Budget 2021: Tax ಸ್ಲ್ಯಾಬ್ ಬದಲಾವಣೆ ಇಲ್ಲ. ಆದ್ರೆ ಈ 6 ಬದಲಾವಣೆಗಳು ತುಂಬಾ ಮಹತ್ವದ್ದಾಗಿವೆ

Tue, 02 Feb 2021-1:31 pm,

75 ವರ್ಷಕ್ಕಿಂತ ಮೇಲ್ಪಟ್ಟವರು ಇನ್ಮುಂದೆ ತೆರಿಗೆ ರಿಟರ್ನ್ ಅಂದರೆ ITR ಸಲ್ಲಿಸಬೇಕಿಲ್ಲ ಎಂದು ಬಜೆಟ್ ನಲ್ಲಿ ಘೋಷಿಸಲಾಗಿದೆ. ಕೇವಲ ಪೆನ್ಷನ್ ಮಾತ್ರ ಆದಾಯದ ಮೂಲವಾಗಿರುವ ವೃದ್ಧರಿಗೆ ಇದರ ಲಾಭ ಸಿಗಲಿದೆ.  ಇದರರ್ಥ ಒಂದು ವೇಳೆ ಅವರಿಗೆ ಮನೆ ಬಾಡಿಗೆ, ಅಂಗಡಿ ಅಥವಾ ಇನ್ನಾವುದೇ ಮೂಲಗಳಿಂದ ಆದಾಯ ಬರುತ್ತಿದ್ದರೆ ಅವರು ITR ದಾಖಲಿಸುವುದು ಅನಿವಾರ್ಯವಾಗಿದೆ.

ನೌಕರ ವರ್ಗದ ಅಗ್ಗದ ಮನೆಗಾಗಿ ಪಡೆದ ಸಾಲದ ಮೇಲಿನ ಬಡ್ಡಿ ಮೇಲಿನ ತೆರಿಗೆ ವಿನಾಯ್ತಿ ಒಂದು ವರ್ಷ ಮುಂದುವರೆಯಲಿದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80EEA ಅಡಿ ಸಿಗುತ್ತಿರುವ ಹೆಚ್ಚುವರಿ ತೆರಿಗೆ ವಿನಾಯಿತಿಯನ್ನು ಸರ್ಕಾರ 1 ವರ್ಷ ಮುಂದುವರೆಸಲಿದೆ. ಗೃಹಸಾಲದ ಬಡ್ಡಿ ಮೇಲೆ ಸರ್ಕಾರ 1.5 ಲಕ್ಷ ರೂ. ಹೆಚ್ಚುವರಿ ತೆರಿಗೆ ವಿನಾಯಿತಿ ನೀಡುತ್ತಿದೆ. ಸರ್ಕಾರದ ಈ ಕೊಡುಗೆ 31 ಮಾರ್ಚ್ 2021 ರಂದು ಮುಕ್ತಾಯವಾಗಬೇಕಿತ್ತು. ಆದರೆ, ಇದೀಗ ಅದನ್ನು 31 ಮಾರ್ಚ್ 2022ರವರೆಗೆ ವಿಸ್ತರಿಸಲಾಗಿದೆ.

ಇದುವರೆಗೆ ಆದಾಯ ತೆರಿಗೆ ರಿಟರ್ನ್ ಪಾವತಿಸುವಾಗ ಫಾರ್ಮ್ ನಲ್ಲಿ ಕೇವಲ ಹೆಸರು, ವಿಳಾಸ, ವೇತನದ ಮೇಲೆ ವಿಧಿಸಲಾಗಿರುವ ತೆರಿಗೆ, ದಾಖಲಿಸಲಾಗಿರುವ ತೆರಿಗೆ TDSಗಳಂತಹ ಮಾಹಿತಿ ಮೊದಲೇ ಇರುತ್ತಿದ್ದವು. ಆದರೆ ಇನ್ಮುಂದೆ ಇವುಗಳ ಜೊತೆಗೆ ಫಾರ್ಮ್ ನಲ್ಲಿ ಲಿಸ್ಟೆಡ್ ಸಿಕ್ಯೋರಿಟಿಗಳಿಂದ ಬಂದ ಕ್ಯಾಪಿಟಲ್ ಗೆನ್ಸ್ ಮಾಹಿತಿ, ಡಿವಿಡೆಂಡ್  ಆದಾಯ ಮಾಹಿತಿ ಹಾಗೂ ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ ಗಳಿಂದ ಬಂದ ಬಡ್ಡಿಗಳ ಮಾಹಿತಿಯೂ ಕೂಡ ಇರಲಿದೆ.

ಫೆಸ್ ಲೆಸ್ ಇನ್ಕಮ್ ಟ್ಯಾಕ್ಸ್ ಅಪಿಲೆಟ್ ತ್ರಿಬ್ಯೂನಲ್ ಕುರಿತು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಇದಕ್ಕಾಗಿ ಒಂದು ನ್ಯಾಷನಲ್ ಇನ್ಕಮ್ ಟ್ಯಾಕ್ಸ್ ಅಪಿಲೆಟ್ ತ್ರಿಬ್ಯೂನಲ್ ಸೆಂಟರ್ ತೆರೆಯಲಾಗುತ್ತದೆ. ಈ ನೂತನ ವ್ಯವಸ್ಥೆಯಲ್ಲಿ ಎಲ್ಲಾ ರೀತಿಯ ಸಂವಹನ ಡಿಜಿಟಲ್ ಪದ್ಧತಿಯಿಂದ ನಡೆಯಲಿದೆ. ಅಂದರೆ, ತೆರಿಗೆ ಪಾವತಿದಾರರು ಭೌತಿಕವಾಗಿ ಉಪಸ್ಥಿತರಾಗಿರಬೇಕಾದ ಆವಶ್ಯಕತೆ ಇಲ್ಲ. ಒಂದು ವೇಳೆ ಯಾವುದೇ ಪ್ರಕರಣದಲ್ಲಿ ತೆರಿಗೆ ಪಾವತಿದಾರರ ಭೌತಿಕ ಉಪಸ್ಥಿತಿಯ ಅವಶ್ಯಕತೆ ಬಿದ್ದರೆ, ವಿಡಿಯೋ ಕಾನ್ಫಾರೆನ್ಸಿಂಗ್ ಮೂಲಕ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಬಹುದು.

ಈ ಬಜೆಟ್‌ನಲ್ಲಿ, ತೆರಿಗೆ ಮೌಲ್ಯಮಾಪನವನ್ನು ಪುನಃ ತೆರೆಯುವ ಅವಧಿಯನ್ನು 6 ವರ್ಷದಿಂದ 3 ವರ್ಷಕ್ಕೆ ಇಳಿಸುವುದಾಗಿ ಘೋಷಿಸಲಾಗಿದೆ. ಅಂದರೆ, ಆದಾಯ ತೆರಿಗೆ ವಂಚನೆಯ ಯಾವುದೇ ಪ್ರಕರಣಗಳಲ್ಲಿ (Tax Related Cases) ಕೇವಲ 3 ವರ್ಷಗಳವರೆಗೆ ಕ್ರಮ ತೆಗೆದುಕೊಳ್ಳಬಹುದು. ಈ ಸಮಯದ ಮಿತಿ ಮೊದಲು 6 ವರ್ಷಗಳಾಗಿತ್ತು. ಇದು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಆರೋಪಿಗಳ ವಿರುದ್ಧ ಸರಿಯಾದ ಸಮಯದಲ್ಲಿ ಕ್ರಮ ಕೈಗೊಳ್ಳುವಂತೆ ಆದಾಯ ತೆರಿಗೆ ಇಲಾಖೆಗೆ ಸವಾಲು ಹಾಕುತ್ತದೆ. ಒಂದು ವರ್ಷದಲ್ಲಿ 50 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ತೆರಿಗೆ ವಂಚನೆಯ ಪುರಾವೆಗಳು ಕಂಡುಬಂದ ಗಂಭೀರ ಪ್ರಕರಣಗಳಲ್ಲಿಯೂ ಸಹ, ಅವುಗಳನ್ನು 10 ವರ್ಷಗಳಲ್ಲಿ ಮತ್ತೆ ತೆರೆಯಬಹುದು.

ಈ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ (Nirmala Sitharaman) ತೆರಿಗೆ ಲೆಕ್ಕಪರಿಶೋಧನೆಯ  (Tax Audit) ಮಿತಿಯನ್ನು 5 ಕೋಟಿ ರೂ.ಗಳ ವಹಿವಾಟಿನಿಂದ 10 ಕೋಟಿ ರೂ.ಗೆ ಏರಿಸಿದ್ದಾರೆ. ಈ ಹಿಂದೆ ಅವರು ವಹಿವಾಟನ್ನು 1 ಕೋಟಿಯಿಂದ 5 ಕೋಟಿ ರೂ.ಗೆ ಹೆಚ್ಚಿಸಿರುವುದು ಇಲ್ಲಿ ಉಲ್ಲೇಖನೀಯ. ತಮ್ಮ ಶೇ .95 ರಷ್ಟು ವಹಿವಾಟುಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಮಾಡುವವರಿಗೆ ಇದು ಅನ್ವಹಿಸಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link