Brihaspati Gochar 2023: ಮುಂದಿನ 15 ತಿಂಗಳು ಗುರು ದೆಸೆಯಿಂದ ಈ 3 ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭದ ಯೋಗ!
ಮಿಥುನ ರಾಶಿ: ಗುರುವಿನ ರಾಶಿ ಪರಿವರ್ತನೆ ನಿಮಗೆ ಅತ್ಯಂತ ಪ್ರಯೋಜನಕಾರಿ ಎಂದು ಸಾಬೀತಾಗಬಹುದು. ಏಕೆಂದರೆ ಗುರು ಗ್ರಹವು ನಿಮ್ಮ ಸಂಕ್ರಮಣದ ಜಾತಕದ ಲಾಭದಾಯಕ ಸ್ಥಳದಲ್ಲಿ ಸಾಗಲಿದೆ. ಹೀಗಾಗಿ ನೀವು ಸಾಕಷ್ಟು ಬುದ್ಧಿವಂತಿಕೆ, ಸ್ಪರ್ಧಾತ್ಮಕ ಪರೀಕ್ಷೆಯ ಲಾಭ ಮತ್ತು ಧನಲಾಭವನ್ನು ಈ ಅವಧಿಯಲ್ಲಿ ನೋಡುವ ಸಾಧ್ಯತೆ ಇದೆ. ಇದರೊಂದಿಗೆ, ಗುರುವಿನ ಎರಡನೇ ದೃಷ್ಟಿ ನಿಮ್ಮ ಸಂಚಾರ ಜಾತಕದ ವೈವಾಹಿಕ ಜೀವನದ ಮೇಲೆ ಇರಲಿದೆ. ಹೀಗಾಗಿ ಈ ಸಮಯದಲ್ಲಿ ನಿಮಗೆ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಇದರೊಂದಿಗೆ ನಿಮ್ಮ ಇಷ್ಟಾರ್ಥಗಳೂ ನೆರವೇರಲಿವೆ. ಸಂತಾನದ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳು ಬರಬಹುದು. ಬಾಲಸಂಗಾತಿಯ ಪ್ರಗತಿಗೂ ಕೂಡ ಅಪಾರ ಅವಕಾಶಗಳು ಇರಲಿವೆ.
ಮೇಷ ರಾಶಿ: ದೇವಗುರು ಬೃಹಸ್ಪತಿ ನಿಮ್ಮ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಇದು ನಿಮ್ಮ ಪಾಲಿಗೆ ಅತ್ಯಂತ ಮಂಗಳಕರ ಮತ್ತು ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ದೇವಗುರುವಿನ ದೃಷ್ಟಿ ನಿಮ್ಮ ಪ್ರಗತಿ, ಸಂಪತ್ತು ಮತ್ತು ಸಂತಾನ ಭಾವದ ಮೇಲೆ ಇರಲಿದೆ. ಇದರೊಂದಿಗೆ ಆತನ ಎರಡನೇ ದೃಷ್ಟಿ ನಿಮ್ಮ ಅದೃಷ್ಟ ಭಾವದ ಮೇಲೆ ಇರಲಿದೆ. ಹೀಗಾಗಿ, ಮುಂಬರುವ 15 ತಿಂಗಳುಗಳಲ್ಲಿ ನೀವು ಅಪಾರ ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು. ಅದೃಷ್ಟ ಕೂಡ ನಿಮ್ಮೊಂದಿಗೆ ಇರುತ್ತದೆ. ಧರ್ಮ-ಆಧ್ಯಾತ್ಮದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಮತ್ತೊಂದೆಡೆ, ಈ ಸಮಯವು ವ್ಯಾಪಾರ ವರ್ಗಕ್ಕೆ ಉತ್ತಮವೆಂದು ಸಾಬೀತಾಗಲಿದೆ. ಇದರೊಂದಿಗೆ ಹೂಡಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಅಪಾರ ವಿತ್ತೀಯ ಲಾಭವನ್ನೂ ಪಡೆಯಬಹುದು. ಸಮಾಜದಲ್ಲಿ ಘನತೆ-ಗೌರವ ಹೆಚ್ಚಾಗಲಿದೆ. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲಿದ್ದಾರೆ.
ಕರ್ಕ ರಾಶಿ: ದೇವಗುರು ಬೃಹಸ್ಪತಿಯ ಈ ಸಂಚಾರವು ಕರ್ಕ ರಾಶಿಯವರಿಗೆ ಒಂದು ವರದಾನಕ್ಕಿಂತ ಕಡಿಮೆಯಿಲ್ಲ ಎಂದು ಹೇಳಿದರೆ ಅತಿಶಯೋಕ್ತಿ ಎನಿಸಲಾರದು. ಏಕೆಂದರೆ ಗುರುವು ನಿಮ್ಮ ಸಂಕ್ರಮಣ ಜಾತಕದ ಕರ್ಮಸ್ಥಾನದಲ್ಲಿ ಸ್ಥಿತನಾಗಿರಲಿದ್ದಾನೆ ಮತ್ತು ಆತನ ದೃಷ್ಟಿ ನಿಮ್ಮ ಆರ್ಥಿಕ ಭಾವದ ಮೇಲೆ ಇರಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಸೌಕರ್ಯಗಳು ಮತ್ತು ಸೌಲಭ್ಯಗಳು ಹೆಚ್ಚಾಗಬಹುದು. ಇದರೊಂದಿಗೆ, ನೀವು ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸನ್ನು ಪಡೆಯಬಹುದು. ಇದೇ ವೇಳೆ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ವಾಹನ ಮತ್ತು ಆಸ್ತಿಯನ್ನು ಸಹ ಖರೀದಿಸಬಹುದು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಮಾಹಿತಿ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಃತಿಯನ್ನು ಖಚಿತಪಡಿಸುವುದಿಲ್ಲ)