ಗ್ರಹಗಳ `ರಾಜ` ಬುಧ ಗೋಚರದಿಂದ ಈ ರಾಶಿಯವರ ಬಾಳಲ್ಲಿ ಭಾಗ್ಯೋದಯ! ಧನ, ಯಶಸ್ಸು, ಕೀರ್ತಿ ಅರಸಿ ಬರುವುದು!
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜೂನ್ 7 ರಂದು ಅಂದರೆ ಇಂದು ವೃಷಭ ರಾಶಿಯನ್ನು ಬುಧ ಗ್ರಹ ಪ್ರವೇಶಿಸಲಿದೆ. ಜೂನ್ 24 ರವರೆಗೆ ಅದೇ ರಾಶಿಯಲ್ಲಿ ನೆಲೆಗೊಳ್ಳಲಿದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರುತ್ತದೆ. ಇಂದು ನಾವು ಶುಭವಾಗಲಿರುವ ರಾಶಿಗಳ ಬಗ್ಗೆ ತಿಳಿಯೋಣ.
ಮೇಷ ರಾಶಿ: ಬುಧ ಸಂಕ್ರಮಣದಿಂದಾಗಿ (ಬುಧ ಗೋಚರ 2023) ಹಣದ ಲಾಭವನ್ನು ಪಡೆಯುತ್ತೀರಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ. ಕೊಟ್ಟ ಹಣ ಇಂದು ನಿಮ್ಮ ಬಳಿಗೆ ಬರಲಿದೆ.
ವೃಷಭ ರಾಶಿ: ಪ್ರೇಮವಿವಾಹದ ಬಗ್ಗೆ ಆಲೋಚಿಸುತ್ತಿರುವವರ ಆಸೆ ಈಡೇರಬಹುದು. ವಿವಾಹಿತರಿಗೆ ಸಂತಾನ ಪ್ರಾಪ್ತಿಯಾಗುವ ಸಂಭವವಿದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರಭಾವ ಹೆಚ್ಚಾಗುತ್ತದೆ. ನೀವು ಸಮಾಜದಲ್ಲಿ ಕೆಲವು ಸ್ಥಾನಗಳನ್ನು ಪಡೆಯಬಹುದು.
ಸಿಂಹ ರಾಶಿ: ಬುಧ ಸಂಕ್ರಮಣದಿಂದ ಈ ರಾಶಿಯವರಿಗೆ ವಾಹನವನ್ನು ಖರೀದಿಸುವ ಭಾಗ್ಯವಿದೆ. ಆಸ್ತಿಗೆ ಸಂಬಂಧಿಸಿದ ವಿವಾದಗಳನ್ನು ಇತ್ಯರ್ಥಗೊಳಿಸಬಹುದು.
ಕನ್ಯಾ ರಾಶಿ: ಬುಧ ಗೋಚಾರದಿಂದ ಈ ರಾಶಿಯವರ ಅದೃಷ್ಟವು ಬೆಳಗಬಹುದು. ನಿಮ್ಮ ಮನಸ್ಸು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿರುತ್ತದೆ. ವಿದೇಶದಲ್ಲಿ ನೆಲೆಸುವ ಆಲೋಚನೆ ಇರುವವರ ಆಸೆ ಈಡೇರಬಹುದು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)