ಬ್ರಹ್ಮಗಂಟು ಧಾರವಾಹಿ ಅತ್ತಿಗೆ ಪಾತ್ರಧಾರಿ ಪ್ರೀತಿ ನಿಜವಾದ ಪತಿ ಯಾರು?! ಇವರ ಹಿನ್ನಲೆ ಗೊತ್ತಾದ್ರೆ ಶಾಕ್ ಆಗ್ತೀರಾ!!
ಅಕ್ಕನಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಡುವ ತಂಗಿಯ ವಿಭಿನ್ನ ಕಥಾಹಂದರ ಹೊಂದಿರುವ ಬ್ರಹ್ಮಗಂಟು ಧಾರವಾಹಿ ಸದ್ಯ ಕಿರುತೆರೆ ಪ್ರೇಕ್ಷಕರ ಮನೆಗೆದ್ದಿದೆ ಎಂದರೇ ತಪ್ಪಾಗುವುದಿಲ್ಲ..
ಮಿಡಲ್‌ಕ್ಲಾಸ್ ಕುಟುಂಬದಲ್ಲಿ ಹೆಣ್ಣು ಮಕ್ಕಳು ಜನಿಸಿದರೇ ಯಾವ ರೀತಿ ಇರುತ್ತದೆ.. ಎನ್ನುವ ಅದ್ಭುತ ಕಥೆಯನ್ನು ತಿಳಿಸ ಹೊರಟಿರುವ ಈ ಧಾರವಾಹಿಗೆ ಈಗಾಗಲೇ ವೀಕ್ಷಕರ ಬೆಂಬಲ ದೊರಕಿದೆ ಎಂದರೇ ಅತಿಶಯೋಕ್ತಿಯಲ್ಲ..
ಈ ಬ್ರಹ್ಮಗಂಟು ಸಿರೀಯಲ್‌ನಲ್ಲಿ ಕಥಾ ನಾಯಕನ ಅತ್ತಿಗೆ ಪಾತ್ರ ಎಲ್ಲರಿಗೂ ಮೋಡಿ ಮಾಡಿದೆ ಎಂದೇ ಹೇಳಬಹುದು... ಏಕೆಂದರೇ ಅಷ್ಟು ಅಚ್ಚುಕಟ್ಟಾಗಿ ಆ ಪಾತ್ರಕ್ಕೆ ಆ ಪಾತ್ರಧಾರಿ ಹೊಂದಿದ್ದಾರೆ.. ಇದೀಗ ಇವರ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಯನ್ನು ತಿಳಿಯೋಣ..
ಬ್ರಹ್ಮಗಂಟು ಸಿರೀಯಲ್ ಅತ್ತಿಗೆ ಪಾತ್ರಧಾರಿಯ ಹೆಸರು ಪ್ರೀತಿ ಶ್ರೀನಿವಾಸ್.. ನಟಿ ಈ ಧಾರವಾಹಿ ಮೂಲಕ ಕಂಬ್ಯಾಕ್ ಮಾಡಿದ್ದಾರೆ.. ಈ ಹಿಂದೆ ಇವರು ಖಾಸಗಿ ವಾಹಿನಿಯ ವರಲಕ್ಮೀ ಸ್ಟೋರ್ಸ್ ಧಾರವಾಹಿಯಲ್ಲಿ ನಟಿಸಿದ್ದರು..
ಪ್ರೀತಿ ಶ್ರೀನಿವಾಸ್ ಬರೀ ನಟಿಯಾಗಿ ಮಾತ್ರವಲ್ಲದೇ ನಿರೂಪಕಿಯಾಗಿಯೂ ಗಮನ ಸೆಳೆದಿದ್ದಾರೆ.. ಜೊತೆಗೆ ಭರತನಾಟ್ಯ ಕಲಾವಿದೆಯೂ ಹೌದು.. ಸರಸ್ವತಿ ಲಕ್ಷ್ಮೀ ಪ್ರಿಯೆ ಧಾರವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಈ ನಟಿ ಪರಭಾಷೆಯಲ್ಲಿಯೂ ನಟಿಸಿ ಒಳ್ಳೆಯ ಹೆಸರು ಮಾಡಿದ್ದಾರೆ..
ಇನ್ನು ಪ್ರೀತಿ ಅವರ ವೈಯಕ್ತಿಕ ಜೀವನದ ವಿಚಾರಕ್ಕೆ ಬರುವುದಾದರೇ ಇವರು ವೈದ್ಯರನ್ನು ಮದುವೆಯಾಗಿದ್ದಾರೆ.. ಮತೊಂದು ಗೊತ್ತಿಲ್ಲದ ವಿಚಾರವೆಂದರೇ ಇವರಿಗೆ ಒಂದು ಮಗು ಕೂಡ ಇದೆ.. ವೃತ್ತಿ ಜೀವನದಂತೆ ವೈಯಕ್ತಿಕ ಜೀವನವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ ನಟಿ ಪ್ರೀತಿ ಶ್ರೀನಿವಾಸ್..