16 ನೇ ವಯಸ್ಸಿಗೆ ಮುಖ್ಯಮಂತ್ರಿ ಮಗನ ಜೊತೆ ಖ್ಯಾತ ನಟಿಯ ಪ್ರೀತಿ.. ಬೆದರಿಕೆ ಮಧ್ಯೆಯೂ ಮದುವೆಯಾದ ಸ್ಟಾರ್ ಜೋಡಿ!
Bollywood Couple: ಸೌತ್ ಸಿನಿಮಾ ಸೇರಿದಂತೆ ಬಾಲಿವುಡ್ ಚಿತ್ರಗಳಲ್ಲಿ ಮಿಂಚಿದ ಈ ನಟಿ ಸಾಕಷ್ಟು ಖ್ಯಾತಿ ಪಡೆದವರು. 16 ನೇ ವರ್ಷಕ್ಕೆ ಪ್ರೀತಿಯಲ್ಲಿ ಬಿದ್ದ ಇವರು ಸಿಎಂ ಪುತ್ರನನ್ನೇ ಪ್ರೀತಿಸಿ ಮದುವೆಯಾದರು.
ಮುಖ್ಯಮಂತ್ರಿ ಪುತ್ರನನ್ನೇ ಪ್ರೀತಿಸಿ ಮದುವೆ ಆದ ಈ ನಟಿಯ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಈ ಖ್ಯಾತ ನಟಿ ಮದುವೆಯ ಬಳಿಕ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.
ಈ ಖ್ಯಾತ ನಟಿ ಜೆನಿಲಿಯಾ ಡಿಸೋಜಾ. ಮಹಾರಾಷ್ಟ್ರದ ಮುಖ್ಯಮಂತ್ರಿ ಮಗ ಹಾಗೂ ನಟ ರಿತೇಶ್ ದೇಶಮುಖ್ ಜೊತೆ ಪ್ರೀತಿಸಿ ಮದುವೆಯಾಗಿದ್ದಾರೆ.
‘ತುಜೆ ಮೇರಿ ಕಸಮ್’ ಸಿನಿಮಾ ಸೆಟ್ ನಲ್ಲಿ ಜೆನಿಲಿಯಾ ಹಾಗೂ ರಿತೇಶ್ ಮೊದಲ ಬಾರಿ ಭೇಟಿಯಾದರು. ರಿತೇಶ್ ದೇಶಮುಖ್ ಮತ್ತು ಜೆನಿಲಿಯಾ ನಡುವೆ ಅಲ್ಲಿಂದಲೇ ಸ್ನೇಹ ಬೆಳೆಯಿತು.
ರಿತೇಶ್ ಅವರ ವ್ಯಕ್ತಿತ್ವವನ್ನು ಜೆನಿಲಿಯಾ ಇಷ್ಟ ಪಡುತ್ತಿದ್ದರು. ಬಳಿಕ ಜೆನಿಲಿಯಾ ಹಾಗೂ ರಿತೇಶ್ ಸ್ನೇಹ ಪ್ರೀತಿಗೆ ತಿರುಗಿತು. 9 ವರ್ಷಗಳ ಕಾಲ ಜೆನಿಲಿಯಾ ಮತ್ತು ರಿತೇಶ್ ಇಬ್ಬರು ಡೇಟಿಂಗ್ ಮಾಡಿದರು.
ಬಳಿಕ ನಟ ರಿತೇಶ್ ದೇಶಮುಖ್ ಮತ್ತು ನಟಿ ಜೆನಿಲಿಯಾ ಸಪ್ತಪದಿ ತುಳಿದರು. ಮದುವೆಯ ನಂತರ ಜೆನಿಲಿಯಾ ನಟನೆ ಬಿಟ್ಟು ಸಿರಂಗದಿಂದ ದೂರ ಉಳಿದಿದ್ದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
16 ನೇ ವಯಸ್ಸಿನಲ್ಲಿಯೇ ಪ್ರೀತಿಯಲ್ಲಿ ಬಿದ್ದಿದ್ದರು ಜೆನಿಲಿಯಾ. ಬಳಿಕ ಬೆದರಿಕೆಯ ನಡುವೆಯೂ ನಟಿ ಜೆನಿಲಿಯಾ ಮತ್ತು ರಿತೇಶ್ ಮದುವೆಯಾದರು ಎನ್ನಲಾಗುತ್ತದೆ.
ಜೆನಿಲಿಯಾ 10 ವರ್ಷದ ನಂತರ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಇತ್ತೀಚೆಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಿತೇಶ್ ಜೊತೆ ನಟಿಸಿದ್ದಾರೆ.
ಬಾಲಿವುಡ್‌ನ ಮುದ್ದಾದ ಜೋಡಿಗಳಲ್ಲಿ ಜೆನಿಲಿಯಾ ಮತ್ತು ರಿತೇಶ್ ಕೂಡ ಒಬ್ಬರು. ಮದುವೆಯಾಗಿ 12 ವರ್ಷ ಕಳೆದರೂ ಇಬ್ಬರೂ ಪರಸ್ಪರ ಪ್ರೀತಿಸುತ್ತಾರೆ. ಈ ಕ್ಯೂಟ್ ಕಪಲ್ ಕೆಮೆಸ್ಟ್ರಿ ಅನೇಕ ಜನರಿಗೆ ಮಾದರಿ.