Bollywood Richest Villain: ಇವರೇ ನೋಡಿ ಅತ್ಯಂತ ಶ್ರೀಮಂತ ವಿಲನ್.. ಕೋಟ್ಯಾಧಿಪತಿಗಳು ಈ ಖಳನಾಯಕರು!
ಮುಖೇಶ್ ರಿಷಿ ಎಂಬ ಹೆಸರು ನಿಮಗೆ ತಿಳಿದಿಲ್ಲದಿದ್ದರೂ, ಅವರ ಮುಖವನ್ನು ನೋಡಿದ ನಂತರ, ನೀವು ಅವರಾರೆಂದು ಗುರುತಿಸುವಿರಿ. ಇವರು ಬಾಲಿವುಡ್ ನ ಟಾಪ್ ವಿಲನ್ ಆಗಿದ್ದವರು. 30 ವರ್ಷಗಳಿಂದ ಇಂಡಸ್ಟ್ರಿಯಲ್ಲಿರುವ ಮುಖೇಶ್ ಇಂದಿಗೂ ಬೇಡಿಕೆ ಹೊಂದಿರುವ ವಿಲನ್. ತಮ್ಮ ನಟನೆಯಿಂದಾಗಿ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ. ವರದಿಗಳ ಪ್ರಕಾರ, ಮುಖೇಶ್ ಅವರು 41 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ.
ಪ್ರತಿ ಬಾರಿಯೂ ಅಶುತೋಷ್ ರಾಣಾ ವಿಭಿನ್ನ ರೀತಿಯಲ್ಲಿ ವಿಲನ್ ಆಗಿ, ಜನರನ್ನು ರಂಜಿಸುತ್ತಾರೆ. ಪ್ರಖ್ಯಾತ ಖಳನಾಯಕನಾಗಿದ್ದಾರೆ. ಇಂದಿಗೂ ಅವರು ನಟನೆಯನ್ನು ಮುಂದುವರೆಸಿದ್ದು, ಜನರ ಹೃದಯಗೆದ್ದಿದ್ದಾರೆ. ಅಶುತೋಷ್ ರಾಣಾ 55 ಕೋಟಿ ಒಡೆಯರೆಂದು ಹೇಳಲಾಗುತ್ತದೆ.
ದಕ್ಷಿಣದಿಂದ ಬಾಲಿವುಡ್‌ಗೆ ಬಂದ ಪ್ರಕಾಶ್ ರಾಜ್ ಅವರು ಇಂದು ಜನಪ್ರಿಯ ಮತ್ತು ದುಬಾರಿ ಖಳನಾಯಕರ ಪಟ್ಟಿಯಲ್ಲಿದ್ದಾರೆ. ಸಿಂಗಂ ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ಜನರು ಇನ್ನೂ ಅವರನ್ನು ನೆನಪಿಸಿಕೊಳ್ಳುತ್ತಾರೆ. ವರದಿಗಳ ಪ್ರಕಾರ ಪ್ರಕಾಶ್ ರಾಜ್ 36 ಕೋಟಿ ಆಸ್ತಿ ಹೊಂದಿದ್ದಾರೆ.
ಆಶಿಶ್ ವಿದ್ಯಾರ್ಥಿ ಬಾಲಿವುಡ್‌ನಲ್ಲಿ ಬಹಳ ಸಮಯದಿಂದ ವಿಲನ್ ಆಗಿ ಖ್ಯಾತಿ ಪಡೆದಿದ್ದಾರೆ. ಆಶಿಶ್ ವಿದ್ಯಾರ್ಥಿ ಪ್ರತಿ ಬಾರಿ ತಮ್ಮ ನಟನೆಯಿಂದ ಜನರನ್ನು ರಂಜಿಸಿದ್ದಾರೆ. ಇಂದಿಗೂ ಅವರನ್ನು ಉದ್ಯಮದ ಅತ್ಯಂತ ಜನಪ್ರಿಯ ಖಳನಾಯಕನೆಂದು ಪರಿಗಣಿಸಲಾಗಿದೆ. ವರದಿಗಳ ಪ್ರಕಾರ, ಆಶಿಶ್ 82 ಕೋಟಿ ರೂ. ಆಸ್ತಿ ಹೊಂದಿದ್ದಾರೆ.
ಭಲ್ಲದೇವನಾಗಿ ರಾಣಾ ತೆರೆಮೇಲೆ ಮ್ಯಾಜಿಕ್ ಮಾಡಿದ್ದರು. ಇದರ ನಂತರ, ರಾಣಾ ದಗ್ಗುಬಾಟಿ ದಕ್ಷಿಣ ಮತ್ತು ಬಾಲಿವುಡ್‌ನಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಗಳಿಕೆಯ ವಿಷಯದಲ್ಲಿ ಅವರು ದೊಡ್ಡ ನಟರನ್ನು ಸಹ ಹಿಂದಿಕ್ಕಿದ್ದಾರೆ. ವರದಿಗಳ ಪ್ರಕಾರ, ಇಂದು 45 ಕೋಟಿ ಆಸ್ತಿ ಹೊಂದಿದ್ದಾರೆ.