Brahmastra Cast Fees: 400 ಕೋಟಿ ವೆಚ್ಚದ ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ ಯಾರಿಗೆ ಎಷ್ಟು ಸಂಭಾವನೆ..?

Sat, 10 Sep 2022-8:46 am,

ಕಿರುತೆರೆ ಜಗತ್ತಿನಲ್ಲಿ ಮಿಂಚಿದ ಬಳಿಕ ಮೌನಿ ರಾಯ್ ಈಗ ಬಾಲಿವುಡ್‌ನಲ್ಲಿಯೂ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಈ ನಟಿ ‘ಬ್ರಹ್ಮಾಸ್ತ್ರ’ದ ಪ್ರಮುಖ ಭಾಗವಾಗಿದ್ದಾಳೆ. ಇದರಲ್ಲಿ ಆಕೆ ಜುನೂನ್ ಪಾತ್ರವನ್ನು ನಿರ್ವಹಿಸಿದ್ದಾಳೆ. ಅವರ ಪಾತ್ರ ತುಂಬಾ ಸ್ಟ್ರಾಂಗ್ ಆಗಿದೆ ಎನ್ನಲಾಗಿದೆ. ಅದೇ ರೀತಿ ಮೌನಿ ಈ ಪಾತ್ರಕ್ಕೆ ಲಕ್ಷದಲ್ಲಿ ಅಲ್ಲ ಕೋಟಿಗಳಲ್ಲಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ ಮೌನಿ ಈ ಸಿನಿಮಾಗೆ ಸುಮಾರು 3 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ.       

ಸೌತ್ ಸ್ಟಾರ್ ನಾಗಾರ್ಜುನ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ನಾಗಾರ್ಜುನ ಅವರ ಚಿತ್ರಗಳು ದಕ್ಷಿಣದಲ್ಲಿ ಸಾಕಷ್ಟು ಸದ್ದು ಮಾಡುತ್ತವೆ. ಆದರೆ ಅವರಿಗ ಬಹಳ ವರ್ಷಗಳ ನಂತರ ಬಾಲಿವುಡ್‍ಗೆ ಪುನರಾಗಮನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರಿಗೂ ಪ್ರಮುಖ ಪಾತ್ರವಿದ್ದು, ವರದಿಗಳ ಪ್ರಕಾರ ಇದಕ್ಕಾಗಿ ಅವರು 9 ರಿಂದ 11 ಕೋಟಿ ರೂ. ಸಂಭಾವನೆ ತೆಗೆದುಕೊಂಡಿದ್ದಾರಂತೆ.

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಯಾವುದೇ ಚಿತ್ರದ ಪ್ರಾತಕ್ಕೂ ಜೀವ ತುಂಬುತ್ತಾರೆ. ಇದು ‘ಬ್ರಹ್ಮಾಸ್ತ್ರ’ದ ವಿಮರ್ಶೆಯಲ್ಲಿಯೂ ಸಾಬೀತಾಗಿದೆ. ಈ ಚಿತ್ರದಲ್ಲಿ ಅವರು ಗುರುವಿನ ಪಾತ್ರದಲ್ಲಿದ್ದು, ಇದಕ್ಕಾಗಿ ಅವರು ಭಾರೀ ಮೊತ್ತದ ಸಂಭಾವನೆ ತೆಗೆದುಕೊಂಡಿದ್ದಾರಂತೆ. ವರದಿಗಳ ಪ್ರಕಾರ ಬಿಗ್ ಬಿ 8-10 ಕೋಟಿ ರೂ. ತೆಗೆದುಕೊಂಡಿದ್ದಾರಂತೆ.

ರಣಬೀರ್ ಕಪೂರ್ ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಅವರು ಈ ಚಿತ್ರದಲ್ಲಿ ‘ಶಿವ’ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಇದಕ್ಕಾಗಿ ರಣಬೀರ್ 20-25 ಕೋಟಿ ರೂ. ಚಾರ್ಜ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರ ಹಿಟ್ ಆದಲ್ಲಿ ಅವರ ಸಂಭಾವನೆ ಇನ್ನೂ ದುಪ್ಪಟ್ಟಾಗಲಿದೆ ಎನ್ನಲಾಗುತ್ತಿದೆ.

ನಟಿ ಆಲಿಯಾ ಭಟ್ ಪಾರ್ವತಿ ಅಂದರೆ ‘ಇಶಾ’ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಈ ಪಾತ್ರವು ಸಾಕಷ್ಟು ಪ್ರಶಂಸೆಗೆ ಒಳಗಾಗುತ್ತಿದೆ. ಶುಲ್ಕದ ವಿಷಯಕ್ಕೆ ಬಂದರೆ ಆಲಿಯಾ ರಣಬೀರ್ ಕಪೂರ್‌ಗಿಂತ ಕಡಿಮೆ ಸಂಭಾವನೆ ಪಡೆದಿದ್ದಾರಂತೆ. ಆಲಿಯಾಗೆ 10-12 ಕೋಟಿ ರೂ. ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link