Budh Gochar 2023: ಮೂರು ದಿನಗಳ ಬಳಿಕ ಈ ರಾಶಿಯವರಿಗೆ ಆರಂಭವಾಗಲಿದೆ ಅಚ್ಚೇ ದಿನ್, ತುಂಬಲಿದೆ ಖಜಾನೆ
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಹಣ, ವ್ಯವಹಾರ, ಮಾತು, ತರ್ಕ ಮತ್ತು ಬುದ್ದಿವಂತಿಕೆಯಕಾರಕ ಎಂದು ಬಣ್ಣಿಸಲ್ಪಡುವ ಬುಧ ಶೀಘ್ರದಲ್ಲೇ ರಾಶಿ ಪರಿವರ್ತನೆ ಹೊಂದಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ, ಇನ್ನೂ ಮೂರು ದಿನಗಳಲ್ಲಿ ಎಂದರೆ 01 ಅಕ್ಟೋಬರ್ 2023ರಂದು ಗ್ರಹಗಳ ರಾಜಕುಮಾರ ಬುಧನು ಕನ್ಯಾ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ.
ಕನ್ಯಾ ರಾಶಿಯ ಅಧಿಪತಿ ಗ್ರಹವೂ ಆಗಿರುವ ಬುಧನು ಅಕ್ಟೋಬರ್ 1 ರಂದು ರಾತ್ರಿ 08:39ಕ್ಕೆ ಸಿಂಹ ರಾಶಿಯನ್ನು ತೊರೆದು ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಇದಲ್ಲದೆ ಬುಧ ಗ್ರಹವು ಅಕ್ಟೋಬರ್ 7 ರಂದು ಸ್ವಾತಿ ನಕ್ಷತ್ರವನ್ನು ಪ್ರವೇಶಿಸಲಿದೆ. ಬಳಿಕ ಅಕ್ಟೋಬರ್ 31 ರಂದು ಸ್ವಾತಿ ನಕ್ಷತ್ರವನ್ನು ತೊರೆದು ಬುಧನು ವಿಶಾಖ ನಕ್ಷತ್ರವನ್ನು ಪವೇಶಿಸಲಿದೆ.
ಸುಮಾರು 23 ದಿನಗಳವರೆಗೆ ಕನ್ಯಾ ರಾಶಿಯಲ್ಲಿ ಸಂಚರಿಸಲಿರುವ ಬುಧನು ಮೂರು ರಾಶಿಯವರ ಜೀವನದಲ್ಲಿ ಭಾಗ್ಯದ ಜ್ಯೋತಿಯನ್ನು ಬೆಳಗಳಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ನೋಡುವುದಾದರೆ...
ಬುಧ ರಾಶಿ ಪರಿವರ್ತನೆಯು ವೃಷಭ ರಾಶಿಯವರಿಗೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ನೀವು ಹಳೆಯ ಸಮಸ್ಯೆಗಳಿಂದ ಮುಕ್ತಿ ಹೊಂದುವಿರಿ. ಮಾತ್ರವಲ್ಲ, ಹಣಕಾಸಿನ ಹರಿವು ಸುಧಾರಿಸಲಿದ್ದು ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ. ನಿಮ್ಮ ವಾಕ್ಚಾತುರ್ಯದಿಂದ ಹಲವು ಸವಾಲುಗಳಿಗೆ ಪರಿಹಾರ ಕಂಡು ಕೊಳ್ಳುವಿರಿ.
ಮಿಥುನ ರಾಶಿಯ ಅಧಿಪತಿ ಗ್ರಹವಾದ ಬುಧ ರಾಶಿ ಬದಲಾವನೆಯು ಈ ರಾಶಿಯವರಿಗೆ ಶುಭಕರ ಫಲಗಳನ್ನು ನೀಡಲಿದ್ದಾನೆ. ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ಸೌಕರ್ಯಗಳು ಹೆಚ್ಚಾಗಲಿದ್ದು, ಐಷಾರಾಮಿ ಜೀವನವನ್ನು ಅನುಭವಿಸುವಿರಿ. ಬೇರೆಡೆ ಸಿಲುಕಿರುವ ಹಣ ನಿಮ್ಮ ಕೈ ಸೇರುವುದರಿಂದ ಮನಸ್ಸಿಗೆ ನೆಮ್ಮದಿ ಲಭಿಸಲಿದೆ.
ಸ್ವ ರಾಶಿಯಲ್ಲಿ ಅಧಿಪತಿ ಗ್ರಹ ಬುಧನ ಪ್ರವೇಶವು ನಿಮ್ಮ ಜೀವನದಲ್ಲಿ ಆಚ್ಛೇದಿನ್ ಅನ್ನು ತಳಿದೆ. ಈ ಸಂದರ್ಭದಲ್ಲಿ ಬುಧನ ಅನುಗ್ರಹದಿಂದ ಸಂಪತ್ತು ವೃದ್ಧಿಯಾಗಲಿದ್ದು, ಭೂಮಿ, ವಾಹನ ಖರೀದಿ ಯೋಗವೂ ಇದೆ. ವ್ಯಾಪಾರಸ್ಥರಿಗೆ ಧನಲಾಭವಾಗಲಿದ್ದು ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಸರಿಯಾದ ಸಮಯ ಇದಾಗಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.