ಒಂದೇ ಸಿನಿಮಾ.. 30 ಚುಂಬನದ ದೃಶ್ಯಗಳು..! ಕಿಸ್‌ ಕಿಂಗ್‌ ಇಮ್ರಾನ್ ಹಶ್ಮಿಗೆ ಟಕ್ಕರ್‌ ಕೊಟ್ಟ ನಟ ಇವರು!!

Wed, 07 Aug 2024-8:03 pm,

ಇತ್ತೀಚೆಗಿನ ಸಿನಿಮಾಗಳನ್ನು ನೋಡುವುದಾದರೇ ಕನಿಷ್ಠ ಒಂದು ಚುಂಬನದ ದೃಶ್ಯವನ್ನು ಹೊಂದಿರುವುದು ಒಂದು ರೀತಿಯ ವಾಡಿಕೆ.. ಲಿಪ್ ಕಿಸ್ ಇಲ್ಲದೆ ಮೇಕರ್ ಗಳು ಸಿನಿಮಾ ಮಾಡುವುದಿಲ್ಲ ಅದರಲ್ಲೂ ಬಾಲಿವುಡ್ ನಲ್ಲಿ ಕಿಸ್ ಸೀನ್ ಇಲ್ಲದ ಸಿನಿಮಾ ಇಲ್ಲ. ಒಟ್ಟಾರೆಯಾಗಿ ಸಿನಿಮಾ ಎಂದರೇ ಕಿಸ್‌, ರೋಮ್ಯಾನ್ಸ್‌ ಎಂಬಂತಾಗಿದೆ..   

ಆದರೆ ಪ್ರತಿ ಸಿನಿಮಾದಲ್ಲೂ ಇವು ಇರಬಾರದು.. ಅಷ್ಟೇ ಅಲ್ಲ ಸಿನಿಮಾದಲ್ಲಿ ಇಷ್ಟು ಕಿಸ್ಸಿಂಗ್ ಸೀನ್ ಇರಲೇಬೇಕೆಂಬ ನಿಯಮವಿಲ್ಲ. ಸಿನಿಮಾಗೆ ತಕ್ಕಂತೆ, ಸೀನ್ ಗೆ ತಕ್ಕಂತೆ ಕಿಸ್ ಸೀನ್ ಹಾಕುತ್ತಾರೆ ಮೇಕರ್ ಗಳು.   

ಆದರೆ ಈ ಕಿಸ್‌ಗಳ ವಿಷಯದಲ್ಲಿ ಇಮ್ರಾನ್ ಹಶ್ಮಿ ಬಾಲಿವುಡ್‌ನ ಲಿಪ್ ಕಿಸ್ ಕಿಂಗ್ ಎಂದು ಕರೆಯುತ್ತಾರೆ. ಈ ನಿಟ್ಟಿನಲ್ಲಿ ಇಮ್ರಾನ್ ಹಶ್ಮಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಭಾವಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಅವರು ನಟಿಸಿರುವ ಮರ್ಡರ್ ಸಿನಿಮಾದಲ್ಲಿ ಲಿಪ್ ಕಿಸ್ ದೃಶ್ಯಗಳೇ ತುಂಬಿವೆ. ಆದರೆ ಇದನ್ನು ಮೀರಿದ ಸಿನಿಮಾವೊಂದು ಬಾಲಿವುಡ್ ನಲ್ಲಿದೆ.   

ಹೌದು..ಮರ್ಡರ್ ಸಿನಿಮಾಕ್ಕಿಂತ ಕಿಸ್ ಸೀನ್..ಇಮ್ರಾನ್ ಗೆ ಟಕ್ಕರ್‌ ಕೊಡೋ ಹೀರೋ ಇದ್ದಾನೆ ಅಂದ್ರೆ ನಂಬ್ತೀರಾ..? ಇದು ಬರೀ ಚಿತ್ರವಲ್ಲ.. ಬಾಲಿವುಡ್ ಹಾರರ್ ಥ್ರಿಲ್ಲರ್ ಚಿತ್ರ 3G ಇದರಲ್ಲಿ ನಿಖರವಾಗಿ 30 ಲಿಪ್ ಕಿಸ್‌ಗಳಿವೆ. ಈ ಸಿನಿಮಾದಲ್ಲಿ ನೀಲ್ ನಿತಿನ್ ಮುಖೇಶ್ ನಾಯಕನಾಗಿ ನಟಿಸಿದ್ದು, ಸೋನಾಲ್ ಚೌಹಾಣ್ ಜೋಡಿಯಾಗಿ ನಟಿಸಿದ್ದಾರೆ.   

2013ರಲ್ಲಿ ಬಾಲಿವುಡ್‌ನಲ್ಲಿ 3ಜಿ ಸಿನಿಮಾ ಬಿಡುಗಡೆಯಾಗಿತ್ತು. ಚಿತ್ರ ಮುಗಿಯುತ್ತಿದ್ದಂತೆ ನೀಲ್ ನಿತಿನ್ ಮುಖೇಶ್ ಮತ್ತು ಸೋನಾಲ್ ಚೌಹಾಣ್ ನಡುವೆ 30 ಲಿಪ್ ಕಿಸ್‌ಗಳ ಸೀನ್‌ನ್ನು ಹಾಕಲಾಗಿತ್ತು.. 3ಜಿ ಸಿನಿಮಾ ಕಿಸ್ಸಿಂಗ್ ನಲ್ಲಿ ಇದುವರೆಗಿನ ಬಾಲಿವುಡ್ ಬಿಡುಗಡೆಗಳ ಎಲ್ಲಾ ದಾಖಲೆಗಳನ್ನು ಮುರಿದಿದೆ. ಇಮ್ರಾನ್ ಹಶ್ಮಿ ಮತ್ತು ಮಲ್ಲಿಕಾ ಶೆರಾವತ್ ಅಭಿನಯದ ರೊಮ್ಯಾಂಟಿಕ್ ಚಿತ್ರ ಮರ್ಡರ್ ಕೂಡ ಕೇವಲ 20 ಚುಂಬನದ ದೃಶ್ಯಗಳನ್ನು ಹೊಂದಿದೆ.   

ಕಿಸ್ ಮತ್ತು‌ ರೋಮ್ಯಾನ್ಸ್‌ನಿಂದ ಸದ್ದು ಮಾಡುತ್ತಿದ್ದ ಈ 3ಜಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸೋತು ಸುಣ್ಣವಾಯಿತು. ಫ್ಯಾಮಿಲಿ ಆಡಿಯನ್ಸ್ ಹೋಗಲಾರದ ಕಾರಣ ಯುವಜನತೆಯಲ್ಲಿ ಕೆಲವರಿಗೆ ಮಾತ್ರ ಈ ಸಿನಿಮಾ ಇಷ್ಟವಾಗಿದೆ ಎನ್ನಬಹುದು.   

ಈ ಚಿತ್ರ ಒಟ್ಟು 5.9 ಕೋಟಿ ಕಲೆಕ್ಷನ್ ಮಾಡಿದೆ. 3ಜಿ ಚಿತ್ರದಲ್ಲಿ ಚುಂಬನದ ದೃಶ್ಯವನ್ನು ಬ್ರೇಕ್ ಮಾಡಲು ಬಾಲಿವುಡ್‌ನಲ್ಲಿ ಕೆಲವು ಪ್ರಯತ್ನಗಳು ನಡೆದಿವೆ. ಆದರೆ ಸಾಧ್ಯವಾಗಿಲ್ಲ. 3G ಗೆ ಪೈಪೋಟಿ ನೀಡಲು ಶುದ್ಧ್ ದೇಸಿ ರೋಮ್ಯಾನ್ಸ್ ಬಿಡುಗಡೆಯಾಯಿತು. ಈ ಚಿತ್ರದಲ್ಲಿ 27 ಚುಂಬನದ ದೃಶ್ಯಗಳಿವೆ. ಹಾಗಾಗಿ 3ಜಿ ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link