“15 ದಿನಗಳಿಂದ ಆಕೆ ಸ್ನಾನ ಮಾಡಿಲ್ಲ-ವಾಸನೆ ತಡೆಯೋಕೆ ಆಗುತ್ತಿಲ್ಲ”: ಅತ್ತು ಅತ್ತು ಸುಸ್ತಾದ ಗೆಳೆಯ

Sat, 26 Nov 2022-11:43 am,

ಪ್ರೀತಿಯಲ್ಲಿ ಎಂತೆಂತಹ ಹೊಂದಾಣಿಕೆಯನ್ನು ಕಂಡಿರುತ್ತೇವೆ. ಕೆಲವರು ಸಂಗಾತಿಯ ಗೊರಕೆಯನ್ನು ಸಹಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ತಮ್ಮ ಸಂಗಾತಿಗೆ ಇಷ್ಟ ಎಂದು, ತಮಗೆ ಇಷ್ಟ ಇಲ್ಲದಿರುವ ಕೆಲಸಗಳನ್ನು ಮಾಡಲು ಒಪ್ಪಿಕೊಳ್ಳುತ್ತಾರೆ. ಹೀಗೆ ಅನೇಕ ವಿಚಾರಗಳನ್ನು ನಾವು ಕೇಳಿರುತ್ತೇವೆ ಹಾಗೆಯೇ ನೋಡಿರುತ್ತೇವೆ. ಆದರೆ ಇಲ್ಲೊಂದು ವಿಲಕ್ಷಣ ಘಟನೆ ನಡೆದಿದೆ.

ಹುಡುಗನೊಬ್ಬ ತನ್ನ ಗೆಳತಿ ಸ್ನಾನ ಮಾಡಲು ಇಷ್ಟಪಡುವುದಿಲ್ಲ. ತುಂಬಾ ಕಷ್ಟಪಟ್ಟು 15 ದಿನಕ್ಕೊಮ್ಮೆ ಸ್ನಾನ ಮಾಡುತ್ತಾಳೆ. ಇದರಿಂದ ನನಗೆ ವಾಸನೆ ತಡೆಯಲು ಆಗುತ್ತಿಲ್ಲ. ಸಮಸ್ಯೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾನೆ.  ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿನೊಬ್ಬ ತನ್ನ ದುಃಖದ ಕಥೆ ಹೇಳಿದಾಗ ಕೆಲವರು ನಕ್ಕಿದ್ದಾರೆ. ಜೊತೆಗೆ ಕೆಲವರು ದಿನನಿತ್ಯ ಸ್ನಾನ ಮಾಡಿ ಎಂದು ಗೆಳತಿಗೆ ಸಲಹೆ ನೀಡಿದ್ದಾರೆ. ಇದು ದೊಡ್ಡ ವಿಷಯವಲ್ಲ ಎಂದು ನಿಮಗೆ ಅನಿಸಬಹುದು. ಆದರೆ ಆ ಹುಡುಗನ ಸ್ಥಾನದಲ್ಲಿ ನಿಂತು ಆಲೋಚಿಸಿ.

ಹೆಚ್ಚು ಎಂದರೆ 2-3 ದಿನ ಸ್ನಾನ ಮಾಡದೆ ಇರಬಹುದು. ಆದರೆ ನನ್ನ ಗೆಳತಿ 2 ವಾರಗಳವರೆಗೆ ಸ್ನಾನ ಮಾಡುವುದಿಲ್ಲ ಎಂದು ದುಃಖಿತ ಪ್ರೇಮಿ ತನ್ನ ದುಃಖದ ಕಥೆಯನ್ನು ಹೇಳಿಕೊಂಡಿದ್ದಾನೆ. ಇಬ್ಬರೂ ಸುಮಾರು 3 ವರ್ಷಗಳಿಂದ ಒಟ್ಟಿಗೆ ವಾಸವಾಗಿದ್ದಾರೆ. ಅವನು ಅವಳೊಂದಿಗೆ ಸಂತೋಷವಾಗಿದ್ದಾನೆ. ಗೆಳತಿಯ ಈ ಕೊಳಕು ಅಭ್ಯಾಸ ಅವನಿಗೆ ತುಂಬಾ ನೋವುಂಟು ಮಾಡಿದೆ.

ಲಿವ್-ಇನ್ ಆರಂಭದ ದಿನಗಳಲ್ಲಿ ಆತನಿಗೆ ಯಾವುದೇ ತೊಂದರೆ ಇರಲಿಲ್ಲ. 15 ದಿನಗಳ ಕಾಲ ಸ್ನಾನ ಮಾಡದಿದ್ದಾಗ ದುರ್ವಾಸನೆ ಬರುತ್ತಿದೆ ಎಂದು ಬಾಯ್‌ಫ್ರೆಂಡ್ ಹೇಳಿದ್ದಾನೆ. ಸ್ನಾನ ಮಾಡಲು ಹೇಳಿದಾಗ ನನ್ನ ಮೇಲೆ ರೇಗಾಡುತ್ತಾಳೆ. ಕೂಗಾಡುತ್ತಾಳೆ.  ಆದ್ದರಿಂದ ನಾನು ಅವಳಿಂದ ಬೇರೆ ಮಲಗುತ್ತೇನೆ ಎಂದು ಹೇಳಿಕೊಂಡಿದ್ದಾನೆ.

ಸೋಷಿಯಲ್ ಮೀಡಿಯಾ ಫೋರಂ ರೆಡ್ಡಿಟ್‌ನಲ್ಲಿ ಗೆಳೆಯನ ಈ ದುಃಖದ ಕಥೆಯನ್ನು ಕೇಳಿದ ನಂತರ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಬಾಯ್‌ಫ್ರೆಂಡ್ ಹೀಗೆ ಹೇಳುತ್ತಾನೆ: “ನಾನು ಆಕೆಯನ್ನು ತುಂಬಾ ಪ್ರೀತಿಸುತ್ತೇನೆ. ಆದ್ದರಿಂದ ಆಕೆಯನ್ನು ದೂರಮಾಡಲು ಸಾಧ್ಯವಿಲ್ಲ. ಸ್ನಾನ ಮಾಡದ ಅವಳ ಅಭ್ಯಾಸದಿಂದ ಅಸಮಾಧಾನಗೊಂಡಿದ್ದೇನೆ. ಇದಕ್ಕೆ ಏನು ಪರಿಹಾರ” ಎಂದು ಜನರಿಂದ ಸಲಹೆಗಳನ್ನೂ ಕೇಳಿದ್ದಾನೆ.

ಈ ಕಥೆ ಕೇಳಿದ ಕೆಲವರು ಗೆಳತಿ ಬಳಿ ಪ್ರತಿದಿನ ಸ್ನಾನ ಮಾಡದಿದ್ದರೆ ಏನು ಅಪಾಯವಿದೆ ಎಂಬುದರ ಬಗ್ಗೆ ತಿಳಿಸಿ ಹೇಳಿ ಎಂದಿದ್ದಾರೆ, ಇನ್ನೊಬ್ಬ ಆಕೆ ಸ್ನಾನ ಮಾಡದಿದ್ದರೆ ಬೇರ್ಪಡುವಂತೆ ಸಲಹೆ ನೀಡಿದ್ದಾನೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link