ಬದನೆಕಾಯಿ ಯಲ್ಲಿದೆ ಬಿಳಿ ಕೂದಲಿಗೆ ಮದ್ದು... ಈ ರೀತಿ ಬಳಸಿದರೆ ಮರಳಿ ಬಿಳುಪಾಗೋದೇ ಇಲ್ಲ ಕೂದಲು!
ಬಿಳಿ ಕೂದಲನ್ನು ಮರಳಿ ಕಪ್ಪಾಗಿಸಲು ಹಲವು ಮನೆಮದ್ದುಗಳಿವೆ. ಅವುಗಳಲ್ಲಿ ಒಂದು ಬದನೆಕಾಯಿ. ಬದನೆಕಾಯಿಯನ್ನು ಈ ರೀತಿ ಬಳಸುವುದರಿಂದ ಕಪ್ಪು ಉದ್ದ ಕೂದಲು ನಿಮ್ಮದಾಗುವುದು.
ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ. ಬದನೆಕಾಯಿಯನ್ನು ಕತ್ತರಿಸದೆ ಇಡಿಯಾಗಿ ಅದರಲ್ಲಿಟ್ಟು ಫ್ರೈ ಮಾಡಿ. ಬದನೆಕಾಯಿಯ ಸಿಪ್ಪೆಯ ಬಣ್ಣ ಬದಲಾದ ಬಳಿಕ ಅದನ್ನು ಹೊರ ತೆಗೆಯಿರಿ.
ಸಾಸಿವೆ ಎಣ್ಣೆಗೆ ರೋಸ್ಮರಿ ಎಲೆಗಳು ಮತ್ತು ಸೀಗೆಕಾಯಿಯನ್ನು ಸೇರಿಸಿ. ಇದಕ್ಕೆ ಸ್ವಲ್ಪ ಮೆಂತೆಕಾಳುಗಳನ್ನು ಹಾಕಿ ಎಲ್ಲಾ ಪದಾರ್ಥಗಳನ್ನು ಎಣ್ಣೆಯಲ್ಲಿ ಚೆನ್ನಾಗಿ ಕುದಿಸಿ.
ಹುರಿದ ಬದನೆಕಾಯಿಯನ್ನು ಕತ್ತರಿಸಿ ಅದರಲ್ಲಿ ಬೆರೆಸಿ. ಈ ಎಣ್ಣೆಯನ್ನು ಚೆನ್ನಾಗಿ ಕುದಿಸಿ. ಎಣ್ಣೆಯ ಬಣ್ಣ ಬದಲಾದ ಬಳಿಕ ಫಿಲ್ಟರ್ ಮಾಡಿ ಬಾಟಲಿಯಲ್ಲಿ ತುಂಬಿಸಿ ಶೇಖರಿಸಿಡಿ.
ವಾರದಲ್ಲಿ ಎರಡರಿಂದ ಮೂರು ಬಾರಿ ಈ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳಿ. ಇದರಿಂದ ಕೂದಲು ಉದುರುವಿಕೆ ನಿಲ್ಲುತ್ತದೆ. ಜೊತೆಗೆ ಬಿಳಿ ಕೂದಲು ಕಪ್ಪಾಗುವುದು.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.