ವಾರದಲ್ಲಿ ಒಂದು ಬಾರಿ ಕೊಬ್ಬರಿ ಎಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿ… ಬೆಳ್ಳಗಾದ ಕೂದಲು ಮರಳಿ ಕಪ್ಪಾಗುತ್ತೆ!
ಬಿಳಿ ಕೂದಲಿನ ಸಮಸ್ಯೆಗಳನ್ನು ಹೋಗಲಾಡಿಸಲು ಅದೆಷ್ಟೋ ರಾಸಾಯನಿಕಯುಕ್ತ ಡೈಗಳನ್ನು ಬಳಕೆ ಮಾಡುತ್ತಾರೆ. ಆದರೆ ಅವೆಲ್ಲದಕ್ಕಿಂತ ಬೆಸ್ಟ್ ಇರುವಂತಹ ಎಣ್ಣೆಯ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.
ಈ ಎಣ್ಣೆಯ ಸಹಾಯದಿಂದ ಕೂದಲು ನೈಸರ್ಗಿಕವಾಗಿ ಕಪ್ಪಾಗಲು ಪ್ರಾರಂಭಿಸುತ್ತದೆ. ಇದಲ್ಲದೆ, ಈ ಎಣ್ಣೆಯು ಬಿಳಿ ಕೂದಲನ್ನು ಬಲವಾಗಿ ಮತ್ತು ಆರೋಗ್ಯಕರವಾಗಿಸಲು ಉತ್ತಮ.
ನೈಸರ್ಗಿಕವಾಗಿ, ದೇಹದ ಮೆಲನಿನ್ ಮಟ್ಟವು ಕಡಿಮೆಯಾದಾಗ, ಕೂದಲಿನಲ್ಲೂ ಪ್ರತಿಫಲಿಸುತ್ತದೆ. ಈ ಮೆಲನಿನ್ ಕಪ್ಪು ಕೂದಲಿಗೆ ಬಣ್ಣವನ್ನು ನೀಡುತ್ತದೆ. ದೇಹದಲ್ಲಿ ಈ ಮೆಲನಿನ್ ಕಡಿಮೆಯಾದಾಗ ಕೂದಲಿನ ಬಣ್ಣ ಬದಲಾಗುತ್ತದೆ.
ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ನೀವು ಈ ಎಣ್ಣೆಯನ್ನು ತಯಾರಿಸಬಹುದು. ಎಣ್ಣೆಯನ್ನು ತಯಾರಿಸಲು, ಮೊದಲು ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಕುದಿಸಿ. ಈಗ ಈ ನೀರಿಗೆ ಕರಿಬೇವಿನ ಸೊಪ್ಪು ಮತ್ತು ಅಲೋವೆರಾ ತುಂಡನ್ನು ಹಾಕಿ. ಈಗ ಒಂದು ಚಮಚ ಅಗಸೆ ಬೀಜಗಳು ಮತ್ತು ಜೀರಿಗೆಯನ್ನು ಸೇರಿಸಿ. ನೀರು ಅರ್ಧಕ್ಕೆ ಬಂದಾಗ ಒಂದು ಕಪ್ ಸಾಸಿವೆ ಎಣ್ಣೆಯನ್ನು ಹಾಕಿ ಸ್ವಲ್ಪ ಕುದಿಸಿ ಬಾಟಲಿಗೆ ತುಂಬಿಸಿ. ಈ ಎಣ್ಣೆಯನ್ನು ಒಂದು ವಾರ ಮನೆಯಲ್ಲಿ ಶೇಖರಿಸಿಡಿ. ನಂತಹ ಬಳಕೆ ಮಾಡಿ. ಈ ಎಣ್ಣೆಯನ್ನು ವಾರಕ್ಕೊಮ್ಮೆ ಬಳಕೆ ಮಾಡಬಹುದು.
ಬಿಳಿ ಕೂದಲು ನಿವಾರಣೆಗೆ ಕರಿಬೇವಿನ ಎಲೆಗಳನ್ನು ಸಹ ಬಳಸಬಹುದು. 2 ಚಮಚ ನೆಲ್ಲಿಕಾಯಿ ಪುಡಿಯನ್ನು 2 ಚಮಚ ಬ್ರಾಹ್ಮಿ ಪುಡಿಯೊಂದಿಗೆ ಬೆರೆಸಿ. ಒಂದು ಹಿಡಿ ಕರಿಬೇವಿನ ಎಲೆಗಳೊಂದಿಗೆ ರುಬ್ಬಿಕೊಳ್ಳಿ. ಪೇಸ್ಟ್ ಮಾಡಲು ಈ ಮಿಶ್ರಣವನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ. ಸುಮಾರು ಅರ್ಧ ಘಂಟೆಯವರೆಗೆ ಕೂದಲಿಗೆ ಹಚ್ಚಿ, ನಂತರ ತೊಳೆಯಿರಿ. ಹೀಗೆ ಮಾಡಿದರೆ ಕೂದಲು ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ.
ಬಿಳಿ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ತೆಂಗಿನ ಎಣ್ಣೆ ಉತ್ತಮ ನೈಸರ್ಗಿಕ ಪರಿಹಾರವಾಗಿದೆ. ತೆಂಗಿನ ಎಣ್ಣೆಯಲ್ಲಿ ನಿಂಬೆ ರಸವನ್ನು ಬೆರೆಸಿ ಬಿಸಿ ಮಾಡಿ. ಕೂದಲನ್ನು ತೊಳೆಯುವ ಒಂದು ಗಂಟೆ ಮೊದಲು, ಈ ಎಣ್ಣೆಯನ್ನು ಹಚ್ಚಿ, ನಂತರ ಚೆನ್ನಾಗಿ ಮಸಾಜ್ ಮಾಡಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.