Bone Health: ನಿಮ್ಮ ಈ ಅಭ್ಯಾಸಗಳೇ ಮೂಳೆಗಳ ದೌರ್ಬಲ್ಯಕ್ಕೆ ಕಾರಣ
ಬದಲಾದ ಜೀವನಶೈಲಿ ಹಾಗೂ ತಪ್ಪಾದ ಆಹಾರ ಪದ್ದತಿಯಿಂದಾಗಿ ಮೂಳೆಗಳ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಮೂಳೆಗಳ ದುರ್ಬಲತೆಯನ್ನು ತಪ್ಪಿಸಬೇಕೆಂದರೆ ಇಂದಿನಿಂದಲೇ ನಿಮ್ಮ ಈ ಕೆಲವು ಕೆಟ್ಟ ಅಭ್ಯಾಸಗಳನ್ನು ಬಿಡಿ. ಅವುಗಳೆಂದರೆ...
ಸೋಮಾರಿತನ: ನೀವು ಸೋಮಾರಿಯಾಗಿದ್ದರೆ, ಕಡಿಮೆ ದೈಹಿಕ ಚಟುವಟಿಕೆ ಹೊಂದಿದ್ದರೆ ಮೂಳೆಗಳು ದುರ್ಬಲಗೊಳ್ಳಲು ಇದು ಪ್ರಮುಖ ಕಾರ್ಣವಾಗಿದೆ.
ಅತಿಯಾದ ಉಪ್ಪು ಬಳಕೆ: ನೀವು ನಿಮ್ಮ ಆಹಾರದಲ್ಲಿ ಅತಿಯಾಗಿ ಉಪ್ಪನ್ನು ಬಳಸುತ್ತಿದ್ದರೆ ಇದೂ ಕೂಡ ನಿಮ್ಮ ಮೂಳೆಗಳನ್ನು ದುರ್ಬಲಗೊಳಿಸುತ್ತದೆ.
ನೀವು ನಿತ್ಯ ಸಾಕಷ್ಟು ನಿದ್ರೆ ಮಾಡದಿದ್ದರೆ ಇದರಿಂದಲೂ ಕೂಡ ಮೂಳೆಗಳು ದುರ್ಬಲಗೊಳ್ಳುತ್ತವೆ.
ಧೂಮಪಾನ: ಧೂಮಪಾನದಿಂದ ಶ್ವಾಸಕೋಶದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಎಲ್ಲರಿಗೂ ತಿಳಿದೇ ಇದೆ. ಆದರೆ, ಇದು ಮೂಳೆಗಳನ್ನು ದುರ್ಬಲಗೊಳಿಸುತ್ತದೆ.
ವಿಟಮಿನ್ ಡಿ ಕೊರತೆ: ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳದೆ ಇರುವುದರಿಂದ ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾಗಿ ಅದು ಮೂಳೆಗಳನ್ನು ದುರ್ಬಲಗೊಳಿಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.