ಈತನೇ ಬಾಲಿವುಡ್’ನ `ಮೋಸ್ಟ್ ಫ್ಲಾಪ್` ನಟ…! ನಟಿಸಿದ 180 ಸಿನಿಮಾವೂ ಕಂಪ್ಲೀಟ್ ಫೈಲ್ಯೂರ್
)
ಪ್ಲಾಪ್ ಸಿನಿಮಾಗಳು ಕೇವಲ ಹೊಸಬರನ್ನಷ್ಟೇ ಕಾಡೋದಲ್ಲ, ಎಂತೆಂಥಾ ಸ್ಟಾರ್ ನಟರನ್ನೂ ಸುಸ್ತಾಗಿಸಿದೆ. ಅದೇ ರೀತಿಯಲ್ಲಿ ಓರ್ವ ನಟ ತಾನು ನಟಿಸಿದ ಬರೋಬ್ಬರಿ 180 ಸಿನಿಮಾಗಳಲ್ಲಿ ಫೈಲ್ಯೂರ್ ಕಂಡಿದ್ದಾರೆ. ಆ ನಟ ಯಾರು? ಎಂಬುದನ್ನು ಮುಂದೆ ತಿಳಿದುಕೊಳ್ಳೋಣ.
)
ಬಾಲಿವುಡ್’ನ ಈ ನಟ ಬೇರಾರು ಅಲ್ಲ… ಹಿಂದಿ ಸಿನಿರಂಗದಲ್ಲಿ ಖ್ಯಾತಿ ಗಳಿಸಿದ ಮಿಥುನ್ ಚಕ್ರವರ್ತಿ. 80ರ ದಶಕದ ಈ ಸ್ಟಾರ್ ನಟ ತಮ್ಮ ವೃತ್ತಿಜೀವನದಲ್ಲಿ 180 ಫ್ಲಾಪ್ ಚಿತ್ರಗಳನ್ನು ನೀಡಿದ್ದಾರೆ.
)
ತಮ್ಮ ವೃತ್ತಿಜೀವನದಲ್ಲಿ ಸುಮಾರು 270ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಥುನ್ ಚಕ್ರವರ್ತಿ ಕಾಣಿಸಿಕೊಂಡಿದ್ದರೂ ಸಹ ಅದರಲ್ಲಿ 180 ಫ್ಲಾಪ್’ಗಳಾಗಿವೆ.
ಎಷ್ಟೇ ಫ್ಲಾಪ್ ಸಿನಿಮಾ ನೀಡಿದ್ರೂ ಕೂಡ ಬಾಲಿವುಡ್ ಸಿನಿರಂಗದಲ್ಲಿ ಮಿಥುನ ಚಕ್ರವರ್ತಿ ಖ್ಯಾತಿಗೆ ಕುತ್ತುಬಂದಿಲ್ಲ. ಅವರು ಅಭಿನಯಿಸಿದ 50 ಸಿನಿಮಾಗಳು ಹಿಟ್ ಆಗಿವೆ. ಅದರಲ್ಲಿ 3 ಬ್ಲಾಕ್ ಬಸ್ಟರ್, 9 ಸೂಪರ್‌ಹಿಟ್.