Bajji Recipe: ಸಂಜೆ ಸ್ನ್ಯಾಕ್ಸ್‌ಗೆ ಮನೆಯಲ್ಲೇ ತಯಾರಿಸಿ ಬದನೆಕಾಯಿ ಬಜ್ಜಿ.!
ಬದನೆಕಾಯಿ ಬಜ್ಜಿ ಮಾಡಲು ಬೇಕಾಗುವ ಸಾಮಾಗ್ರಿಗಳು: ಉದ್ದಕ್ಕೆ ಕತ್ತರಿಸಿದ ಬದನೆಕಾಯಿ, ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಜೀರಿಗೆ, ಅರಿಶಿನ, ಎಣ್ಣೆ.
ಮಸಾಲಾ ಪೇಸ್ಟ್ ಗೆ ಬೇಕಾಗುವ ಪದಾರ್ಥಗಳು: ಈರುಳ್ಳಿ, ಹಸಿ ಮೆಣಸಿನಕಾಯಿ, ಜೀರಿಗೆ, ಹುಣಸೆಹಣ್ಣು, ಉಪ್ಪು, ಕೊತ್ತಂಬರಿ ಸೊಪ್ಪು, ಅರಿಶಿನ.
ಮೊದಲು ಬದನೆಕಾಯಿ ಬಜ್ಜಿಗೆ ಮಸಾಲಾ ಪೇಸ್ಟ್ ಅನ್ನು ತಯಾರಿಸಬೇಕು. ಇದಕ್ಕಾಗಿ ಮೇಲೆ ಹೇಳಿದ ಮಸಾಲಾ ಪೇಸ್ಟ್ ಬೇಕಾದ ಪದಾರ್ಥಗಳನ್ನು ಮಿಕ್ಸಿ ಜಾರ್ ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು.
ರುಬ್ಬಿದ ಪೇಸ್ಟ್‌ನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಬೇಕು. ಬದನೆಕಾಯಿಗಳನ್ನು ತೆಗೆದುಕೊಂಡು ಕತ್ತರಿಸಿ ಬಿಸಿ ನೀರಿನಲ್ಲಿ ಹಾಕಿ 15 ರಿಂದ 18 ನಿಮಿಷಗಳ ಕಾಲ ಇಡಿ.
ಬಿಸಿ ನೀರಿನಿಂದ ಬದನೆಕಾಯಿ ತೆಗೆದು ಮಸಾಲಾ ಪೇಸ್ಟ್ ಅನ್ನು ಬದನೆಕಾಯಿ ಸ್ಲೈಸ್‌ಗಳಿಗೆ ಹಚ್ಚಿ ಪಕ್ಕಕ್ಕೆ ಇಡಿ.. ನಂತರ ಇನ್ನೊಂದು ಬೌಲ್ ತೆಗೆದುಕೊಂಡು ಅದಕ್ಕೆ ಕಡಲೆ ಬೇಳೆ ಹಿಟ್ಟು, ಅಕ್ಕಿಹಿಟ್ಟು, ಅರಿಶಿನ ಜೀರಿಗೆ, ಅಡಿಗೆ ಸೋಡಾ ಹಾಕಿ ಬಜ್ಜಿ ಹಿಟ್ಟಿನ ಹಾಗೆ ಕಲಿಸಿ.
ಒಲೆಯ ಮೇಲೆ ದೊಡ್ಡ ಬಾಣಲೆಯನ್ನು ಇಟ್ಟು ಮತ್ತು ಎಣ್ಣೆ ಹಾಕಿ. ಸ್ಟಫ್ ಮಾಡಿದ ಬದನೆಕಾಯಿಗಳನ್ನು ಒಂದೊಂದಾಗಿ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಹಾಕಿ. ಮಧ್ಯಮ ಉರಿಯಲ್ಲಿ ಚೆನ್ನಾಗಿ ಕರಿಯಿರಿ. ಬಣ್ಣ ಬದಲಾದ ಬಳಿಕ ಎಣ್ಣೆಯಿಂದ ಹೊರ ತೆಗೆಯಿರಿ. ಈಗ ಬಿಸಿ ಬದನೆಕಾಯಿ ಬಜ್ಜಿಯನ್ನು ಸವಿಯಿರಿ.