೆ.   

ಸುಮಾರು 6 ವರ್ಷಗಳ ನಂತರ ಪ್ರೀತಿ ಜಿಂಟಾ ಅವರನ್ನು ದೊಡ್ಡ ಪರದೆಯ ಮೇಲೆ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link