BSNL 4G: ಏರ್ಟೆಲ್, ಜಿಯೋಗೆ ಟಕ್ಕರ್, ₹ 150ಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಬಿಎಸ್‌ಎನ್‌ಎಲ್ ಜಬರ್ದಸ್ತ್ ಪ್ಲಾನ್!
ರಿಲಯನ್ಸ್ ಜಿಯೋ, ವೋಡಾಫೋನ್-ಐಡಿಯಾ, ಏರ್ಟೆಲ್ ಕಂಪನಿಗಳು ರಿಚಾರ್ಜ್ ಬೆಲೆ ಏರಿಸುವ ಮೂಲಕ ಗ್ರಾಹಕರಿಗೆ ಶಾಕ್ ನೀಡುತ್ತಿವೆ. ಏತನ್ಮಧ್ಯೆ, ಭಾರತ ಸರ್ಕಾರದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ಕೈಗೆಟುಕುವ ಬೆಲೆಯ ರೀಚಾರ್ಜ್ ಯೋಜನೆಗಳಿಂದಾಗಿ ಹೆಚ್ಚು ಜನಪ್ರಿಯವಾಗುತ್ತಿದೆ.
ಹೌದು, ಹಣದುಬ್ಬರದಿಂದಾಗಿ ಒಂದೆಡೆ ಖಾಸಗಿ ಟೆಲಿಕಾಂ ಕಂಪನಿಗಳು ರಿಚಾರ್ಜ್ ಯೋಜನೆಗಳ ಬೆಲೆಯನ್ನು ಏರಿಸಿವೆ. ಏತನ್ಮಧ್ಯೆ, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ ಅಗ್ಗದ ಬೆಲೆಯ ಜಬರ್ದಸ್ತ್ ಪ್ಲಾನ್ ಒಂದನ್ನು ಘೋಷಿಸಿದೆ. ಜಿಯೋ, ಏರ್ಟೆಲ್, ವೋಡಾಫೋನ್-ಐಡಿಯಾದಂತಹ ಯಾವುದೇ ಟೆಲಿಕಾಂ ಕಂಪನಿಗಳು ಇಂತಹ ಪ್ಲಾನ್ ಘೋಷಿಸಿಲ್ಲ.
ಬಿಎಸ್‌ಎನ್‌ಎಲ್ ಗ್ರಾಹಕರಿಗೆ 30 ದಿನಗಳ ಹೊಸ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ಕೇವಲ ₹150 ಕ್ಕಿಂತಲೂ ಕಡಿಮೆ ಎಂಬುದು ಗಮನಾರ್ಹವಾಗಿದೆ.
ಬಿಎಸ್‌ಎನ್‌ಎಲ್ ₹147 ರೂ. ರಿಚಾರ್ಜ್ ಪ್ಲಾನ್ 30 ದಿನಗಳ ಮಾನ್ಯತೆಯೊಂದಿಗೆ ಬರುವ ಯೋಜನೆಯಾಗಿದೆ.
ಈ ಬಿಎಸ್‌ಎನ್‌ಎಲ್ ಯೋಜನೆಯಲ್ಲಿ ಗ್ರಾಹಕರು ದಿನಕ್ಕೆ ಕೇವಲ ₹4.90 (ತಿಂಗಳಿಗೆ ₹147) ಖರ್ಚು ಮಾಡುವ ಮೂಲಕ ಇಡೀ ತಿಂಗಳು ಯಾವುದೇ ನೆಟ್‌ವರ್ಕ್‌ಗೆ ಅನ್ಲಿಮಿಟೆಡ್ ಕರೆ ಹಾಗೂ 10GB ಡೇಟಾವನ್ನು ಆನಂದಿಸಬಹುದು.
ಮತ್ತೊಂದು ಪ್ರಮುಖ ವಿಷಯವೆಂದರೆ ಬಿಎಸ್‌ಎನ್‌ಎಲ್ ಗ್ರಾಹಕರು ₹147 ರಿಚಾರ್ಜ್ ಪ್ಲಾನ್ ನಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಿಮ್ಮ ಬಿಎಸ್‌ಎನ್‌ಎಲ್ ಕಾಲರ್ ಟ್ಯೂನ್‌ಗಳನ್ನು ಕೂಡ ಪಡೆಯಬಹುದಾಗಿದೆ.