ಒಂದು ರೂಪಾಯಿಗೂ ಪರದಾಡಿದ್ದ ʼಈʼ ಬ್ಯೂಟಿ ಇಂದು ಐದು ನಿಮಿಷಕ್ಕೆ 2 ಕೋಟಿ ಸಂಭಾವನೆ ಪಡೆಯುವ ನಟಿ! ಯಾರಿರಬಹುದು ಗೆಸ್‌ ಮಾಡಿ!

Thu, 01 Aug 2024-8:00 am,

ನಟನೆಯನ್ನು ಪ್ರೀತಿಸುವ ಕೆನಡಾದ ಹುಡುಗಿ ಭಾರತಕ್ಕೆ ಬಂದು ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಳು. ಇಂದು ಈ ನಟಿ ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಸಾಧಿಸಿದ್ದಾರೆ.. ಆದರೆ ಈ ಹುಡುಗಿಗೆ ಯಶಸ್ಸು ಸಿಕ್ಕಿದ್ದು ಅಷ್ಟು ಸುಲಭವಲ್ಲ.. ವೃತ್ತಿ ಜೀವನದ ಆರಂಭದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಈ ಮಟ್ಟಕ್ಕೆ ಬಂದಿದ್ದಾರೆ ನಟಿ ನೋರಾ.  

ಕೆನಡಾದಿಂದ ಕೇವಲ 5000 ರೂಪಾಯಿಯೊಂದಿಗೆ ಭಾರತಕ್ಕೆ ಬಂದ ಈ ನಟಿ ಹಲವು ಸವಾಲುಗಳನ್ನು ಎದುರಿಸಿ ಆತ್ಮಸ್ಥೈರ್ಯದಿಂದ ಮೆಟ್ಟಿ ನಿಂತಿದ್ದಾರೆ.  

ನೋರಾ ಫತೇಹಿ 2014 ರಲ್ಲಿ ಟೈಗರ್ಸ್ ಆಫ್ ದಿ ಸುಂದರಬನ್ಸ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆ ಸಿನಿಮಾದ ನಂತರ ಬಿಗ್ ಬಾಸ್ ಶೋನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ನೋರಾ ಬಿಗ್ ಬಾಸ್ ಮನೆಯಲ್ಲಿ 84 ದಿನಗಳ ಕಾಲ ಇದ್ದು ಹೊರಗೆ ಬಂದಿದ್ದಾರೆ. ಆ ನಂತರ ತೆಲುಗು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ಡಾನ್ಸ್‌ ಮಾಡುವ ಮೂಲಕ ಪ್ರಸಿದ್ಧರಾದರು.  

ನೋರಾ ಅನೇಕ ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ಸಹ ನಟಿಸಿದ್ದಾರೆ. ಇವರು ಕೇವಲ ನಟಿಯಲ್ಲ, ಮಾಡೆಲ್, ನಿರ್ಮಾಪಕಿ, ಗಾಯಕಿ, ನೃತ್ಯಗಾರ್ತಿ... ಹೀಗೆ ಬಹುಮುಖ ಪ್ರತಿಭೆಯನ್ನು ಹೊಂದಿದ್ದು, ಅವರ ನೃತ್ಯಕ್ಕೆ ತನ್ನದೇ ಆದ ಅಭಿಮಾನಿ ಬಳಗವಿದೆ.  

ಆದರೆ ನೋರಾ ಫತೇಹಿ ತನ್ನ ವೃತ್ತಿಜೀವನದ ಆರಂಭದಲ್ಲಿ ಉದ್ಯೋಗ, ಆಹಾರ, ಸರಿಯಾದ ವಸತಿ ಮತ್ತು ಸಾಕಷ್ಟು ಸಂಬಳವನ್ನು ಹುಡುಕಲು ಸಾಕಷ್ಟು ಕಷ್ಟಪಟ್ಟಿದ್ದಾರೆ.. ಆದರೆ ಈಗ ಎರಡೂ ಕೈಗಳಿಂದ ಸಂಪಾದಿಸುತ್ತಿದ್ದಾರೆ.   

ಸದ್ಯ ಖ್ಯಾತ ನಟರೊಂದಿಗೆ ಕೆಲಸ ಮಾಡುವ ಮೂಲಕ ಹೆಚ್ಚು ಸಂಪಾದಿಸುತ್ತಿದ್ದೇನೆ ಎಂದು ನೋರಾ ಫತೇಹಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.  

ಅಲ್ಲದೇ ಸಿನಿಮಾದಲ್ಲಿ ನಟಿಸಲು ರೂ. ಐದು ನಿಮಿಷಗಳ ಹಾಡಿನ ಸೀಕ್ವೆನ್ಸ್‌ಗೆ 2 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿರುವುದಾಗಿ ಹೇಳಿದ್ದಾಳೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link