Budh Asta: ಧನು ರಾಶಿಯಲ್ಲಿ ಬುಧ ಅಸ್ತ- ಯಾವ ರಾಶಿಯವರಿಗೆ ಏನು ಫಲ

Mon, 18 Dec 2023-5:35 am,

ವೈದಿಕ ಜ್ಯೋತಿಷ್ಯದಲ್ಲಿ ಬುಧ ಗ್ರಹವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಮಾತ್ರವಲ್ಲ ಬುಧನನ್ನು ತರ್ಕ,  ಮಾತು, ಬುದ್ಧಿವಂತಿಕೆ, ವ್ಯವಹಾರ ಗ್ರಹ ಎಂತಲೂ ಕರೆಯಲಾಗುತ್ತದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ ಗ್ರಹದ ಸ್ಥಾನಮಾನವು ವ್ಯಾಪಾರ, ವಾಣಿಜ್ಯ, ವಾಣಿಜ್ಯ, ಬ್ಯಾಂಕಿಂಗ್, ಮೊಬೈಲ್, ನೆಟ್‌ವರ್ಕಿಂಗ್ ಮತ್ತು ಕಂಪ್ಯೂಟರ್‌ಗಳಿಗೆ ಸಂಬಂಧಿಸಿದ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತದೆ. 

ಜ್ಯೋತಿಷ್ಯದಲ್ಲಿ ಮಂಗಳಕರ ಗ್ರಹಗಳಲ್ಲಿ ಒಂದಾದ ಬುಧ ಗ್ರಹವು ನವೆಂಬರ್ ತಿಂಗಳಾಂತ್ಯದಲ್ಲಿ ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಯನ್ನು ಪ್ರವೇಶಿಸಿದನು. ಕಳೆದ ವಾರವಷ್ಟೇ ತಮ್ಮ ಹಿಮ್ಮುಖ ಚಲನೆಯನ್ನು ಆರಂಭಿಸಿದ್ದ ಬುಧ ಇದೀಗ ಧನು ರಾಶಿಯಲ್ಲಿ ಅಸ್ತಮಿಸಿದ್ದಾನೆ. 

ಸೂರ್ಯನಿಗೆ ಹತ್ತಿರವಾಗುತ್ತಿದ್ದಂತೆ ಅಸ್ತಮಿಸಿರುವ ಬುಧ ಡಿಸೆಂಬರ್ 27, 2023ರಂದು ಉದಯಿಸಲಿದ್ದಾನೆ. ಅಲ್ಲಿಯವರೆಗೆ ಬುಧ ಗ್ರಹದ ಪರಿಣಾಮ ಯಾವ ರಾಶಿಯವರಿಗೆ ಹೇಗಿದೆ ಎಂದು ತಿಳಿಯೋಣ... 

ಈ ಎಂಟು ರಾಶಿಯವರಿಗೆ ಶುಭ :  ಬುಧನ ಹಿಮ್ಮುಖ ಚಲನೆ ಹಾಗೂ ಅಸ್ತಮ ಸ್ಥಿತಿಯೂ ಎಂಟು ರಾಶಿಯವರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಹಾದಿಯನ್ನು ತೆರೆಯಲಿದೆ. ಹೂಡಿಕೆಯಿಂದ ಲಾಭವಾಗಲಿದೆ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಇದು ಅತ್ಯುತ್ತಮ ಸಮಯ. ಆ ಅದೃಷ್ಟದ ರಾಶಿಗಳೆಂದರೆ ಮೇಷ, ಮಿಥುನ, ಸಿಂಹ, ತುಲಾ, ವೃಶ್ಚಿಕ, ಧನು, ಕುಂಭ ಮತ್ತು ಮೀನ ರಾಶಿಗಳು. 

ಈ ರಾಶಿಯವರಿಗೆ ಮಿಶ್ರ ಫಲ:  ಧನು ರಾಶಿಯಲ್ಲಿ ಬುಧನ ಸಂಚಾರದಲ್ಲಿನ ಬದಲಾವಣೆ ಕರ್ಕ ಮತ್ತು ಕನ್ಯಾ ರಾಶಿಯ ಜನರಿಗೆ ಮಿಶ್ರ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. ಹೊಸ ಕೆಲಸದಲ್ಲಿ ಯಶಸ್ಸು, ಪ್ರಗತಿಯನ್ನು ಕಾಣುವಿರಿ. 

ಈ ರಾಶಿಯವರಿಗೆ ಅಶುಭ:  ಧನು ರಾಶಿಯಲ್ಲಿ ಬುಧನ ಸಂಚಾರದಲ್ಲಿನ ಬದಲಾವಣೆಯು ವೃಷಭ ಮತ್ತು ಮಕರ ರಾಶಿಯವರ ಜೀವನದಲ್ಲಿ ಅಶುಭ ಫಲಗಳನ್ನು ನೀಡಲಿದೆ.  ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ದುರ್ಬಲವಾಗಿರಲಿದ್ದು ಹೂಡಿಕೆಯಿಂದ ನಷ್ಟವನ್ನು ಅನುಭವಿಸುವಿರಿ. ಉದ್ಯೋಗಸ್ಥರು ಕೆಲಸ ಬದಲಾಯಿಸಬೇಕಾಗಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link