Buddha Purnima: ಬುದ್ಧ ಪೂರ್ಣಿಮೆಯಂದು ಈ ಕೆಲಸ ಮಾಡುವುದರಿಂದ ಪೂರ್ವಜರ ಆಶೀರ್ವಾದ, ಶುಭ ಫಲ
ಪ್ರತಿ ವರ್ಷ ವೈಶಾಖ ಪೂರ್ಣಿಮೆಯ ದಿನದಂದು ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಭಗವಾನ್ ಬುದ್ಧ ವೈಶಾಖ ಪೂರ್ಣಿಮೆಯಂದು ಜನಿಸಿದರು ಎಂದು ಹೇಳಲಾಗುತ್ತದೆ. ಅಲ್ಲದೆ, ಈ ದಿನ ಭಗವಾನ್ ಬುದ್ಧನು ಬೋಧಗಯಾದಲ್ಲಿ ಜ್ಞಾನೋದಯವನ್ನು ಪಡೆದನು ಎಂತಲೂ ನಂಬಲಾಗಿದೆ.
2024ರಲ್ಲಿ ಇಂದು (ಮೇ 23) ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಇಂದು ಕೆಲವು ಕೆಲಸಗಳನ್ನು ಮಾಡುವುದರಿಂದ ಪಿತೃದೋಷ ನಿವಾರಣೆಯಾಗಿ ತಾಯಿ ಲಕ್ಷ್ಮಿಯ ಆಶೀರ್ವಾದ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ ಏನು ಮಾಡಬೇಕೆಂದು ನೋಡುವುದಾದರೆ...
ಬುದ್ಧ ಪೂರ್ಣಿಮೆಯ ಶುಭ ದಿನದಂದು ಪುಣ್ಯ ನದಿಯಲ್ಲಿ ಸ್ನಾನ ಮಾಡಬೇಕು. ಒಂದೊಮ್ಮೆ ಪುಣ್ಯ ನದಿಗೆ ಹೋಗಲು ಸಾಧ್ಯವಾಗದಿದ್ದರೆ ಮನೆಯಲ್ಲಿ ಸ್ನಾನ ಮಾಡುವ ನೀರಿಗೆ ಗಂಗಾಜಲವನ್ನು ಬೆರೆಸಿ ಸ್ನಾನ ಮಾಡಬೇಕು. ಇದರಿಂದ ಭಗವಾನ್ ವಿಷ್ಣುವಿನ ಆಶೀರ್ವಾದ ದೊರೆಯುತ್ತದೆ ಎನ್ನಲಾಗುವುದು.
ವೈಶಾಖ ಮಾಸದ ಹುಣ್ಣಿಮೆಯ ದಿನ ಪುಣ್ಯ ಸ್ನಾನದ ಬಳಿಕ ಬಡವರಿಗೆ ನಿಮ್ಮ ಕೈಲಾದಮಟ್ಟಿಗೆ ದಾನ ಮಾಡುವುದರಿಂದ ಪೂರ್ವಜರು ಸಂತೋಷಗೊಳ್ಳುತ್ತಾರೆ. ಇದರಿಂದ ಪಿತೃದೋಷ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.
ಬುದ್ಧ ಪೂರ್ಣಿಮಾ ಅಥವಾ ವೈಶಾಖ ಪೂರ್ಣಿಮೆಯ ದಿನ ಬೀಸಣಿಗೆ, ನೀರು ತುಂಬಿದ ಮಣ್ಣಿನ ಮಡಕೆ, ಹಳದಿ ಬಟ್ಟೆ, ಚಪ್ಪಲಿ, ಛತ್ರಿ, ಧಾನ್ಯಗಳು, ಹಣ್ಣುಗಳನ್ನು ದಾನ ಮಾಡುವುದರಿಂದ ಪೂರ್ವಜರಿಂದ ಆಶೀರ್ವಾದ ಪಡೆಯಬಹುದು ಎಂಬ ನಂಬಿಕೆ ಇದೆ.
ವೈಶಾಖ ಪೂರ್ಣಿಮ ದಿನ ಭಗವಾನ್ ಬುದ್ಧನನ್ನು ಆರಾಧಿಸಿ, ಭಗವಾನ್ ವಿಷ್ಣು ಜೊತೆಗೆ ತಾಯಿ ಲಕ್ಷ್ಮಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಲಕ್ಷ್ಮಿ ಪ್ರವೇಶವಾಗುತ್ತದೆ. ಮಾತ್ರವಲ್ಲ, ಲಕ್ಷ್ಮಿಯ ಆಶೀರ್ವಾದವೂ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
ವೈಶಾಖ ಪೂರ್ಣಿಮೆ/ಬುದ್ಧ ಪೂರ್ಣಿಮೆಯ ದಿನ ಬುದ್ಧನ ವಿಗ್ರಹವನ್ನು, ಗೋವುಗಳನ್ನು ಹಾಗೂ ಲಕ್ಷ್ಮಿಗೆ ಇಷ್ಟವಾದ ವಸ್ತುಗಳನ್ನು ಖರೀದಿಸುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.