Bollywood News : ವಿದೇಶಿ ಪೌರತ್ವ ಹೊಂದಿರುವ ಬಾಲಿವುಡ್ ನಟ ನಟಿಯರಿವರು..!
ಆಲಿಯಾ ಭಟ್ : ಬಾಲಿವುಡ್ ಸ್ಟಾರ್ ಆಗಿರುವ ಆಲಿಯಾ ಭಟ್ ಭಾರತದ ಪ್ರಜೆಯಲ್ಲ. ಇವರು ಬ್ರಿಟಿಷ್ ಪೌರತ್ವವನ್ನು ಹೊಂದಿದ್ದಾರೆ. ಆದರೆ, ಆಲಿಯಾ ಭಟ್ ತಂದೆ ಮಹೇಶ್ ಭಟ್ ಭಾರತೀಯ ಪೌರತ್ವ ಹೊಂದಿದ್ದಾರೆ.
ಜಾಕ್ವೆಲಿನ್ ಫರ್ನಾಂಡಿಸ್ : ಜಾಕ್ವೆಲಿನ್ ಫರ್ನಾಂಡಿಸ್ ಶ್ರೀಲಂಕಾದ ಪ್ರಜೆ. ಇವರು ಹುಟ್ಟಿದ್ದು ಶ್ರೀಲಂಕಾದಲ್ಲಿಯೇ ಅದಕ್ಕಾಗಿಯೇ ಅಲ್ಲಿಯ ಪೌರತ್ವವನ್ನು ಉಳಿಸಿಕೊಂಡಿದ್ದಾರೆ.
ನರ್ಗೀಸ್ ಫಕ್ರಿ : ನರ್ಗೀಸ್ ಫಕ್ರಿ ಅಮೆರಿಕಾದ ಪೌರತ್ವವನ್ನು ಹೊಂದಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಅಮೆರಿಕಾದಲ್ಲಿಯೇ ಆದ್ದರಿಂದ ಇವರು ಅಮೇರಿಕಾ ಪೌರತ್ವ ಹೊಂದಿದ್ದಾರೆ.
ಕತ್ರಿನಾ ಕೈಫ್ : ಕತ್ರಿನಾ ಕೈಫ್ ಬ್ರಿಟನ್ ಪೌರತ್ವ ಪಡೆದಿದ್ದಾರೆ. ಇವರು ಕಾಶ್ಮೀರಿ ಮೂಲದವರು ಅಲ್ಲದೇ ಇವರ ತಾಯಿ ಬ್ರಿಟಿಷ್ ನ್ಯಾಯಾಲಯದಲ್ಲಿ ವಕೀಲರಾಗಿದ್ದರು ಆದ್ದರಿಂದ ಕತ್ರಿನಾ ಭಾರತೀಯ ಪೌರತ್ವ ಹೊಂದಿಲ್ಲ.
ಸನ್ನಿ ಲಿಯೋನ್ : ಸನ್ನಿ ಲಿಯೋನ್ ಪೋಷಕರು ಅಮೆರಿಕಾ ಹಾಗೂ ಪೌರತ್ವ ಹೊಂದಿದ್ದರು. ಆದ್ದರಿಂದ ಇವರು ಕೆನಡಾದ ಪೌರತ್ವ ಹೊಂದಿದ್ದಾರೆ.
ನೋರಾ ಫತೇಹಿ : ನೋರಾ ಫತೇಹಿ ಹುಟ್ಟಿ ಬೆಳೆದಿದ್ದು ಕೆನಡಾದಲ್ಲಿ. ಆದ್ದರಿಂದ ನೋರಾ ಕೆನಡಾದ ಪೌರತ್ವವನ್ನು ಉಳಿಸಿಕೊಂಡಿದ್ದಾರೆ.