ಅಂದು ಬಾಲನಟಿಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಈಗ ದಂತದ ಗೊಂಬೆಯೇ...! ಈ ನಟಿಗೆ ಈಗ ವಯಸ್ಸೆಷ್ಟು ಗೊತ್ತಾ? ಮದುವೆಯಾಗಿದ್ಯಾ...? ಏನ್‌ ಮಾಡ್ತಿದ್ದಾರೆ...?

Mon, 11 Nov 2024-5:16 pm,

ಬೇಬಿ ಶಾಮಿಲಿ... ಈ ಹೆಸರು ಕೇಳದವರುಂಟೇ? ಅಂದು ಬಾಲ ಕಲಾವಿದೆಯಾಗಿ ನಟಿಸಿ ಅದೆಷ್ಟೋ ಹಿಟ್‌ ಸಿನಿಮಾಗಳನ್ನು ನೀಡಿದವರು. ಆದರೆ ಇಂದು ಆಕೆಯ ಸುಳಿವೇ ಇಲ್ಲದಂತಾಗಿದೆ. ಅಷ್ಟಕ್ಕೂ ಆ ನಟಿ ಎಲ್ಲಿದ್ದಾರೆ? ಮದುವೆಯಾಗಿದ್ಯಾ? ಈಗ ಆಕೆಯ ವಯಸ್ಸೆಷ್ಟು? ಎಂಬೆಲ್ಲಾ ವಿಚಾರಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.

ಹಲವಾರು ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿಯೇ ಅಭಿನಯಿಸಿ ಮೆಚ್ಚುಗೆ ಗಳಿಸಿದ್ದ ನಟಿ ಬೇಬಿ ಶಾಮಿಲಿ, ತಮ್ಮ ಮುದ್ದಾದ ಮಾತುಗಳಿಂದಲೇ ಜನರನ್ನು ಆಕರ್ಷಿಸುತ್ತಿದ್ದರು.

 

ಜಗತ್ತೇ ಅರಿಯದ ವಯಸ್ಸಲ್ಲಿ ಅದೆಷ್ಟೋ  ಅಭಿಮಾನಿಗಳನ್ನು ಗಳಿಸಿದ್ದ ಬೇಬಿ ಶಾಮಿಲಿಗೆ ಆಗ ವಿಶಿಷ್ಟವಾದ ಐಡೆಂಟಿಟಿ ಇತ್ತು. ಅಷ್ಟೇ ಯಾಕೆ! ಈ ಮಗುವಿನ ಅಭಿನಯ ನೋಡಲೆಂದೇ ಜನ ಥಿಯೇಟರ್‌ಗೆ ಬರುತ್ತಿದ್ದರು.

 

ಬೇಬಿ ಶಾಮಿಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಅನೇಕ ಭಾಷೆಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಆ ನಂತರ ಚಿತ್ರರಂಗದಿಂದ ದೂರವಾದರು. ಹಲವು ವರ್ಷಗಳ ನಂತರ ಸಿದ್ಧಾರ್ಥ್ ಅಭಿನಯದ ಓಯ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಮತ್ತೆ ನಾಯಕಿಯಾಗಿ ಎಂಟ್ರಿಕೊಟ್ಟಿದ್ದರು. ಆದರೆ ಅದೃಷ್ಟ ಕೈಹಿಡಿಯಲಿಲ್ಲ. ಇನ್ನೂ ಕೆಲವರು ಆಕೆಗಿದ್ದ ಅಹಂಕಾರವೇ ಸಿನಿಮಾದಲ್ಲಿ ಅವಕಾಶ ಕಳೆದುಕೊಳ್ಳುವಂತೆ ಮಾಡಿತು ಎನ್ನುತ್ತಾರೆ. ಆದರೆ ಇದೆಷ್ಟು ಸತ್ಯ ಎಂಬುದು ತಿಳಿಯದ ಸಂಗತಿ.

 

ಇನ್ನು ಶಾಮಿಲಿ ಜನಿಸಿದ್ದು 10 ಜುಲೈ 1987 ರಂದು. ಕೇರಳದಲ್ಲಿ ಜನಿಸಿದ ಅವರಿಗೆ ಈಗ 37 ವರ್ಷ ವಯಸ್ಸು. ತಮ್ಮ ಮೂರನೇ ವಯಸ್ಸಿನಲ್ಲೇ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು, ಹಲವು ಚಿತ್ರಗಳಲ್ಲಿ ನಟಿಸಿದ್ದರೂ ನಾಯಕಿಯಾಗಿ ಮಾಡಿದ್ದು ಒಂದು ಸಿನಿಮಾ ಮಾತ್ರ. ಆ ನಂತರ ಶಾಮಿಲಿ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಅಂದಹಾಗೆ ಅವಿವಾಹಿತೆಯಾಗಿರುವ ಶಾಮಿಲಿ ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link