ದಾಖಲೆ ಬರೆದ ಕಿರುತೆರೆ ಶೋ: ಸಂಕ್ರಾಂತಿಗೆ `ಬೊಂಬಾಟ್ ಭೋಜನ` ಹೊಸ ಸೀಸನ್ ಶುರು..
ನಟ-ನಿರ್ದೇಶಕ ಸಿಹಿಕಹಿ ಚಂದ್ರು ಸ್ಟಾರ್ ಸುವರ್ಣದಲ್ಲಿ ನಡೆಸಿಕೊಡುತ್ತಿರುವ ಕನ್ನಡ ಕಿರುತೆರೆಯ ಜನಪ್ರಿಯ ಅಡುಗೆ ಕಾರ್ಯಕ್ರಮ 'ಬೊಂಬಾಟ್ ಭೋಜನ' ಸೀಸನ್-3 ಸದ್ಯ 1000 ಸಂಚಿಕೆಗಳನ್ನು ಪೂರೈಸಿ, ದಾಖಲೆ ಬರೆದಿದೆ.
'ಬೊಂಬಾಟ್ ಭೋಜನ' 1000 ಸಂಚಿಕೆಯ ಸಂಭ್ರಮವನ್ನು ಆಚರಿಸಿಲಾಗಿದ್ದು, ಆಪ್ತರು, ಮಿತ್ರರು ಮತ್ತು ವಾಹಿನಿಯವರನ್ನು ಆಮಂತ್ರಿಸಿ ಒಂದು ವಿಶೇಷ ಕಾರ್ಯಕ್ರಮವನ್ನು ಮಾಡಿ, ಬಂದವರಿಗೆ 'ಬೊಂಬಾಟ್ ಭೋಜನ' ಹಾಕಿಸಿ ಚಂದ್ರು ಕಾರ್ಯಕ್ರಮದ ಬಗ್ಗೆ ಮಾಹಿತಿ ಹಂಚಿಕೊಂಡರು.
ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಸಿಹಿಕಹಿ ಚಂದ್ರು ರಾಜ್ಯದ ಹಲವು ಜಿಲ್ಲೆಗಳಲ್ಲಿ, ಆಹ್ವಾನಿಸಿದವರ ಮನೆಗೆ ಹೋಗಿ ಪ್ರೀತಿಯಿಂದ ಮಾಡಿದ ತಿಂಡಿಯನ್ನು ಸವಿದು ಬಂದಿದ್ದೇನೆ. ಅಡುಗೆಯ ಜೊತೆಗೆ ಹೊಸ ವಿಭಾಗಗಳ ಮೂಲಕ ಮಹಿಳೆಯರು ತಮ್ಮ ಅಂದ ಹೆಚ್ಚಿಸಿಕೊಳ್ಳುವ ಮೇಕಪ್, ಕೇಶವಿನ್ಯಾಸ ತರಬೇತಿಯನ್ನು ನೀಡಲಾಗಿದೆ.
ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಗೌರಿಯಮ್ಮ ನಡೆಸಿಕೊಡುವ 'ಅಂಗೈಲಿ ಆರೋಗ್ಯ' ವಿಭಾಗದಲ್ಲಿ ಹಲವು ಆರೋಗ್ಯದ ಟಿಪ್ಸ್ ಗಳನ್ನು ಕೂಡ ನೀಡಲಾಗಿದ್ದು, ಸೀಸನ್ 3ರಲ್ಲಿ ಅಮೇರಿಕಾ, ಆಫ್ರಿಕಾ ಮುಂತಾದ ಕಡೆ ಹೋಗಿ ಅಡುಗೆ ಕಾರ್ಯಕ್ರಮ ಮಾಡಿ ಬಂದಿರುವುದು ಸಹ ವಿಶೇಷವಾಗಿದೆ.
ಬೊಂಬಾಟ್ ಭೋಜನ ಸೀಸನ್ 3ರ ಶೋದಲ್ಲಿ ಹಲವು ಗಣ್ಯರಾದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಭಾಸ್ಕರ್ ರಾವ್, ಸುಧಾ ಮೂರ್ತಿ, ಗುರುರಾಜ ಕರ್ಜಗಿ ಭಾಗವಹಿಸಿದ್ದಾರೆ.
'ಬೊಂಬಾಟ್ ಭೋಜನ' ಶೋ 3 ಸೀಸನ್‍ಗಳಿಂದ 2000ಕ್ಕೂ ಹೆಚ್ಚು ಕಂತುಗಳಾಗಿ ಪ್ರಸಾರವಾಗಿದ್ದು, ಮುಂದಿನ ದಿನಗಳಲ್ಲಿ ಗಿನ್ನೀಸ್ ಅಥವಾ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಗಳಿಗೆ ಸೂಕ್ತ ದಾಖಲೆ ಮಾಡಲಿದೆ.
'ಬೊಂಬಾಟ್ ಭೋಜನ- 3' 1000 ಸಂಚಿಕೆಯ ಸಂಭ್ರಮದ ಕಾರ್ಯಕ್ರಮದಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಲಾಗಿರುವುದರ ಜೊತೆಗೆ, ಸಂಕ್ರಾಂತಿ ಸಂಭ್ರಮದಲ್ಲಿ ಹೊಸ ಸೀಸನ್ ಶುರುವಾಗುತ್ತಿದ್ದು ಎಂಬ ವಿಷಯವನ್ನು ವೀಕ್ಷಕರು ತಿಳಿದ ಬಳಿಕ ಕುತೂಹಲದಿಂದ ಕಾಯುತ್ತಿದ್ದಾರೆ.