Bollywood: ಮಕ್ಕಳು ಮಾಡಿಕೊಳ್ಳೋಣ ಎಂದ ಪತಿಗೆ ರಾತ್ರೋ ರಾತ್ರಿ ಡಿವೋರ್ಸ್ ಕೊಟ್ಟ ಖ್ಯಾತ ನಟಿ !
ನಟಿ ಪೂಜಾ ಬಾತ್ರಾ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು ನಟನಾ ಕ್ಷೇತ್ರಕ್ಕೆ ಕಾಲಿಟ್ಟರು. ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಮದುವೆಯಾದರು.
ಈ ಅವಧಿಯಲ್ಲಿ ಸುಮಾರು 30 ಚಿತ್ರಗಳನ್ನು ಮಾಡಿದ್ದ ಅವರು ಅಮೆರಿಕದ ವೈದ್ಯ ಸೋನು ಅಹ್ಲುವಾಲಿಯಾ ಅವರ ಜೊತೆ ವಿವಾಹವಾದರು.
ಇದಾದ ನಂತರ ಪೂಜಾ ಅಮೆರಿಕಕ್ಕೆ ಶಿಫ್ಟ್ ಆಗಿದ್ದರು. ಆದರೆ ಕೆಲವು ವರದಿಗಳ ಪ್ರಕಾರ, ಸೋನು ಮಕ್ಕಳನ್ನು ಹೊಂದಲು ಬಯಸಿದ್ದರು. ಆದರೆ ಪೂಜಾ ಬಾತ್ರಾ ಮತ್ತೆ ಚಲನಚಿತ್ರಗಳಿಗೆ ಮರಳಲು ಬಯಸಿದ್ದರು. ಇದೇ ಕಾರಣಕ್ಕೆ ಇಬ್ಬರ ನಡುವೆ ವೈಮನಸ್ಸು ಮೂಡಿತು ಎಂದು ಹೇಳಲಾಗುತ್ತದೆ.
2011 ರಲ್ಲಿ ಪೂಜಾ ಬಾತ್ರಾ ವಿಚ್ಛೇದನ ಪಡೆದರು. ಹಮ್ ತುಮ್ ಶಬಾನಾ, ಎಬಿಸಿಡಿ 2, ಕಿಲ್ಲರ್ ಪಂಜಾಬಿ, ಸ್ಕ್ವಾಡ್ ನಂತಹ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದರು. ಅಂದುಕೊಂಡ ಸಕ್ಸಸ್ ಸಿಗದ ಬಳಿಕ 2019 ರಲ್ಲಿ ನಟ ನವಾಬ್ ಶಾ ಅವರನ್ನು ಎರಡನೇ ಬಾರಿಗೆ ವಿವಾಹವಾದರು.
ಪೂಜಾ ಬಾತ್ರಾ ಬಾಲಿವುಡ್ ಉದ್ಯಮದಲ್ಲಿ ಪ್ರಸಿದ್ಧ ನಟಿಯಾಗಿದ್ದಾರೆ. ಉತ್ತರ ಪ್ರದೇಶದ ಫೈಜಾಬಾದ್ ನವರು. ಪೂಜಾ ಬಾತ್ರಾ ಅನೇಕ ಉತ್ತಮ ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪೂಜಾ ಬಾತ್ರಾ 1995 ರಲ್ಲಿ ತೆಲುಗು ಚಲನಚಿತ್ರ ಆಸೈ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.