ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ಬಾಲಕ ಯುವನ್ ಗೆ ಕಿಚ್ಚ ಸುದೀಪ ಉಡುಗೊರೆಯಾಗಿ ಕೊಟ್ಟ ಬ್ರೆಸ್ಲೈಟ್ ಬೆಲೆ ಎಷ್ಟು ಗೊತ್ತಾ ? ಬಿಗ್ ಬಾಸ್ ಸ್ಪರ್ಧಿಗಳೂ ಗೆದ್ದಿಲ್ಲ ಅಷ್ಟು ಹಣ !
)
ಬಿಗ್ ಬಾಸ್ ಕಾರ್ಯಕ್ರಮ ಮುಗಿದಾಗಿದೆ. ಇನ್ನು ಮುಂದೆ ಬಿಗ್ ಬಾಸ್ ನಡೆಸಿಕೊಡುವುದಿಲ್ಲ ಎಂದು ಕಿಚ್ಚ್ ಸುದೀಪ ಈಗಾಗಲೇ ಘೋಷಿಸಿ ಆಗಿದೆ.
)
ಈ ಕಾರಣದಿಂದ ಈ ಬಾರಿ ಫಿನಾಲೆಯಲ್ಲಿ ಕಲರ್ಸ್ ವಾಹಿನಿ ಮತ್ತು ಬಿಗ್ ಬಾಸ್ ತನದ ಕಿಚ್ಚ ಸುದೀಪನಿಗಾಗಿ ಆಕ್ಟ್ ಒಂದನ್ನು ಏರ್ಪಡಿಸಿದ್ದರು. ಸುದೀಪ ಮತ್ತು ಅವರ ತಾಯಿಯ ಸಂಬಂಧ ಇದರಲ್ಲಿ ಎದ್ದು ಕಾಣುತ್ತಿತ್ತು.
)
ಇದಾದ ಬಳಿಕ ವೇದಿಕೆಗೆ ಬಂದು ಸುದೀಪನಾಗಿ ಆಕ್ಟ್ ನಲ್ಲಿ ಕಾಣಿಸಿಕೊಂಡ ಪುಟ್ಟ ಬಾಲಕ ಯುವನ್ ಅವರನ್ನು ವೇದಿಕೆಗೆ ಕರೆದು ಮುದ್ದಾಡುತ್ತಾರೆ. ಅವರ ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸುತ್ತಾರೆ.
ಜೊತೆಗೆ ತನ್ನ ಕೈಯ್ಯಲ್ಲಿ ಇದ್ದ ಬ್ರೆಸ್ಲೈಟ್ ಅನ್ನು ಒಂದು ಕ್ಷಣವೂ ಯೋಚಿಸದೆ ಆ ಮಗುವಿಗೆ ಉಡುಗೊರೆ, ಆಶೀರ್ವಾದವಾಗಿ ನೀಡುತ್ತಾರೆ. ಇದೀಗ ಆ ಬ್ರೆಸ್ಲೈಟ್ ಬೆಲೆ ಎಷ್ಟು ಎನ್ನುವುದರ ಚರ್ಚೆ ಆರಂಭವಾಗಿದೆ.
ಮಾಹಿತಿ ಪ್ರಕಾರ ಆ ಬ್ರೆಸ್ಲೈಟ್ ಬೆಲೆ 30 ಲಕ್ಷಕ್ಕೂ ಅಧಿಕ ಎನ್ನಲಾಗಿದೆ. ಅದನ್ನು ಪ್ಲಾಟಿನಂನಲ್ಲಿ ವಜ್ರದ ಹರಳುಗಳನ್ನು ಪೋಣಿಸಿ ಕಟ್ಟಿರುವ ಬ್ರೆಸ್ಲೈಟ್ ಅದು ಎನ್ನಲಾಗಿದೆ.
ತನ್ನ ಪ್ರೀತಿ ತೋರಿಸುವಾಗ ಯಾರಿಗಾದರೂ ಗಿಫ್ಟ್ ನೀಡುವಾಗ ಸುದೀಪ ಎಂದೂ ಅದರ ಬೆಲೆ, ಆಗುವ ಖರ್ಚಿನ ಬಗ್ಗೆ ಯೋಚಿಸುವುದಿಲ್ಲ. ಯಾರಿಗಾದರೂ ಏನಾದರೂ ಕೊಡಬೇಕು ಎನಿಸಿದರೆ ಕೈ ಎತ್ತಿ ನೀಡುತ್ತಾರೆ. ಅದಕ್ಕೇ ಅವರು ಎಲ್ಲರಿಗಿಂತ ಭಿನ್ನವಾಗಿ ಕಾಣುತ್ತಾರೆ.