ಬಾಲಿವುಡ್‌ನ ಈ ಸ್ಟಾರ್ ನಟರು ಕುಡಿಯೂದೂ ಇಲ್ಲ, ಸಿಗರೇಟ್‌ ಅಂತೂ ಮುಟ್ಟೋದೇ ಇಲ್ಲ!

Wed, 27 Nov 2024-7:50 am,

Bollywood News: ಬಾಲಿವುಡ್‌ನ ಕೆಲವು ಖ್ಯಾತ ನಟರ ಜೀವನಶೈಲಿ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಈ ಸ್ಟಾರ್‌ ಹೀರೋಗಳು ದುಷ್ಚಟಗಳಿಂದ ದೂರ ಉಳಿದಿದ್ದು, ಅಭಿಮಾನಿಗಳಿಗೆ ಮಾದರಿ ಆಗಿದ್ದಾರೆ. 

ಸೋನು ಸೂದ್ ಅನೇಕ ಜನರ ಸ್ಫೂರ್ತಿ. ಇವರು ಮದ್ಯಪಾನ, ಧೂಮಪಾನ ಮಾಡುವುದಿಲ್ಲ. ವಿಲನ್ ಪಾತ್ರದಲ್ಲಿ ಮಿಂಚುವ ನಟನಾದರೂ ದುಶ್ಚಟಗಳಿಂದ ದೂರವಿದ್ದಾರೆ.  ಫಿಟ್‌ನೆಸ್‌ ಕಾರಣದಿಂದ ಸೋನು ಸೂದ್ ಮದ್ಯಪಾನ, ಧೂಮಪಾನದಿಂದ ದೂರವಿದ್ದಾರಂತೆ ಎನ್ನಲಾಗಿದೆ. 

ಬಾಲಿವುಡ್ ಆಕ್ಷನ್ ಸ್ಟಾರ್ ಜಾನ್ ಅಬ್ರಹಾಂ 25 ವರ್ಷಗಳಿಂದ ಸಕ್ಕರೆಯ ಪದಾರ್ಥವನ್ನೇ ತಿಂದಿಲ್ಲ. ಇಷ್ಟೊಂದು ಸ್ಟ್ರಿಕ್ಟ್‌ ಡಯೆಟ್‌ ಫಾಲೋ ಮಾಡುವ ಜಾನ್ ಅಬ್ರಹಾಂ ಕೂಡ ಮದ್ಯಪಾನ, ಧೂಮಪಾನ ಮಾಡುವುದಿಲ್ಲ.

ಬಾಲಿವುಡ್‌ನ ಬಿಗ್‌ ಬಿ ಎಂದೇ ಖ್ಯಾತರಾದ ಅಮಿತಾಬ್ ಬಚ್ಚನ್ ಸಹ ಮದ್ಯಪಾನ ಮಾಡುವುದಿಲ್ಲ. ಸಿನಿಮಾ ನಟನೆಗಳಲ್ಲಿ ಹೊರತುಪಡಿಸಿ ವೈಯಕ್ತಿವಾಗಿ ಧೂಮಪಾನವನ್ನು ಸಹ ಅಮಿತಾಬ್‌ ಮಾಡುವುದಿಲ್ಲ ಎನ್ನಲಾಗಿದೆ. 

ವಯಸ್ಸು ಎಷ್ಟೇ ಆದರೂ ಯಂಗ್‌ ಆಗಿ ಕಾಣುವ ಅಕ್ಷಯ್ ಕುಮಾರ್ ಮದ್ಯಪಾನ ಮತ್ತು ಧೂಮಪಾನದಿಂದ ದೂರವಿರುವ ನಟ. ಫಿಟ್‌ನೆಸ್ ಹಾಳಾಗಬಾರದೆಂಬ ಉದ್ದೇಶದಿಂದಲೇ ಫಿಟ್‌ನೆಸ್ ಮದ್ಯಪಾನ, ಧೂಮಪಾನ  ಮಾಡೋದಿವಲ್ಲವಂತೆ. 

ಅಭಿಷೇಕ್ ಬಚ್ಚನ್ ಸಹ ಬಾಲಿವುಡ್‌ನ ಖ್ಯಾತ ನಟರಲ್ಲಿ ಒಬ್ಬರು. ಇವರು ಸಹ ತಂದೆಯ ಹಾದಿಯಲ್ಲೇ ಸಾಗುತ್ತಿದ್ದು, ಸಿನಿಮಾ ಹೊರತುಪಡಿಸಿ ಬೇರೆಲ್ಲೂ ಸ್ಮೋಕ್ ಮಾಡುವುದಿಲ್ಲ. ಮದ್ಯಪಾನ ಕೂಡ ಮಾಡುವುದಿಲ್ಲ ಎನ್ನಲಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link