Bad Times: ಮಂಗಳನ ಅಂಗಳದಲ್ಲಿ ಶತ್ರು ಬುಧ! ಈ ರಾಶಿಯವರ ಗ್ರಹಚಾರ ಕೆಡುವ ಜೊತೆ ಸಮಸ್ಯೆಗಳ ಮೂಟೆ ಬೆನ್ನೇರುತ್ತೆ

Sat, 25 Mar 2023-7:56 pm,

ಮಾರ್ಚ್ 31 ರಂದು ಬುಧವು ಮೇಷ ರಾಶಿಗೆ ಪ್ರವೇಶಿಸಿದಾಗ ಮಹಾ ಸಂಯೋಗ ಸಂಭವಿಸುತ್ತದೆ. ಆದರೆ ಈ ಮಹಾ ಸಂಯೋಗವೇ ಕೆಲ ರಾಶಿಯ ಜನರ ಬದುಕನ್ನು ಅಲ್ಲೋಲ ಕಲ್ಲೋಲವನ್ನಾಗಿಸುತ್ತದೆ.

ಮೇಷ ರಾಶಿಯಲ್ಲಿ ಈಗಾಗಲೇ ಶುಕ್ರ ಮತ್ತು ರಾಹು ಇದ್ದಾರೆ. ಮಾರ್ಚ್ 31 ರಂದು ಬುಧ ಮೇಷ ರಾಶಿಯನ್ನು ಪ್ರವೇಶಿಸುತ್ತದೆ. ಮೂರು ಗ್ರಹಗಳ ಉತ್ತಮ ಸಂಯೋಗ ಸಂಭವಿಸುತ್ತದೆ. ಆದರೆ ಜ್ಯೋತಿಷ್ಯದ ಪ್ರಕಾರ ಮೇಷ ರಾಶಿಯ ಅಧಿಪತಿ ಮಂಗಳ. ಬುಧ ಮತ್ತು ಮಂಗಳವನ್ನು ವಿರುದ್ಧ ಗ್ರಹಗಳೆಂದು ಹೇಳಲಾಗುತ್ತದೆ.

ಇದೀಗ ಈ ಗ್ರಹಗಳು ಮಾರ್ಚ್ 31 ರಿಂದ ಒಂದಾಗಲಿದೆ. ಇದರ ಪರಿಣಾಮಮಾರ್ಚ್ 31 ರಿಂದ ಏಪ್ರಿಲ್ 21 ರವರೆಗೆ ಕೆಲ ರಾಶಿಯ ಜನರು ಪಡಬಾರದ ಕಷ್ಟ ಪಡುತ್ತಾರೆ.

ಕುಂಭ ರಾಶಿ: ಕುಂಭ ರಾಶಿಯವರಿಗೆ ಬುಧ ಪ್ರವೇಶವು ಸಮಸ್ಯೆಗಳನ್ನು ತಂದೊಡ್ಡುತ್ತವೆ. ಈ ಸಮಯದಲ್ಲಿ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಆರ್ಥಿಕ ವಂಚನೆ ಸಂಭವಿಸಬಹುದು. . ತಾಯಿಯೊಂದಿಗೆ ಕೆಲವು ಭಿನ್ನಾಭಿಪ್ರಾಯಗಳು ಕೂಡ ಉಂಟಾಗಬಹುದು.

ವೃಶ್ಚಿಕ ರಾಶಿ: ಈ ಸಂದರ್ಭದಲ್ಲಿ ಈ ರಾಶಿಯ ಜನರಿಗೆ ಹಣಕಾಸಿನ ವಿಷಯಗಳಲ್ಲಿ ಭಾರೀ ಸಮಸ್ಯೆ ಎದುರಾಗಬಹುದು. ಸಾಲ ಮಾಡುವ ಪರಿಸ್ಥಿತಿಯೂ ಎದುರಾಗುತ್ತದೆ. ಮಾನಸಿಕ ಒತ್ತಡ ಕೂಡ ಎದುರಿಸಬೇಕಾಗುತ್ತದೆ.

ಕನ್ಯಾ ರಾಶಿ: ಈ ರಾಶಿಯ ಜನರು 20 ದಿನಗಳ ಕಾಲ ಹೂಡಿಕೆ ಮಾಡುವ ಧೈರ್ಯ ಮಾಡಬೇಡಿ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ಇಲ್ಲದಿದ್ದರೆ ಭಾರೀ ಪ್ರಮಾದ ಎದುರಾಗುವುದು.

ವೃಷಭ ರಾಶಿ: ಬುಧ ಗ್ರಹದ ಈ ಸಂಚಾರ ವೃಷಭ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಹಣದ ವ್ಯವಹಾರ ಮಾಡುವಾಗ ಜಾಗರೂಕರಾಗಿರಿ. ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ಯಾವುದೇ ವಿಷಯಗಳನ್ನು ಹೇಳದಿರುವುದು ಉತ್ತಮ. ಒಂದು ವೇಳೆ ಹೇಳಿದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಆಗುವ ಸಾಧ್ಯತೆ ಇದೆ.

ಮೇಷ ರಾಶಿ: ಮಾರ್ಚ್ 31 ರಿಂದ ಏಪ್ರಿಲ್ 21 ರವರೆಗೆ ಮೇಷ ರಾಶಿಯಲ್ಲಿಯೇ ಬುಧ ಸಂಚಾರ ಇರುವುದರಿಂದ ಸಮಸ್ಯೆಗಳು ಅತೀ ಎತ್ತರದ ಮಟ್ಟದಲ್ಲಿರುತ್ತದೆ. ಆರ್ಥಿಕ ಸಮಸ್ಯೆ, ಅನಾರೋಗ್ಯ, ಸಾಲಬಾಧೆ, ಒತ್ತಡ ಹೀಗೆ ಹಲವಾರು ಸಮಸ್ಯೆಗಳು ಕಾಡಬಹುದು.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ. )

ZEENEWS TRENDING STORIES

By continuing to use the site, you agree to the use of cookies. You can find out more by Tapping this link