ಬುದ್ಧ ಪೂರ್ಣಿಮಾ 2024: ಬುದ್ಧ ಪೂರ್ಣಿಮೆ ಯಾವಾಗ? ಸ್ನಾನ, ದಾನ & ಪೂಜಾ ಸಮಯ ತಿಳಿಯಿರಿ

Sun, 19 May 2024-12:21 pm,

ಈ ಬಾರಿ ಬುದ್ಧ ಪೂರ್ಣಿಮೆ ಯಾವಾಗ ಎಂಬ ಗೊಂದಲ ಉಂಟಾಗಿದೆ. ಪಂಚಾಂಗದ ಪ್ರಕಾರ, ವೈಶಾಖ ಪೂರ್ಣಿಮಾ ತಿಥಿಯು ಮೇ 22ರಂದು ಸಂಜೆ 6:47ಕ್ಕೆ ಪ್ರಾರಂಭವಾಗುತ್ತದೆ. ಮೇ 23ರಂದು ಸಂಜೆ 7:22ಕ್ಕೆ ಕೊನೆಗೊಳ್ಳುತ್ತದೆ. ಈ ರೀತಿಯಲ್ಲಿ ಉದಯತಿಥಿಯ ಪ್ರಕಾರ ವೈಶಾಖ ಪೂರ್ಣಿಮೆ ಮತ್ತು ಬುದ್ಧ ಪೂರ್ಣಿಮೆಯನ್ನು ಮೇ 23ರ ಗುರುವಾರದಂದು ಆಚರಿಸಲಾಗುತ್ತದೆ. 

ಈ ವರ್ಷ ವೈಶಾಖ ಪೂರ್ಣಿಮೆ ಅಥವಾ ಬುದ್ಧ ಪೂರ್ಣಿಮೆಯಂದು ಸ್ನಾನ ಮತ್ತು ದಾನದ ಸಮಯವು ಮೇ 23ರಂದು ಬೆಳಗ್ಗೆ 4.4ರಿಂದ 5.26ರವರೆಗೆ ಇರುತ್ತದೆ. ಬುದ್ಧ ಪೂರ್ಣಿಮೆಯ ದಿನದಂದು ಪೂಜೆಯ ಸಮಯ ಬೆಗ್ಗೆ 10.35ರಿಂದ ಮಧ್ಯಾಹ್ನ 12.18ರವರೆಗೆ ಇರುತ್ತದೆ. 

ಈ ವರ್ಷ ಬುದ್ಧ ಪೂರ್ಣಿಮೆಯಂದು ಸರ್ವಾರ್ಥ ಸಿದ್ಧಿ ಯೋಗ ಮತ್ತು ಶಿವಯೋಗ ರೂಪುಗೊಳ್ಳುತ್ತಿದೆ. ಈ ದಿನ ಗ್ರಹಗಳು ಮತ್ತು ನಕ್ಷತ್ರಗಳು ಒಟ್ಟಾಗಿ ಅನೇಕ ಅದ್ಭುತ ಯೋಗಗಳನ್ನು ರಚಿಸುತ್ತಿವೆ. ಮೇ 23ರಂದು ಶುಕ್ರ-ಸೂರ್ಯ ಸಂಯೋಗದಿಂದ ಶುಕ್ರಾದಿತ್ಯ ಯೋಗ, ರಾಜಭಂಗ ಯೋಗ. ಇದಲ್ಲದೇ ಗುರು ಶುಕ್ರ ಸಂಯೋಗದಿಂದ ಗಜಲಕ್ಷ್ಮಿ ರಾಜಯೋಗವೂ ನಿರ್ಮಾಣವಾಗುತ್ತಿದೆ. 

ಈ ಮಂಗಳಕರ ಯೋಗಗಳಲ್ಲಿ ಸ್ನಾನ ಮಾಡುವುದು, ದಾನ ಮಾಡುವುದು ಮತ್ತು ಭಗವಾನ್ ವಿಷ್ಣು ಮತ್ತು ಭಗವಾನ್ ಬುದ್ಧನನ್ನು ಪೂಜಿಸುವುದು ಬಹಳ ಪ್ರಯೋಜನಕಾರಿಯಾಗಿದೆ. ನಿಮಗೆ ಗಂಗಾ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಗಂಗಾ ನೀರನ್ನು ಬೆರೆಸಿ ಮನೆಯಲ್ಲಿ ಸ್ನಾನ ಮಾಡಿ. 

ಬುದ್ಧ ಪೂರ್ಣಿಮೆಯಂದು ಬೆಳಗ್ಗೆ ಬೇಗನೆ ಸ್ನಾನ ಮಾಡಿ. ನಂತರ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ. ಇದಾದ ನಂತರ ವಿಧಿವಿಧಾನಗಳ ಪ್ರಕಾರ ವಿಷ್ಣುವನ್ನು ಪೂಜಿಸಿ. ಪೂಜೆಯ ನಂತರ ದಾನ ಮಾಡಲು ಮರೆಯದಿರಿ. ಅಲ್ಲದೆ ಈ ದಿನ ಅರಳಿ ಮರಕ್ಕೆ ನೀರನ್ನು ಅರ್ಪಿಸಬೇಕು. 

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಇದನ್ನು ದೃಢಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link