ವಯಸ್ಸಲ್ಲಿ 10 ವರ್ಷ ದೊಡ್ಡವ, 2 ಮಕ್ಕಳ ತಂದೆ... `ಮಗಳೇ` ಅಂತ ಬಾಯ್ತುಂಬ ಕರೆದವಳನ್ನೇ 2ನೇ ಮದ್ವೆಯಾದ ಖ್ಯಾತ ಹಿರಿಯ ನಟ!
ಪ್ರೀತಿಗೆ ಕಣ್ಣಿಲ್ಲ... ವಯಸ್ಸಂತು ಇಲ್ಲವೇ ಇಲ್ಲ! ಇತ್ತೀಚಿನ ದಿನಗಳಲ್ಲಂತೂ ವಯಸ್ಸಿನ ಅಂತರವನ್ನೇ ಪರಿಗಣಿಸದೆ ದಾಂಪತ್ಯಕ್ಕೆ ಕಾಲಿಡುವ ಅನೇಕ ಜೋಡಿಗಳನ್ನು ನೋಡಿರಬಹುದು. ಇದಕ್ಕೆ ಹೊರತಾಗಿಲ್ಲ ಬಾಲಿವುಡ್‌ನ ಈ ಜೋಡಿ.
ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಬಾಲಿವುಡ್‌ನ ಜನಪ್ರಿಯ ಜೋಡಿಗಳಲ್ಲಿ ಒಬ್ಬರು. ಇಬ್ಬರ ಕೆಮಿಸ್ಟ್ರಿ ತುಂಬಾ ಚೆನ್ನಾಗಿದೆ. ತಶನ್ ಚಿತ್ರದ ಶೂಟಿಂಗ್ ವೇಳೆ ಈ ಜೋಡಿ ನಡುವೆ ಪ್ರೇಮಾಂಕುರವಾಗಿತ್ತು ಎಂದು ಅನೇಕರು ಹೇಳುತ್ತಾರೆ. ಆದರೆ ಸೆಲೆಬ್ರಿಟಿ ಛಾಯಾಗ್ರಾಹಕ ದಬ್ಬೂ ರತ್ನಾನಿ ಅವರು ಸೈಫ್ ಮತ್ತು ಕರೀನಾ ಲವ್ ಸ್ಟೋರಿ ಬಗ್ಗೆ ಹೊಸ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.
ಕರೀನಾ ಮತ್ತು ಸೈಫ್ ಅವರ ಪ್ರೇಮಕಥೆಯು 2005 ರಲ್ಲಿ ತನ್ನ ಸ್ಟುಡಿಯೋದಿಂದ ಪ್ರಾರಂಭವಾಯಿತು ಎಂದು ಹೇಳಿದ್ದಾರೆ. ದಬ್ಬೂ ರತ್ನಾನಿ ಅವರು ರೆಡ್ಡಿಟ್‌ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ಮಾಡಿದ್ದರು. ಈ ವೇಳೆ ಯೂಸರ್ ಒಬ್ಬರು ಪ್ರಶ್ನೆ ಕೇಳಿದ್ದಕ್ಕೆ ಉತ್ತರಿಸಿದ್ದರು.
ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಹಳೆಯ ಫೋಟೋವನ್ನು ಹಂಚಿಕೊಂಡು, ನೀವು ಕ್ಲಿಕ್ ಮಾಡಿದ ಈ ಫೋಟೋದ ಹಿಂದಿನ ಕಥೆಯನ್ನು ಹೇಳಿ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ದಬ್ಬೂ ರತ್ನಾನಿ, 'ಇಬ್ಬರೂ ನನ್ನ ಸ್ಟುಡಿಯೋದಲ್ಲಿ ಮೊದಲ ಬಾರಿಗೆ ಭೇಟಿಯಾದರು. ಇದು ಎಲ್ಲವೂ ಆರಂಭವಾದ ಸ್ಥಳʼ ಎಂದು ಬರೆದುಕೊಂಡಿದ್ದಾರೆ.
ಕರೀನಾ ಕಪೂರ್ ಜೊತೆ ಡೇಟಿಂಗ್ ಮಾಡುವ ಮೊದಲು ಸೈಫ್ ಅಲಿಖಾನ್ ನಟಿ ಅಮೃತಾ ಸಿಂಗ್ ಅವರನ್ನು ಮದುವೆಯಾಗಿದ್ದರು. 1991ರಲ್ಲಿ ಮದುವೆಯಾಗಿದ್ದ ಈ ಜೋಡಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ 13 ವರ್ಷಗಳ ದಾಂಪತ್ಯದ ನಂತರ, ಸೈಫ್ ಮತ್ತು ಅಮೃತಾ 2004 ರಲ್ಲಿ ಪರಸ್ಪರ ವಿಚ್ಛೇದನ ಪಡೆದರು.
ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡಿದ್ದಾರೆ. ಇದಾದ ಬಳಿಕ 2012ರಲ್ಲಿ ದಂಪತಿ ವಿವಾಹವಾದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ, ಅವರ ಹೆಸರುಗಳು ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್.
ಅಂದಹಾಗೆ ಸೈಫ್ ಮತ್ತು ಅಮೃತ ಅವರ ವಿವಾಹ ಸಂದರ್ಭದಲ್ಲಿ ಕರೀನಾ ಕಾಣಿಸಿಕೊಂಡಿದ್ದು, ಸೈಫ್‌ಗೆ ಕಂಗ್ರಾಟ್ಸ್ ಅಂಕಲ್ ಎಂದು ವಿಶ್ ಮಾಡಿದ್ದರಂತೆ. ಅದಕ್ಕೆ ಪ್ರತಿಕ್ರಿಯಿಸಿದ್ದ ಸೈಫ್ "ಥ್ಯಾಂಕ್ಯೂ ಮಗಳೇ" ಎಂದು ಹೇಳಿದ್ದರು. ಆದರೆ ಇದೀಗ ಮಗಳೇ ಅಂತ ಕರೆದಿದ್ದವಳನ್ನೇ ಸೈಫ್ ಮದುವೆಯಾಗಿದ್ದಾರೆ.