ಕೂದಲಿಗೆ ಡೈ ಅಲ್ಲ, ಸೋರೆಕಾಯಿಯನ್ನು ಹೀಗೆ ಬಳಸಿ !ಹತ್ತೇ ನಿಮಿಷ ಸಾಕು ಬಿಳಿ ಕೂದಲು ಕಪ್ಪಾಗಲು !
ಸಣ್ಣ ವಯಸ್ಸಿನಲ್ಲಿಯೇ ಬಿಳಿ ಕೂದಲು ಈಗ ಸಾಮಾನ್ಯ ಸಮಸ್ಯೆ. ಇದರ ಪರಿಹಾರವಾಗಿ ಜನರು ಡೈ ಅಥವಾ ಹೇರ ಕಲರ್ ಬಳಸುತ್ತಾರೆ. ಇದು ಅಡ್ಡ ಪರಿಣಾಮಗಳ ಆಗರ ಎನ್ನುವುದು ನೆನಪಿರಲಿ.
ಚಿಕ್ಕ ವಯಸ್ಸಿನಲ್ಲಿ ಕೂದಲು ಬಿಳಿಯಾಗುತ್ತಿದ್ದರೆ ಸೋರೆಕಾಯಿಯನ್ನು ಬಳಸಬಹುದು. ಇದು ಕೂದಲನ್ನು ಕಡು ಕಪ್ಪಾಗಿಸಲು ಸಹಾಯ ಮಾಡುತ್ತದೆ.
ಸೋರೆಕಾಯಿಯನ್ನು ತುಂಡುಗಳಾಗಿ ಕತ್ತರಿಸಿ ಚೆನ್ನಾಗಿ ಒಣಗಿಸಿಕೊಳ್ಳಿ. ನಂತರ ಇದನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ.
ಹೀಗೆ ಮಾಡಿದ ಸೋರೆಕಾಯಿ ಪುಡಿಯನ್ನು ತೆಂಗಿನೆಣ್ಣೆಗೆ ಬೆರೆಸಿ ಚೆನ್ನಾಗಿ ಬಿಸಿ ಮಾಡಿ. ನಂತರ ಈ ಮಿಶ್ರಣವನ್ನು ತನ್ನಾಗಾಗಲು ಬಿಡಿ.
ಈಗ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ 15 ರಿಂದ 20 ನಿಮಿಷ ಬಿಟ್ಟು ಕೂದಲು ತೊಳೆಯಿರಿ. ನಿಮ್ಮ ಬಿಳಿ ಕೂದಲಿನ ಸಮಸ್ಯೆಗೆ ಇದು ಶಾಶ್ವತ ಪರಿಹಾರವಾಗಿ ಬಿಡುತ್ತದೆ.
ಅಲ್ಲದೆ ಪ್ರತಿ ದಿನ ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದಲೂ ಬಿಳಿ ಕೂದಲಿನ ಸಮಸ್ಯೆ ಬುಡದಿಂದಲೇ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು,ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.