ಹಿತ್ತಲ ತುಂಬಾ ಹರಡಿಕೊಂಡಿರುವ ಈ ಪುಟ್ಟ ಎಲೆ ಸೇವಿಸಿದ ತಕ್ಷಣ ನಾರ್ಮಲ್ ಆಗುವುದು ಬ್ಲಡ್ ಶುಗರ್ !ದಿನಕ್ಕೊಮ್ಮೆ ಸೇವಿಸಿದರೆ ಸಾಕು !
ಮಧುಮೇಹಕ್ಕೆ ನಿತ್ಯ ಔಷಧಿ ತೆಗೆದುಕೊಳ್ಳಲೇ ಬೇಕು. ಒಂದು ದಿನ ತಪ್ಪಿದರೂ ಶುಗರ್ ಲೆವೆಲ್ ಹೆಚ್ಚಾಗಿ ಬಿಡುತ್ತದೆ.ಇದರ ಬದಲು ಈ ಮನೆ ಮದ್ದನ್ನು ಪ್ರಯತ್ನಿಸಿದರೆ ಬ್ಲಡ್ ಶುಗರ್ ಅನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ನಾವಿಲ್ಲಿ ಹಿತ್ತಲ ತುಂಬಾ ಬೆಳೆಯುವ ಒಂದೆಲಗ ಸೊಪ್ಪಿನ ಬಗ್ಗೆ ಹೇಳುತ್ತಿದ್ದೇವೆ. ಒಂದೆಲಗ ಸೊಪ್ಪು ಬ್ಲಡ್ ಶುಗರ್ ರೋಗಿಗಳಿಗೆ ಅಮೃತವಿದ್ದ ಹಾಗೆ.
ಒಂದೆಲಗ ಸೊಪ್ಪು ಸೇವಿಸಿದ ಕೂಡಲೇ ಬ್ಲಡ್ ಶುಗರ್ ಇಳಿಕೆಯಾಗುತ್ತದೆ.ಈ ಸೊಪ್ಪು ಇನ್ಸುಲಿನ್ ಮಟ್ಟವನ್ನು ಸುಧಾರಿಸುತ್ತದೆ.ಈ ಮೂಲಕ ಬ್ಲಡ್ ಶುಗರ್ ನಿಯಂತ್ರಣದಲ್ಲಿ ಇರಲು ಸಹಾಯ ಮಾಡುತ್ತದೆ.
ಒಂದೆಲಗ ಸೊಪ್ಪನ್ನು ಬೆಳಿಗ್ಗೆ ಹಾಗೆಯೇ ಬಾಯಿಗೆ ಹಾಕಿಕೊಂಡು ಜಗಿದು ರಸ ಹೀರಬಹುದು. ಅಥವಾ ಈ ಎಲೆಯನ್ನು ಚೆನ್ನಾಗಿ ಜಜ್ಜಿ ರಸ ತೆಗೆದು ಸೇವಿಸಬಹುದು.
ಇನ್ನೊಂದು ವಿಧಾನವೆಂದರೆ ಈ ಎಲೆಯನ್ನು ಸ್ವಲ್ಪ ಉಜ್ಜಿ ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು.ತಣ್ಣಗಾದ ಮೇಲೆ ಈ ನೀರನ್ನು ಸೇವಿಸಬಹುದು.
ಸ್ವಲ್ಪ ರುಚಿಕರವಾಗಿ ಇರಬೇಕೆಂದರೆ ಎಲೆಗೆ ಮೆಣಸು, ಜೀರಿಗೆ, ಉಪ್ಪು, ನಿಂಬೆ ರಸ ಸೇರಿಸಿ ಚಟ್ನಿ ಮಾಡುವ ಮೂಲಕ ಕೂಡಾ ತಿನ್ನಬಹುದು. ಹೇಗೆ ಸೇವಿಸಿದರೂ ಇದು ಮಧುಮೇಹವನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ