BSNL Best Recharge Plan: ಗಣೇಶ ಹಬ್ಬದ ವೇಳೆ ಬಿಎಸ್‌ಎನ್‌ಎಲ್ ಅಗ್ಗದ ಯೋಜನೆ ಬಿಡುಗಡೆ, ₹200 ಕ್ಕಿಂತ ಕಡಿಮೆ ಬೆಲೆಯಲ್ಲಿ ಇಷ್ಟೆಲ್ಲಾ ಪ್ರಯೋಜನ
)
ಖಾಸಗಿ ಟೆಲಿಕಾಂ ಆಪರೇಟರ್‌ಗಳಾದ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳಿಗೆ ಸೆಡ್ಡು ಹೊಡೆದಿರುವ ಬಿಎಸ್‌ಎನ್‌ಎಲ್ ಅಗ್ಗದ ಬೆಲೆಯ ರಿಚಾರ್ಜ್ ಪ್ಲಾನ್ ಘೋಷಿಸಿದೆ.
)
ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಜವರ್ದಸ್ತ್ ಯೋಜನೆಯೊಂದನ್ನು ಘೋಷಿಸಿದೆ.
)
ಬಿಎಸ್‌ಎನ್‌ಎಲ್ ತನ್ನ ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು 70 ದಿನಗಳ ವಿಶೇಷ ರಿಚಾರ್ಜ್ ಯೋಜನೆಯನ್ನು ಪ್ರಕಟಿಸಿದೆ.
ಬಿಎಸ್‌ಎನ್‌ಎಲ್ 70 ದಿನಗಳ ವಿಶೇಷ ಯೋಜನೆಯ ಬೆಲೆ ₹200 ಕ್ಕಿಂತ ಕಡಿಮೆ ಇದ್ದು, ಇದು ಹಲವು ಉತ್ತಮ ವೈಶಿಷ್ಟ್ಯಗಳನ್ನು ನೀಡುತ್ತದೆ.
ಬಿಎಸ್‌ಎನ್‌ಎಲ್ ನ ಈ 70ದಿನಗಳ ಮಾನ್ಯತೆಯೊಂದಿಗೆ ಬರುವ ಯೋಜನೆಯ ಬೆಲೆ ₹ 197. ಹೆಚ್ಚು ಹಣ ಖರ್ಚು ಮಾಡದೆ ತಮ್ಮ ಸಿಮ್ ಅನ್ನು ದೀರ್ಘಕಾಲದವರೆಗೆ ಸಕ್ರಿಯವಾಗಿಡಲು ಬಯಸುವವರಿಗೆ ಈ ಯೋಜನೆ ತುಂಬಾ ಲಾಭದಾಯಕ ಎಂದು ಹೇಳಲಾಗುತ್ತಿದೆ.
ಬಿಎಸ್‌ಎನ್‌ಎಲ್ ₹ 197 ಯೋಜನೆಯ ಪ್ರಯೋಜನಗಳೆಂದರೆ, ಇದರಲ್ಲಿ 18 ದಿನಗಳವರೆಗೆ ಮಾತ್ರ ಫ್ರೀ ಕಾಲ್, ದೈನಂದಿನ 2ಜಿಬಿ ಡೇಟಾ, 100 ಉಚಿತ SMS ಲಭ್ಯವಿರುತ್ತದೆ. ಆದರೆ, ರಿಚಾರ್ಜ್ ಮಾಡದಿದ್ದರೂ ಕೂಡ 70ದಿನಗಳವರೆಗೆ ನಂಬರ್ ಸಕ್ರಿಯವಾಗಿರಲು ಪ್ರಯೋಜನಕಾರಿ ಆಗಿದೆ.