BSNL New Year Offer: ಹೊಸ ವರ್ಷದಲ್ಲಿ 2 ಬೊಂಬಾಟ್ ಅಗ್ಗದ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆಗೊಳಿಸಿದ ಬಿಎಸ್‌ಎನ್‌ಎಲ್
ಬಿಎಸ್‌ಎನ್‌ಎಲ್ ಹೊಸ ವರ್ಷದಲ್ಲಿ ತನ್ನ ಗ್ರಾಹಕರಿಗಾಗಿ ಎರಡು ಆಕರ್ಷಕ ಯೋಜನೆಗಳನ್ನು ಪರಿಚಯಿಸಿದೆ.
ಹೊಸ ವರ್ಷದ ಸಂದರ್ಭದಲ್ಲಿ ಪರಿಚಯಿಸಿರುವ ಈ ಎರಡೂ ಯೋಜನೆಗಳು ಅಗ್ಗದ ರಿಚಾರ್ಜ್ ಯೋಜನೆಗಳಾಗಿದ್ದು ಇದರಲ್ಲಿ ಹಲವು ಪ್ರಯೋಜನಗಳು ಲಭ್ಯವಿವೆ.
ಬಿಎಸ್‌ಎನ್‌ಎಲ್ ಪರಿಚಯಿಸಿರುವ ಈ ಎರಡೂ ಕೈಗೆಟುಕುವ ರಿಚಾರ್ಜ್ ಯೋಜನೆಗಳಲ್ಲಿ ಒಂದು ಯೋಜನೆ 30 ದಿನಗಳ ಮಾನ್ಯತೆಯೊಂದಿಗೆ ಲಭ್ಯವಾಗಲಿದೆ. ಇನ್ನೊಂದು ಯೋಜನೆ 84 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತಿದೆ.
ಬಿಎಸ್‌ಎನ್‌ಎಲ್ 215 ರೂ.ಗಳ ಪ್ರಿಪೇಯ್ಡ್ ಯೋಜನೆಯು 30 ದಿನಗಳ ಮಾನ್ಯತೆಯೊಂದಿಗೆ ಎಂದರೆ ಸಂಪೂರ್ಣ ತಿಂಗಳವರೆಗೆ ಇರುತ್ತದೆ. ಈ ಯೋಜನೆಯಲ್ಲಿ ಅನಿಯಮಿತ ಕರೆ, ನಿತ್ಯ 100 ಎಸ್‌ಎಮ್‌ಎಸ್ ಜೊತೆಗೆ ಪ್ರತಿದಿನ 2ಜಿಬಿ ಡೇಟಾ ಲಭ್ಯವಾಗಲಿದೆ. ದೈನಂದಿನ ಮಿತಿ ಮುಗಿದ ಬಳಿಕ ಇದರಲ್ಲಿ ವೇಗವು 40kbps ಕಡಿಮೆಯಾಗುತ್ತದೆ.
ಬಿಎಸ್‌ಎನ್‌ಎಲ್ 628ರೂ.ಗಳ ಮತ್ತೊಂದು ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. 84ದಿನಗಳ ವ್ಯಾಲಿಡಿಟಿಯೊಂದಿಗೆ ಲಭ್ಯವಿರುವ ಈ ಯೋಜನೆಯಲ್ಲಿ ನಿತ್ಯ 3ಜಿಬಿ ಡೇಟಾ ಸಿಗುತ್ತದೆ. ದೈನಂದಿನ ಕೋಟಾ ಮುಗಿದ ಬಳಿಕ ಇದರ ವೇಗವು 40kbpsಗೆ ಇಳಿಕೆಯಾಗುತ್ತದೆ. ಇದರಲ್ಲಿ ಅನಿಯಮಿತ ಕರೆ, ಉಚಿತ ಎಸ್‌ಎಮ್‌ಎಸ್ ಕೂಡ ಲಭ್ಯವಾಗಲಿದೆ.