ಭಾರತೀಯ ಸೇನೆಗೆ ಸೇರಿದ 22 ವರ್ಷದ ಈ ಯುವತಿ ಯಾವ ಸ್ಟಾರ್ ನಟನ ಪುತ್ರಿ ಗೊತ್ತಾ.. ಈಕೆಯ ಸೋದರಿಯೂ ಸಿನಿರಂಗದ ಖ್ಯಾತ ನಟಿ!
Ravi Kishan Daughter Ishita Shukla : ಭಾರತೀಯ ಸಿನಿರಂಗದ ಸ್ಟಾರ್ ನಟ ರವಿ ಕಿಶನ್. ಇವರು ಪ್ರಮುಖ ರಾಜಕಾರಣಿಯೂ ಹೌದು. ಉತ್ತರ ಪ್ರದೇಶದಲ್ಲಿ ಜನಿಸಿದ ರವಿಕಿಶನ್ ಹಿಂದಿ ಮತ್ತು ಭೋಜಪುರಿ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ್ದಾರೆ. ಹಲವು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡದಲ್ಲಿ ಸಹ ರವಿ ಕಿಶನ್ ಬಣ್ಣ ಹಚ್ಚಿದ್ದು, ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದಲ್ಲಿ ಖಳನಾಯಕನಾಗಿದ್ದಾರೆ. ರವಿ ಕಿಶನ್ ಅವರಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ.
ಇಷ್ಟೆಲ್ಲ ನೇಮ್ ಫೇಮ್ ಇರುವ ನಟ ರವಿ ಕಿಶನ್ ಪುತ್ರಿ ಇಶಿತಾ ಶುಕ್ಲಾ ರಕ್ಷಣಾ ಪಡೆಗೆ ಸೇರ್ಪಡೆಯಾಗಿದ್ದಾರೆ. ತಂದೆ ಸಿನಿರಂಗದ ಸ್ಟಾರ್ ನಟನಾದರೂ ಚಿತ್ರರಂಗಕ್ಕೆ ಬರದೇ ದೇಶ ರಕ್ಷಣೆಗೆ ಎದೆಕೊಟ್ಟು ನಿಂತಿದ್ದಾರೆ ಈ ಹೆಮ್ಮೆಯ ಮಗಳು.
ಇಶಿತಾ ಶುಕ್ಲಾ ಭಾರತ ಸರ್ಕಾರದ ಅಗ್ನಿಪಥ್ ಯೋಜನೆಯಡಿ ರಕ್ಷಣಾ ಪಡೆಯ ಭಾಗವಾಗಿದ್ದಾರೆ. ಮಗಳ ಈ ಸಾಧನೆಯನ್ನು ರವಿ ಕಿಶನ್ ಸಂತಸದಿಂದ ಕೊಂಡಾಡುತ್ತಾರೆ. ಮಗಳ ಶೌರ್ಯಕ್ಕೆ ತಂದೆ ಬೆನ್ನೆಲುಬಾಗಿ ನಿಂತಿದ್ದಾರೆ.
ಇಶಿತಾ ಶುಕ್ಲಾ ಅವರಿಗೆ ಈಗ 22 ವರ್ಷ ವಯಸ್ಸು. ಫೆಬ್ರವರಿ 10 ರಂದು ಜೌನ್‌ಪುರದಲ್ಲಿ ಜನಿಸಿದರು. ದೆಹಲಿ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ. ಇಶಿತಾ ಎನ್‌ಸಿಸಿಯಲ್ಲಿ ಕೆಡೆಟ್ ಆಗಿದ್ದಾರೆ. ಅವರಿಗೆ 2022 ರಲ್ಲಿ NCC ADG ಅವಾರ್ಡ್ ಆಫ್ ಎಕ್ಸಲೆನ್ಸ್ ನೀಡಲಾಯಿತು.
ಇಶಿತಾ ಶುಕ್ಲಾ ಅವರಿಗೆ ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಅತ್ಯುತ್ತಮ ಕೆಡೆಟ್ ಪ್ರಶಸ್ತಿಯನ್ನು ನೀಡಿದರು. ಇಶಿತಾ ಶುಕ್ಲಾ Instagram ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.
ಇಶಿತಾ ಅವರ ಮೊದಲ ಸೋದರಿ ತನಿಷ್ಕಾ ಶುಕ್ಲಾ. ತನಿಷ್ಕಾ ಬ್ಯುಸಿನೆಸ್ ಮ್ಯಾನೇಜರ್ ಮತ್ತು ಹೂಡಿಕೆದಾರರಾಗಿದ್ದಾರೆ. ಎರಡನೇ ಸೋದರಿ ರೀವಾ ಶುಕ್ಲಾ ಬಾಲಿವುಡ್ ಖ್ಯಾತ ನಟಿ. ಇಶಿತಾಗೆ ಒಬ್ಬ ಸಹೋದರನೂ ಇದ್ದಾನೆ. ಇವರ ಹೆಸರು ಸಕ್ಷಮ್ ಶುಕ್ಲ.