BSNL ಗ್ರಾಹಕರಿಗೆ ಬರುತ್ತಿದೆ Fake KYC SMS: ಎಚ್ಚರಿಕೆಯಿಂದ ಇರುವಂತೆ ಕಂಪನಿ ಸೂಚನೆ
ಟೆಕ್ ಸೈಟ್ keralatalecom ಪ್ರಕಾರ, ದೇಶಾದ್ಯಂತದ ಬಿಎಸ್ಎನ್ಎಲ್ (BSNL) ಗ್ರಾಹಕರಿಗೆ ತಮ್ಮ ಕೆವೈಸಿ ಅಪ್ ಡೇಟ್ ಮಾಡಿಸುವಂತೆ ಎಸ್‌ಎಂಎಸ್ ಕಳುಹಿಸಲಾಗುತ್ತಿದೆ. ಆದರೆ ಬಿಎಸ್ಎನ್ಎಲ್ ಅಂತಹ ಯಾವುದೇ ಸಂದೇಶಗಳನ್ನು ಕಳುಹಿಸುತ್ತಿಲ್ಲ
ಬಿಎಸ್ಎನ್ಎಲ್ ಗ್ರಾಹಕರು ತಮ್ಮ ಕೆವೈಸಿಯನ್ನು ಇಪ್ಪತ್ನಾಲ್ಕು ಗಂಟೆಗಳ ಒಳಗೆ ಅಪ್ ಡೆಟ್ ಮಾಡುವಂತೆ ಹೇಳಲಾಗುತ್ತಿದೆ. ತಪ್ಪಿದರೆ ನಂಬರ್ ಬ್ಲಾಕ್ ಮಾಡುವುದಾಗಿಯೂ ಸಂದೇಶದಲ್ಲಿ ಹೇಳಲಾಗಿದೆ.
ಗ್ರಾಹಕರಿಗೆ CP-SMSFST, AD-VIRINF, CP-BLMKND, BP-ITLINN ಕೋಡ್‌ಗಳಿಂದ ಎಸ್‌ಎಂಎಸ್ ಕಳುಹಿಸಲಾಗುತ್ತಿದೆ. ಅಲ್ಲದೆ ಎಸ್ಎಂಎಸ್ ನಲ್ಲಿ ಒಂದು ಫೋನ್ ನಂಬರ್ ಅನ್ನು ಕೂಡಾ ಕಳುಹಿಸಲಾಗಿದ್ದು, 24 ಗಂಟೆಗಳ ಒಳಗೆ ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಗ್ರಾಹಕರು ತಮ್ಮ ಕೆವೈಸಿ ಅಪ್ ಡೆಟ್ ಮಾಡುವಂತೆ ಸೂಚಿಸಲಾಗುತ್ತಿದೆ.
ಇದೊಂದು Fake SMS ಎಂದು ಬಿಎಸ್ಎನ್ಎಲ್ ಸ್ಪಷ್ಟಪಡಿಸಿದೆ. ಟೆಲಿಕಾಂ ಕಂಪನಿ ಯಾವತ್ತೂ ಕೆವೈಸಿಗಾಗಿ ಗ್ರಾಹಕರಿಗೆ ಸಂದೇಶಗಳನ್ನು ಕಳುಹಿಸುವುದಿಲ್ಲ ಎಂದು ಬಿಎಸ್‌ಎನ್‌ಎಲ್ ಹೇಳಿದೆ.
Fake SMS ಮೂಲಕ ವಂಚಕರು ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ಯಾಂಕ್ ಖಾತೆಯಿಂದ ಹಣವನ್ನು ಕದಿಯುವ ಸಲುವಾಗಿಯೂ ವಂಚಕರು ಈ ಮಾಹಿತಿಯನ್ನು ಉಪಯೋಗಿಸಿಕೊಳ್ಳುವ ಆತಂಕವಿದೆ.
ಅಪರಿಚಿತ ವ್ಯಕ್ತಿಗಳೊಂದಿಗೆ ಯಾವತ್ತೂ Aadhar, PAN ಸಂಖ್ಯೆ ಅಥವಾ ಇತರ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಈ ಮಾಹಿತಿಯನ್ನು ಸೈಬರ್ ಕ್ರೈಂನಲ್ಲಿ ಬಳಸುವ ಅಪಾಯವಿರುತ್ತದೆ.