ಕ್ರಿಕೆಟಿಗರನ್ನು ಮದುವೆಯಾದ ನಂತರ ನಟನೆಯಿಂದ ದೂರ ಉಳಿದ ಬಾಲಿವುಡ್’ನ ಖ್ಯಾತ ನಟಿಯರು
ಈ ಪಟ್ಟಿಯ ಮೊದಲ ಹೆಸರು ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್. ರಿಜಿಸ್ಟರ್ ಮದುವೆಯಾದ ಬಳಿಕ ಇತ್ತೀಚೆಗೆ ಪ್ರಸಿದ್ಧ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ ಅವರ ಜೊತೆ ಮತ್ತೊಮ್ಮೆ ಹಿಂದೂ-ಕ್ರಿಶ್ಚಿಯನ್ ಧರ್ಮದ ಪೂರ್ಣ ಪದ್ಧತಿಯೊಂದಿಗೆ ವಿವಾಹವಾದರು. ನತಾಶಾ ತನ್ನ ಸಿನಿ ವೃತ್ತಿಜೀವನವನ್ನು 'ಸತ್ಯಾಗ್ರಹ' ಸಿನಿಮಾದೊಂದಿಗೆ ಪ್ರಾರಂಭಿಸಿದರು. ಆದರೆ ಹಾರ್ದಿಕ್ ಅವನನ್ನು ಮದುವೆಯಾದ ನಂತರ, ನತಾಶಾ ನಟನೆಗೆ ಗುಡ್ ಬೈ ಹೇಳಿದ್ದಾರೆ.
ಈ ಪಟ್ಟಿಯಲ್ಲಿ 'ಚಕ್ ದೆ ಇಂಡಿಯಾ' ಖ್ಯಾತಿಯ ನಟಿ ಸಾಗರಿಕಾ ಹೆಸರನ್ನು ಸಹ ಸೇರಿಸಲಾಗಿದೆ. ಸಾಗರಿಕಾ 2017 ರಲ್ಲಿ ಕ್ರಿಕೆಟಿಗ ಜಹೀರ್ ಖಾನ್ ಅವರನ್ನು ವಿವಾಹವಾದರು. ಮದುವೆಗೆ ಮುಂಚಿತವಾಗಿ ನಟಿ ಕೊನೆಯದಾಗಿ 'ಇಂಟಾ' ಚಿತ್ರದಲ್ಲಿ ಕಾಣಿಸಿಕೊಂಡರು. ಆ ಬಳಿಕ ಸಿನಿಮಾ ಕ್ಷೇತ್ರಕ್ಕೆ ಬೈ ಬೈ ಹೇಳಿದಂತಿದೆ
90ರ ದಶಕದ ನಟಿ ಸಂಗೀತ ಬಿಜ್ಲಾನಿ 1996 ರಲ್ಲಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರ ಜೊತೆ ವಿವಾಹವಾದರು. ಅದೇ ವರ್ಷದಲ್ಲಿ ಬಿಡುಗಡೆಯಾದ 'ನಿರ್ಭಯಾ' ಚಿತ್ರದಲ್ಲಿ ನಟಿ ಕೊನೆಯ ಬಾರಿಗೆ ಕಾಣಿಸಿಕೊಂಡರು. ಆದರೆ, ಈ ಇಬ್ಬರೂ ಹೆಚ್ಚು ಕಾಲ ಜೊತೆಯಾಗಿರಲಿಲ್ಲ. ಮದುವೆಯಾದ ಕೆಲವು ವರ್ಷಗಳ ನಂತರ ಅವರಿಬ್ಬರು ದೂರವಾದರು.
ಅನೇಕ ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ ನಟಿ ಗೀತಾ ಬಸ್ರಾ, ಹರ್ಭಜನ್ ಸಿಂಗ್ ಅವರೊಂದಿಗೆ ಪ್ರೇಮ ವಿವಾಹವಾಗಿದ್ದಾರೆ. ಈ ಬಳಿಕ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಿದಂತಿದೆ.
ಕರೀನಾ ಕಪೂರ್ ಮತ್ತು ಸಲ್ಮಾನ್ ಖಾನ್ ಅವರೊಂದಿಗೆ 'ಬಾಡಿಗಾರ್ಡ್' ಚಿತ್ರದಲ್ಲಿ ಕೆಲಸ ಮಾಡಿದ ಹೇಜಲ್ ಕೀಚ್, ಸ್ಟಾರ್ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ವಿವಾಹವಾದರು. ಮದುವೆಯ ನಂತರ ಯಾವುದೇ ಚಿತ್ರದಲ್ಲಿ ಹೇಜಲ್ ಕೀಚ್ ಕಾಣಿಸಿಕೊಂಡಿಲ್ಲ.