Budh Asta 2023: ಈ 3 ರಾಶಿಯವರ ಕೀರ್ತಿ, ಗೌರವ ಹೆಚ್ಚಿಸಲಿದ್ದಾನೆ ಬುಧ; ಅಪಾರ ಧನಪ್ರಾಪ್ತಿ ಖಚಿತ!

Sun, 23 Apr 2023-8:19 pm,

ನವಗ್ರಹಗಳು ತಮ್ಮ ರಾಶಿಯನ್ನು ನಿರ್ದಿಷ್ಟ ಸಮಯದಲ್ಲಿ ಬದಲಾಯಿಸುತ್ತವೆ ಎಂದು ವೈದಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಇದರ ಜೊತೆಗೆ, ಎಲ್ಲಾ ರಾಶಿಗಳಲ್ಲಿ ಆ ಬದಲವಾವಣೆಯ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳು ಗೋಚರಿಸುತ್ತವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದು ಬುಧ ಗ್ರಹವು ಮೇಷ ರಾಶಿಯಲ್ಲಿ ಅಸ್ತಮಿಸಲಿದೆ. ಇದು ಕೆಲ ರಾಶಿಗಳ ಮೇಲೆ ಶುಭ ಪರಿಣಾಮ ಬೀರಿದರೆ, ಇನ್ನೂ ಕೆಲ ರಾಶಿಗಳ ಮೇಲೆ ಅಶುಭ ಪರಿಣಾಮಗಳನ್ನು ಬೀರುತ್ತದೆ. ಆದರೆ ಇಂದು ಬುಧ ಅಸ್ತಮಿಸಿದಾಗ ಈ ಮೂರು ರಾಶಿಗಳ ಜೀವನದಲ್ಲಿ ಮಂಗಳ ಸಂಭವಿಸಲಿದೆ ಎಂದು ಹೇಳಲಾಗಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ.

ಮೇಷ ರಾಶಿಯವರಿಗೆ ಬುಧ ಗ್ರಹವು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಮೇಷ ರಾಶಿಯ ಜನರು ತಮ್ಮ ಕಠಿಣ ಪರಿಶ್ರಮಕ್ಕೆ ತಕ್ಕನಾಗಿ ಸಂಪೂರ್ಣ ಮತ್ತು ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ. ವ್ಯಾಪಾರ ವರ್ಗದ ಜನರು ಯಶಸ್ಸನ್ನು ಪಡೆಯುತ್ತಾರೆ. ಹೊಸ ವ್ಯಾಪಾರ ಯೋಜನೆಗಳನ್ನು ಕೂಡ ಸಮಯದಲ್ಲಿ ಪ್ರಾರಂಭ ಮಾಡಬಹುದು. ಆತ್ಮವಿಶ್ವಾಸ ಹೆಚ್ಚಾಗಲಿದೆ.

ಮಿಥುನ ರಾಶಿಯವರಿಗೆ ಸಹ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ, ಈ ಜನರು ತಮ್ಮ ವೃತ್ತಿಜೀವನಕ್ಕೆ ಸಂಬಂಧಿಸಿದ ಶುಭ ಸುದ್ದಿಗಳನ್ನು ಪಡೆಯಬಹುದು. ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ, ನೀವು ಅದರಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ.

ಬುಧ ಅಸ್ತಮಿಸಿದ ಕೂಡಲೇ ಕನ್ಯಾ ರಾಶಿಯವರ ಭವಿಷ್ಯ ಬಂಗಾರದಂತೆ ಹೊಳೆಯುತ್ತದೆ. ಈ ಸಮಯದಲ್ಲಿ ಮಾಡಿದ ಕಠಿಣ ಕೆಲಸವು ಭವಿಷ್ಯದಲ್ಲಿ ನಿಮಗೆ ಲಾಭವನ್ನು ನೀಡುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ, ತಜ್ಞರ ಸಲಹೆಯ ಮೇರೆಗೆ ಅದನ್ನು ಮಾಡಿ, ನಿಮಗೆ ಲಾಭ ಸಿಗುತ್ತದೆ. ವ್ಯಾಪಾರ ವರ್ಗಕ್ಕೆ ಸೇರಿದವರು ಯಾವುದೇ ಸ್ಥಳದಲ್ಲಿ ಬಹಳ ಎಚ್ಚರಿಕೆಯಿಂದ ಹೂಡಿಕೆ ಮಾಡಬೇಕು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link