ರಾಜಮನೆತನ, ಮೂವರು ನಟರು, ಒಬ್ಬ ಕ್ರಿಕೆಟಿಗನ ಜೊತೆ ಸಂಬಂಧ, ಈ ನಟಿಯ ಬದುಕು ಹಾಳಾಗಿದ್ದು ಆ ವಿಡಿಯೋದಿಂದ..!
ರಿಯಾ ಸೇನ್ ಚಿತ್ರರಂಗದಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಾಗ ಇಂಡಿಯನ್ ಯುವ ಐಕಾನ್ ಎಂದು ಖ್ಯಾತಿ ಪಡೆದಿದ್ದರು. ಆದರೆ ಒಂದೇ ಒಂದು ವೀಡಿಯೊ ಅವರ ವೃತ್ತಿಜೀವನವನ್ನೇ ಹಾಳುಮಾಡಿತು. ಈಗ ಚಲನಚಿತ್ರಗಳಲ್ಲಿ ಮತ್ತು ಟಿವಿಯಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ರಿಯಾ ಸೇನ್ (Riya Sen) ಬಾಲಕಲಾವಿದೆಯಾಗಿ ಸಿನಿರಂಗದಲ್ಲಿ ವೃತ್ತಿಜೀವನ ಪ್ರಾರಂಭಿಸಿದರು. ತದನಂತರ ನಾಯಕಿಯಾಗಿ ಅನೇಕ ಸೂಪರ್‌ಹಿಟ್ ಚಲನಚಿತ್ರಗಳನ್ನು ನೀಡಿದರು. ಬಾಲಿವುಡ್ ಅಷ್ಟೇ ಅಲ್ಲದೆ, ಬಂಗಾಳಿ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದರು. ನಟಿಗೆ ಈಗ 43 ವರ್ಷ, ಆದರೆ ಇಂದಿಗೂ ತನ್ನ ಸೌಂದರ್ಯದಿಂದ ಎಲ್ಲರನ್ನು ಮೋಡಿ ಮಾಡುತ್ತಿದ್ದಾರೆ..
ನಟಿ ರಿಯಾ ಸೇನ್ ಅವರು 1998 ರಲ್ಲಿ 17 ನೇ ವಯಸ್ಸಿನಲ್ಲಿ ಫಲ್ಗುಣಿ ಪಾಠಕ್ ಅವರ ಸಂಗೀತ ವೀಡಿಯೊ 'ಯಾದ್ ಪಿಯಾ ಕಿ ಆನೆ ಲಗೀ' ನಲ್ಲಿ ಕಾಣಿಸಿಕೊಂಡರು. ಅದಕ್ಕಿಂತ ಮುಂಚೆಯೇ ಐದು ವರ್ಷದವರಿದ್ದಾಗ, ತನ್ನ ಸ್ವಂತ ತಾಯಿಗೆ ಮಗಳಾಗಿ ಮೊದಲ ಬಾರಿಗೆ ತೆರೆಯ ಮೇಲೆ ನಟಿಸಿದರು.
1991 ರಲ್ಲಿ, ಅವರು 'ವಿಷಕನ್ಯಾ' ಚಿತ್ರದಲ್ಲಿ ಬಾಲ ನಟಿಯಾಗಿ ಸಿನಿ ಜರ್ನಿ ಪ್ರಾರಂಭಿಸಿದರು.. 2001 ರಲ್ಲಿ 'ಸ್ಟೈಲ್' ಸಿನಿಮಾದ ಮೂಲಕ ನಾಯಕಿಯಾಗಿ ಹಿಟ್ ಪಡೆದರು.. ಅವರ ಕೆಲವು ಜನಪ್ರಿಯ ಚಿತ್ರಗಳಲ್ಲಿ 'ಝಂಕಾರ್ ಬೀಟ್ಸ್' (2003), ಮತ್ತು ಮಲಯಾಳಂ ಭಯಾನಕ ಚಿತ್ರ 'ಅನಂತಭದ್ರಂ' (2005) ಸೇರಿವೆ.
ರಿಯಾ ಸೇನ್ ರಾಜಮನೆತನಕ್ಕೆ ಸೇರಿದವರು ಎಂಬುದು ಅನೇಕರಿಗೆ ತಿಳಿದಿಲ್ಲ. ಈಕೆಯ ತಂದೆ ಭರತ್ ದೇವ್ ವರ್ಮಾ ತ್ರಿಪುರಾದ ರಾಜಮನೆತನದಿಂದ ಬಂದವರು. ಅವರು ಕೂಚ್ ಬೆಹಾರ್‌ನ ರಾಜಕುಮಾರಿ ಇಳಾ ದೇವಿಯ ಮಗ ಮತ್ತು ಜೈಪುರದ ಮಹಾರಾಣಿ ಗಾಯತ್ರಿ ದೇವಿಯ ಸೋದರಳಿಯ. ಅಲ್ಲದೆ, ರಿಯಾ ತಾಯಿ ಮೂನ್ ಮೂನ್ ಸೇನ್ ಮತ್ತು ಅಜ್ಜಿ ಸುಚಿತ್ರಾ ಸೇನ್ ಹಿರಿಯ ನಟಿಯರು. ಅವರ ಸಹೋದರಿ ರೈಮಾ ಸೇನ್ ಕೂಡ ನಟಿ.
ಸಿನಿರಂಗದಲ್ಲಿ ಸ್ಟಾರ್ ಪಡೆದು ಮಿಂಚುತ್ತಿದ್ದ ಸಮಯದಲ್ಲಿ ರಿಯಾ ಸೇನ್ ಅವರ ವೈಯಕ್ತಿಕ ಜೀವನವೂ ಹೆಚ್ಚು ಚರ್ಚಗೆ ಕಾರಣವಾಗಿತ್ತು. ನಟಿ ಅಕ್ಷಯ್ ಖನ್ನಾ ಮತ್ತು ಬರಹಗಾರ ಸಲ್ಮಾನ್ ರಶ್ದಿ ಅವರೊಂದಿಗೆ ಸಂಬಂಧ ಹೊಂದಿದ್ದರು ಅಂತ ಹೇಳಲಾಗಿತ್ತು ಅಲ್ಲದೆ, ಭಾರತದ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಜೊತೆಗೆ ನಟಿಯ ಹೆಸರು ತಳುಕು ಹಾಕಿಕೊಂಡಿತ್ತು.
ನಟ ಅಶ್ಮಿತ್ ಪಟೇಲ್ ಅವರೊಂದಿಗಿನ ಉತ್ತಮ ಸಂಬಂಧ ಹೊಂದಿದ್ದ ನಟಿಯ ಎಂಎಂಎಸ್ (Riya Sen mms) ಸೋರಿಕೆಯಾಗಿತ್ತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೆ, ನಟಿ ಉದ್ದೇಶಪೂರ್ವಕವಾಗಿ ವಿಡಿಯೋ ಲೀಕ್ ಮಾಡಿದ್ದಾರೆ ಎಂದು ಹಲವರು ಆರೋಪಿಸಿದ್ದರು. ಇದು ರಿಯಾ ಸೇನ್ ಅವರ ವೃತ್ತಿಜೀವನದಲ್ಲಿ ತೀವ್ರ ಕುಸಿತಕ್ಕೆ ಕಾರಣವಾಯಿತು.