ಬಜೆಟ್ ಮಂಡನೆಯಲ್ಲಿ ಪಂಚ ದಾಖಲೆಗಳನ್ನು ಸೃಷ್ಟಿಸಲಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್!
)
ನಾಳಿದ್ದು (ಫೆಬ್ರವರಿ 1) ಬಹುನಿರೀಕ್ಷಿತ ಕೇಂದ್ರ ಬಜೆಟ್ ಮಂಡಿಸಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ವಿಷಯಕ್ಕೆ ಸಂಬಂಧಿಸಿದಂತೆ ಐದು ದಾಖಲೆಗಳನ್ನು ಸೃಷ್ಟಿಸಲಿದ್ದಾರೆ.
)
ನಿರ್ಮಲಾ ಸೀತಾರಾಮನ್ ಅವರ ಸತತ 7ನೇ ಬಜೆಟ್ ಫೆಬ್ರವರಿ 1ರಂದು ಮಂಡನೆಯಾಗಲಿದೆ. ಈವರೆಗೆ ಮುರಾರ್ಜಿ ದೇಸಾಯಿ ಸತತವಾಗಿ 6 ಬಜೆಟ್ ಮಂಡಿಸಿದ್ದರು.
)
ನಿರ್ಮಲಾ ಸೀತಾರಾಮನ್ 2020ರಲ್ಲಿ 2 ಗಂಟೆ 42 ನಿಮಿಷ ಬಜೆಟ್ ಓದಿ ಅತಿ ಹೆಚ್ಚು ಸಮಯದ ಬಜೆಟ್ ಮಂಡಿಸಿದ ದಾಖಲೆಯನ್ನೂ ಬರೆದಿದ್ದಾರೆ.
2019ರಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ ದೇಶದ ಮೊದಲ ಹಣಸಾಸು ಸಚಿವೆ ಎಂಬ ದಾಖಲೆ ಬರೆದರು.
ದೇಶದಲ್ಲಿ ಅತಿ ಹೆಚ್ಚು ಸಮಯ ಹಣಕಾಸು ಇಲಾಖೆ ನಿರ್ವಹಿಸಿದ ಮಹಿಳಾ ಸಚಿವೆಯಾಗಿರುವ ದಾಖೆಲೆಯೂ ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿಯೇ ಇದೆ.
ನಿರ್ಮಲಾ ಸೀತಾರಾಮನ್ 2017ರಿಂದ 2019ರವರೆಗೆ ದೇಶದ ಮೊದಲ ರಕ್ಷಣಾ ಸಚಿವರಾಗಿಯೂ ಕೆಲಸ ಮಾಡಿ ದಾಖಲೆ ನಿರ್ಮಿಸಿದ್ದಾರೆ.