ಬಿಳಿ ಕೂದಲಿಗೆ ಕಡು ಕಪ್ಪು ಬಣ್ಣ ನೀಡುತ್ತದೆ ಈ ತರಕಾರಿ!ತಿಂದರೂ ಸರಿ,ಕೂದಲಿಗೆ ಈ ರೀತಿ ಹಚ್ಚಿದರೂ ಓಕೆ!ರಿಸಲ್ಟ್ ಮಾತ್ರ ಪಕ್ಕಾ!
ಕೂದಲಿನ ಆರೋಗ್ಯಕ್ಕೂ ಸೋರೆಕಾಯಿಗೂ ಬಹಳ ಸಂಬಂಧವಿದೆ. ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ದುಬಾರಿ ಉತ್ಪನಗಳನ್ನು ಬಳಸುವ ಬದಲು ಸೋರೆಕಾಯಿಯನ್ನು ಒಮ್ಮೆ ಬಳಸಿ ನೋಡಿ.
ಬಿಳಿ ಕೂದಲನ್ನು ಮತ್ತೆ ಕಪ್ಪು ಮಾಡಲು ಸೋರೆಕಾಯಿಯನ್ನು ಬಳಸಬಹುದು.ಇದು ಎಲ್ಲಾ ಋತುವಿನಲ್ಲಿಯೂ ಸಿಗುವ ತರಕಾರಿ. ಇದನ್ನು ತಿನ್ನುವುದರಿಂದ ನೈಸರ್ಗಿಕವಾಗಿ ಕೂದಲು ಕಪ್ಪಾಗುವುದಲ್ಲದೆ, ಕೂದಲು ಆರೋಗ್ಯಕರವಾಗಿ ಕಾಂತಿಯುತವಾಗಿ ಬೆಳೆಯುತ್ತದೆ. ಆದ್ದರಿಂದ ಈ ತರಕಾರಿಯನ್ನು ನಿಯಮಿತವಾಗಿ ಸೇವಿಸಿ.
ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು, ಸೋರೆಕಾಯಿಯ ಸಹಾಯದಿಂದ ವಿಶೇಷ ಎಣ್ಣೆಯನ್ನು ತಯಾರಿಸಬಹುದು.ಅದನ್ನು ತಯಾರಿಸಲು ತೆಂಗಿನ ಎಣ್ಣೆಯ ಅಗತ್ಯವಿರುತ್ತದೆ.
ಸೋರೆಕಾಯಿಯನ್ನು ಸಿಪ್ಪೆಯೊಂದಿಗೆ ಕತ್ತರಿಸಿ ಸುಮಾರು 5 ದಿನಗಳವರೆಗೆ ಸೂರ್ಯನ ಕಡು ಬಿಸಿಲಿನಲ್ಲಿ ಒಣಗಿಸಿ. ಒಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ತೆಂಗಿನ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಈ ಎಣ್ಣೆಗೆ ಒಣಗಿದ ಸೋರೆಕಾಯಿಯನ್ನು ಹಾಕಿ ಕುದಿಸಿ. ಸುಮಾರು 15 ರಿಂದ 20 ನಿಮಿಷಗಳ ಕಾಲ ಬೇಯಿಸಿದ ನಂತರ, ಅದನ್ನು ಗ್ಯಾಸ್ ಸ್ಟೌವ್‌ನಿಂದ ತೆಗೆದುಹಾಕಿ ಈಗ ಈ ಎಣ್ಣೆಯನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ನಂತರ ಈ ಎಣ್ಣೆಯನ್ನು ಗಾಜಿನ ಬಾಟಲಿಯಲ್ಲಿ ಹಾಕಿಡಿ.
ರಾತ್ರಿ ಮಲಗುವ ಮುನ್ನ ಇದನ್ನು ಕೂದಲಿಗೆ ಹಚ್ಚಿಕೊಳ್ಳಿ. ನಂತರ ಬೆಳಗ್ಗೆ ಎದ್ದ ನಂತರ ಶುದ್ಧ ನೀರಿನಿಂದ ಕೂದಲನ್ನು ತೊಳೆಯಿರಿ.
ನಿಯಮಿತವಾಗಿ ಈ ಪ್ರಕ್ರಿಯೆಯನ್ನು ಮಾಡಿದರೆ, ಬಿಳಿ ಕೂದಲು ಕೆಲವೇ ದಿನಗಳಲ್ಲಿ ಮತ್ತೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ.ಅದು ಕೂಡಾ ನೈಸರ್ಗಿಕವಾಗಿ. ಮಾತ್ರವಲ್ಲ ಇದು ಬಿಳಿ ಕೂದಲು ಬೆಳೆಯುವುದನ್ನು ಕೂಡಾ ತಡೆಯುತ್ತದೆ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು,ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)