Highest-grossing films: 2023ರಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳು
2023ರಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪೈಕಿ ಅಟ್ಲೀ ನಿರ್ದೇಶನದ, ಸೂಪರ್ ಸ್ಟಾರ್ ಶಾರುಖ್ ಖಾನ್ ನಟನೆಯ ‘ಜವಾನ್’ ಮೊದಲ ಸ್ಥಾನದಲ್ಲಿದೆ. ಈ ಸಿನಿಮಾ ಇದುವರೆಗೆ 1,143 ಕೋಟಿ ರೂ. ಗಳಿಸಿದೆ.
2ನೇ ಸ್ಥಾನದಲ್ಲಿ ಸಿದ್ಧಾರ್ಥ್ ಆನಂದ್ ನಿರ್ದೇಶನದ, ಶಾರುಖ್ ನಟನೆಯ ‘ಪಠಾಣ್’ ಸಿನಿಮಾ ಇದ್ದು, ಇದು ಬರೋಬ್ಬರಿ 1,050.40 ಕೋಟಿ ರೂ. ಗಳಿಕೆ ಮಾಡಿದೆ.
3ನೇ ಸ್ಥಾನದಲ್ಲಿ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ, ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಇದ್ದು, ಇದು ಇದುವರೆಗೆ 862 ಕೋಟಿ ರೂ. ಗಳಿಕೆ ಮಾಡಿದೆ.
4ನೇ ಸ್ಥಾನದಲ್ಲಿ ಅನಿಲ್ ಶರ್ಮಾ ನಿರ್ದೇಶನದ, ಸನ್ನಿ ಡಿಯೋಲ್ ನಟನೆಯ ‘ಗದರ್ 2’ ಇದ್ದು, ಇದು ಇದುವರೆಗೆ 691 ಕೋಟಿ ರೂ. ಗಳಿಸಿದೆ.
5ನೇ ಸ್ಥಾನದಲ್ಲಿ ಲೋಕೇಶ್ ಕನಕರಾಜ್ ನಿರ್ದೇಶನದ, ವಿಜಯ್ ನಟನೆಯ ‘ಲಿಯೋ’ ಇದ್ದು, ಇದು 620 ಕೋಟಿ ರೂ. ಗಳಿಕೆ ಮಾಡಿದೆ.