Sweat Perfume: ಬೆವರು ಸುರಿಸಿ ಅಲ್ಲಲ್ಲಾ... ಬೆವರಿನಿಂದಲೇ ಸಿದ್ಧವಾದ ಪರ್ಫ್ಯೂಮ್ ಇದು! ಡಿಮ್ಯಾಂಡಪ್ಪೋ ಡಿಮ್ಯಾಂಡ್

Wed, 12 Apr 2023-6:46 pm,

29 ವರ್ಷದ ವನೆಸ್ಸಾ ಮೌರಾ ಎಂಬಾಕೆ ತನ್ನ ದೇಹದ ಬೆವರಿನಿಂದಲೇ ಸುಗಂಧ ದ್ರವ್ಯವನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾಳೆ. ಸಾಮಾನ್ಯವಾಗಿ ನಮಗೆ ಪರ್ಫ್ಯೂಮ್ ಎಂದಾಕ್ಷಣ ನೆನಪಾಗೋದು ಘಮ್ ಅಂತಾ ಬೀರುವ ಪರಿಮಳ, ಆದರೆ ಇಲ್ಲೊಬ್ಬ ಮಹಿಳೆ, ತನ್ನ ಬಾಯ್ ಫ್ರೆಂಡ್ ಹೇಳಿದ ಅಂತಾ ಬೆವರನ್ನೇ ಪರ್ಫ್ಯೂಮ್ ಆಗಿ ತಯಾರಿಸಿ ಮಾರುತ್ತಿದ್ದಾಳೆ.

ಅನೇಕ ಫರ್ಫೂಮ್ ಜಾಹೀರಾತುಗಳನ್ನು ನೀವು ನೋಡಿರಬಹುದು, ಹುಡುಗರು ಪರ್ಫ್ಯೂಮ್​’ನ್ನು ಹಾಕಿಕೊಂಡರೆ ಹೆಂಗಳೆಯರು ಫಿದಾ ಆಗೋದು, ಆಕರ್ಷಣೆಗೊಳಪಡುವುದು, ಹೀಗೆ ಅನೇಕ ಕಾನ್ಸೆಪ್ಟ್’ಗಳನ್ನು ಕಾಣಬಹುದು. ಆದರೆ ಇಲ್ಲಿ ಮಹಿಳೆಯೇ ತನ್ನ ದೇಹದ ದ್ರವದಿಂದ ಪರ್ಫ್ಯೂಮ್ ಸಿದ್ಧಪಡಸಿ ಮಾರಾಟ ಮಾಡುತ್ತಿದ್ದಾರೆ.

ಬ್ರೆಜಿಲಿಯನ್ ಮಾಡೆಲ್ ವೆನ್ನಸೆಸ್ಸಾ ಮೌರಾ ಎಂಬಾಕೆ ‘ಸ್ವೆಟ್​ ಪರ್ಫ್ಯೂಮ್ ಬ್ರ್ಯಾಂಡ್’​ ಒಂದನ್ನು ಪ್ರಾರಂಭಿಸಿದ್ದಾರೆ.

ಈ ಸುಗಂಧ ದ್ರವ್ಯದಲ್ಲಿ ಬೆವರು ಕೂಡ ಸೇರಿದೆ. ಬ್ರೆಜಿಲ್ನ ಸಾವೊ ಪಾಲೋದಲ್ಲಿ ವಾಸಿಸುತ್ತಿರುವ ಮಾಡೆಲ್ ವನೆಸ್ಸಾ ಮೌರಾ ಈ ಪರ್ಫ್ಯೂಮ್ ಬ್ರ್ಯಾಂಡ್ ಆರಂಭಿಸಿದ್ದಾರೆ.

ಮೌರಾ ಅವರ ಪ್ರಿಯಕರ ಹಾಗೂ ಮಾಜಿ ಪ್ರಿಯಕರ ಯಾವಾಗಲೂ ನಿನ್ನ ದೇಹದ ವಾಸನೆಯು ಸುಗಂಧಭರಿತವಾಗಿದೆ ಎಂದು ಹೇಳುತ್ತಿದ್ದರಂತೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡ ಮೌರಾ, ತನ್ನ ಬೆವರಿನಿಂದಲೇ ಪರ್ಫ್ಯೂಮ್ ತಯಾರಿಸಲು ಮುಂದಾಗಿದ್ದಾಳೆ.

ಮೌರಾ ಈ ಪರ್ಫ್ಯೂಮ್’ಗೆ ‘ಫ್ರೆಶ್ ಗಾಡೆಸ್ ಪರ್ಫ್ಯೂಮ್’ ಎಂದು ಹೆಸರಿಟ್ಟಿದ್ದಾರೆ. ಇದರಲ್ಲಿ ಆಕೆಯ ಬೆವರಿನ ಹೊರತಾಗಿ ಇತರೆ ಅಂಶಗಳು ಇದೆ. ಒಂದು ಬಾಟಲಿಯಲ್ಲಿ 8 ಮಿಲಿ ಬೆವರನ್ನು ಬೆರೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ವರದಿ ಪ್ರಕಾರ ಈ ಪರ್ಫ್ಯೂಮ್ ಬೆಲೆ 50ml ​ಗೆ 138 ಡಾಲರ್​ ಇದೆ. ಅಂದರೆ 11 ಸಾವಿರ ರೂಪಾಯಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link