ಈ ಪೋಟೋದಲ್ಲಿರುವ ಹುಡುಗಿ ಇಂದು ಸ್ಟಾರ್ ನಟಿ..! 49 ವರ್ಷದವರಾಗಿದ್ರೂ ಬಳುಕುವ ಬಳ್ಳಿಯಂತ ಮೈಮಾಟದಿಂದ ಟಾಪ್ ಹಿರೋಯಿನ್ಸ್‌ಗೆ ಪೈಪೋಟಿ ನೀಡ್ತಾರೆ!!
1993 ರಲ್ಲಿ 'ಬಾಜಿಗರ್' ಚಿತ್ರದ ಮೂಲಕ ಶಿಲ್ಪಾ ಶೆಟ್ಟಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅದೇ ವರ್ಷ ‘ಮೇ ಕಿಲ್ಲಾಡಿ ತೂ ಅನಾರಿ’ ಸಿನಿಮಾ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಹಿಟ್ ಆಯಿತು.
ತಮಿಳಿನ ಮಿಸ್ಟರ್ ರೋಮಿಯೋ ಚಿತ್ರದಲ್ಲಿ ʼಮೆಕರಿನಾ' ಹಾಡಿಗೆ ಕುಣಿದು ಕುಪ್ಪಳಿಸುವ ಮೂಲಕ ನಟಿ ಶಿಲ್ಪಾ ಶೆಟ್ಟಿ ತಮಿಳು ಸಿನಿ ಅಭಿಮಾನಿಗಳಲ್ಲಿ ಫೇಮಸ್ ಆದರು.
ವೃತ್ತಿಜೀವನದ ಆರಂಭದಲ್ಲಿ, ಶಿಲ್ಪಾ ಶೆಟ್ಟಿ ಅವರ ಬಣ್ಣದಿಂದಾಗಿ ಚಿತ್ರರಂಗದಲ್ಲಿ ಅನೇಕ ಬಾರಿ ತಿರಸ್ಕರಿಸಲ್ಪಟ್ಟರು. ಇದನ್ನು ಸ್ವತಃ ಶಿಲ್ಪಾ ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ.
ಶಿಲ್ಪಾ ಶೆಟ್ಟಿ ಚಿತ್ರರಂಗಕ್ಕೆ ಕಾಲಿಟ್ಟಾಗ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಿಸುತ್ತಿದ್ದರು. ಅವರ ಹಳೆಯ ಪೋಟೋಗಳು ಸೋಷಿಯೊಲ್ ಮಿಡಿಯಾದಲ್ಲಿ ಆಗ್ಗಾಗೆ ಕಾಣಿಸಿಕೊಳ್ಳುತ್ತಿರುತ್ತವೆ.
ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ವಿಶೇಷವಾದ ಐಡೆಂಟಿಟಿ ಪಡೆದ ಹಾಗೂ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡಿರುವ ನಟಿಯರ ಪಟ್ಟಿಗೆ ಶಿಲ್ಪಾ ಶೆಟ್ಟಿ ಹೆಸರು ಸೇರಿಕೊಂಡಿದೆ. ಶಸ್ತ್ರಚಿಕಿತ್ಸೆ ಮೂಲಕ ಶಿಲ್ಪಾ ಮೂಗು ಬದಲಿಸಿಕೊಂಡಿದ್ದಾರೆ.
ಯೋಗವನ್ನು ತನ್ನ ಜೀವನದ ಪ್ರಮುಖ ಭಾಗವನ್ನಾಗಿ ಮಾಡಿಕೊಂಡ ನಂತರ, ಶಿಲ್ಪಾ ಶೆಟ್ಟಿ ತನ್ನ ಆರೋಗ್ಯಕರ ಜೀವನಶೈಲಿ, ಸುಂದರವಾದ ಬಳುಕುವ ಬಳ್ಳಿಯಂತಹ ಮೈಕಟ್ಟನ್ನು ಹೊಂದಿದ್ದಾರೆ..
ಬ್ರಿಟಿಷ್ ರಿಯಾಲಿಟಿ ಶೋ 'ಬಿಗ್ ಬ್ರದರ್ 5' ಟೈಟಲ್ ವಿನ್ನರ್ ಶಿಲ್ಪಾ ಶೆಟ್ಟಿ. ಭಾರತದಲ್ಲಿ ಮಾರಾಟವಾಗುತ್ತಿರುವ ಓಕೆ ಪತ್ರಿಕೆಯ ಮೊದಲ ಆವೃತ್ತಿಯ ಕವರ್ ಪೇಜ್ ನಲ್ಲಿ ಶಿಲ್ಪಾ ಶೆಟ್ಟಿ ಅವರ ಫೋಟೋ ಇತ್ತು ಎಂಬುದು ಗಮನಾರ್ಹ.
ಇಂದಿಗೂ ಈ ಚೆಲುವೆ ತನ್ನ ಮೈಕಟ್ಟು ಕಾಪಾಡಿಕೊಂಡು ಅನೇಕರಿಗೆ ಬ್ಯೂಟಿ ಟಿಪ್ಸ್ ಹಾಗೂ ಹೆಲ್ತ್ ಟಿಪ್ಸ್ ನೀಡುತ್ತಿದ್ದಾಳೆ. ಚೆಂದದ ದೇಹ ಹೊಂದಿರುವ ಅನೇಕ ಯುವ ನಟಿಯರಿಗೆ ಶಿಲ್ಪಾ ಶೆಟ್ಟಿ ಪೈಪೋಟಿ ನೀಡುತ್ತಿದ್ದಾರೆ.. ಶಿಲ್ಪಾ ಶೆಟ್ಟಿ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ 45 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.